ಬೀದರ್(ಫೆ.05): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ನಾಟಕವೊಂದು ಪ್ರದರ್ಶನಗೊಂಡ ಘಟನೆ ನಗರದ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ನಡೆದಿದೆ.

"

ಶಾಹೀನ್ ಸಂಸ್ಥೆ ಪುಟ್ಟ ಪುಟ್ಟ ವಿದ್ಯಾರ್ಥಿಗಳಲ್ಲಿ ಪೌರತ್ವ ಕಾಯ್ದೆ ಬಗ್ಗೆ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಲಾಗಿದೆ. ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪೌರತ್ವ ವಿರೋಧಿ ನಡೆದ ನಾಟಕದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ಹಲವರು  ಆಕ್ರೋಶವ್ಯಕ್ತ ಪಡಿಸಿದ್ದಾರೆ. 

ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಬೀದರ್‌ಗೆ ಅಸಾದುದ್ದಿನ್ ಓವೈಸಿ ಭೇಟಿ

ಎಲ್ಲಾ ಸಮುದಾಯದ‌ ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಒಬ್ಬ ದೇಶದ ಪ್ರಧಾನಿಗಳ ವಿರುದ್ಧ ಮಕ್ಕಳಿಂದ ಈ ರೀತಿ ಹೇಳಿಸೋದು ಎಷ್ಟು ಸರಿ ಎಂದು ಶಿಕ್ಷಣ ಸಂಸ್ಥೆ ವಿರುದ್ಧ ಆಕ್ರೋಶ ಪಡಿಸಿದ್ದಾರೆ.