ನೌಕ​ರರ ಬಲಿಷ್ಠ ಹೋರಾ​ಟಕ್ಕೆ ಸರ್ಕಾರ ತಲೆ​ಬಾ​ಗ​ಬೇ​ಕಾ​ಗಿ​ದೆ: ಯಡಿ​ಯೂ​ರಪ್ಪ

ಬಸವಣ್ಣ ಹೇಳಿದಂತೆ ‘ಕಾಯಕವೇ ಕೈಲಾಸ’ ಎಂದು ನೌಕರರು ಸೇವೆ ಸಾರ್ವ​ಜ​ನಿ​ಕ​ರಿಗೆ ಸೇವೆ ಸಲ್ಲಿ​ಸಲಿ,  ಬೆಂಗಳೂರಿನಲ್ಲಿ ಸಂಘದ ಸುಸಜ್ಜಿತ ಕಟ್ಟಡ ನಿರ್ಮಿಸಲು 14 ಕೋಟಿ ಬಿಡುಗಡೆ ಮಾಡಿದ್ದೇನೆ, ಸರ್ಕಾರಿ ನೌಕರರಿಗಾಗಿ 24 ಆದೇಶ ಮಾಡಿದ್ದೇನೆ ಎಂದು ಹೇಳಿದ ಮಾಜಿ ಮುಖ್ಯ​ಮಂತ್ರಿ ಬಿಎ​ಸ್‌ವೈ. 

Former CM BS Yediyurappa Talks Over Government Employees grg

ಶಿಕಾರಿಪುರ(ಮಾ.11):  ರಾಜ್ಯ ಸರ್ಕಾರಿ ನೌಕರರ ಸಂಘಟನೆ ಅತ್ಯಂತ ಬಲಿಷ್ಠವಾಗಿದ್ದು, ಸಾರ್ವಜನಿಕರಿಗೆ ಸರ್ಕಾರದ ಯೋಜನೆ ತಲುಪಿಸುವಲ್ಲಿ ನೌಕರರ ಪಾತ್ರ ಬಹುಮುಖ್ಯವಾಗಿದೆ. ನೌಕರರು ಜನತೆ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿದಾಗ ಮಾತ್ರ ನೌಕರರ ಸಂಘಕ್ಕೆ ಹೆಚ್ಚಿನ ಗೌರವ ದೊರೆಯಲಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎ​ಸ್‌.ಯಡಿಯೂರಪ್ಪ ​ಹೇ​ಳಿದರು. ಶುಕ್ರವಾರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ವತಿಯಿಂದ ನಡೆದ ಸರ್ಕಾರಿ ನೌಕರರ ಸಮ್ಮೇಳನ, ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರ, ಮಹಿಳಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾ​ಧ್ಯಕ್ಷ ಷಡ​ಕ್ಷರಿ ಅವರು ನೌಕರರ ಹಲವು ಕಾಲದ ಬೇಡಿಕೆ ಈಡೇರುವವರಿಗೂ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಇತ್ತೀಚೆಗೆ ಪ್ರತಿಭಟನೆ, ಸತ್ಯಾಗ್ರಹವನ್ನು ಹ​ಮ್ಮಿ​ಕೊಂಡಿ​ದ್ದಾರೆ. ಅಗತ್ಯವಿದ್ದಲ್ಲಿ ರಾಜ್ಯಾದ್ಯಂತ ಹೋರಾಟ, ಸತ್ಯಾಗ್ರಹ ಮಾಡಿ ದೊರೆಯಬೇಕಾದ ನ್ಯಾಯಯುತ ಪರಿಹಾರ ಪಡೆದುಕೊಳ್ಳುತ್ತೇನೆ ಎಂದು ಗಟ್ಟಿಧ್ವನಿಯಲ್ಲಿ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಅನಿವಾರ್ಯವಾಗಿ ನೌಕರರ ಬೇಡಿಕೆಗಳಿಗೆ ಹಾಗೂ ರಾಜ್ಯಾಧ್ಯಕ್ಷರ ಒತ್ತಾಯಕ್ಕೆ ತಲೆಬಾಗಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾದವ​ರು ಷಡಾಕ್ಷರಿ ರೀತಿಯಲ್ಲಿ ಇರಬೇಕು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ

ಅಂದಿನ ಕೆಲಸ ಆ ದಿನವೇ ಮಾಡಿ:

ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಘ ಸದೃಢವಾಗಿ ಬೆಳೆಯುತ್ತಿದೆ. ಅತ್ಯಂತ ದೊಡ್ಡ ಸಂಘಟನೆಯ ಪರವಾಗಿ ಸರ್ಕಾರ ಎಂದಿಗೂ ನಿಮ್ಮ ಜತೆ ಇದೆ. ನಾಡಿನಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಮೂಲ್ಯವಾಗಿದೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂದಿಸಿ, ನಾಳೆ ಬಾ ಎನ್ನದೇ ಅಂದಿನ ಕೆಲಸ ಅಂದೇ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿದಾಗ ಮಾತ್ರ ನೌಕರರ ಸಂಘಕ್ಕೆ ಹೆಚ್ಚಿನ ಗೌರವ ದೊರೆಯಲಿದೆ. ಸಾರ್ವಜನಿಕರ ಕೆಲಸವನ್ನು ಆದ್ಯತೆ ನೀಡಿ ಕೂಡಲೇ ಮಾಡಬೇಕು. ನೌಕರರು ಮುಖ್ಯವಾಗಿ ಸರ್ಕಾರದ ಸೇವೆ ಪಡೆಯಲು ಸಾರ್ವಜನಿಕರ ಅಳಲನ್ನು ಸರ್ಕಾರಕ್ಕೆ ತಲುಪಿಸುವ ಜತೆಗೆ ಬಡವರ ಪರವಾಗಿ ನಿಂತಾಗ ಮಾತ್ರ ಸೇವೆ ಸಾರ್ಥಕವಾಗಲಿದೆ. 12ನೇ ಶತಮಾನದಲ್ಲಿ ಬಸವಣ್ಣ ಹೇಳಿದಂತೆ ‘ಕಾಯಕವೇ ಕೈಲಾಸ’ ಎಂದು ನೌಕರರು ಸೇವೆಯನ್ನು ಸಲ್ಲಿಸುವಂತೆ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ನೌಕರರ ಹಿತಕ್ಕಾಗಿ ಎಲ್ಲ ರೀತಿಯಲ್ಲಿ ಸ್ಪಂದಿಸಿದ ಸಂತೃಪ್ತಿಯನ್ನು ಹೊಂದಿದ್ದೇನೆ. ಬೆಂಗಳೂರಿನಲ್ಲಿ ಸಂಘದ ಸುಸಜ್ಜಿತ ಕಟ್ಟಡ ನಿರ್ಮಿಸಲು .14 ಕೋಟಿ ಬಿಡುಗಡೆ ಮಾಡಿದ್ದು, ಸರ್ಕಾರಿ ನೌಕರರಿಗಾಗಿ 24 ಆದೇಶ ಮಾಡಿದ್ದೇನೆ. ಹಬ್ಬದ ಮುಂಗಡ .10ರಿಂದ .25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ದಿನದ ವೇತನ ನೀಡಿ ನೌಕರರು ಸ್ಪಂದಿಸಿದ್ದಾರೆ. ಕುಟುಂಬದ ಹಿತಕಾಪಾಡಲು ಉಚಿತ ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಜತೆಗೆ ಹತ್ತುಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದರು.

7ನೇ ವೇತನ ಆಯೋಗ ಜಾರಿ​ಗೊ​ಳಿ​ಸಿ:

ರಾಜ್ಯ ಸರ್ಕಾರಿ ನೌಕರರ ಹಾಗೂ ತಾಲೂಕಿನ ಜನತೆ ಪ್ರೀತಿ, ಸಹಕಾರ ಆಶೀರ್ವಾದದಿಂದ 4 ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಲು ದೊರೆತ ಅವಕಾಶ ಸೌಭಾಗ್ಯ ಎಂದು ಭಾವಿಸಿದ್ದೇನೆ. ಪಿಎಂ ನೇತೃತ್ವದಲ್ಲಿ ದೇಶ ಜಗತು ಅಚ್ಚರಿಪಡುವ ರೀತಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ರೈತ, ಬಡವ, ಕೂಲಿ ಕಾರ್ಮಿಕ ನೆಮ್ಮದಿಯಿಂದ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಧ್ಯೇಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಟ್ಟಕಾರ್ಯಕ್ರಮ ಜಾರಿಗೆ ತಂದಿದೆ. ನೌಕರರ ಹಲವು ದಿನಗಳ ಬೇಡಿಕೆಯಾಗಿದ್ದ 7ನೇ ವೇತನ ಆಯೋ​ಗಕ್ಕೆ ಇತ್ತೀಚೆಗೆ ಸಿಎಂ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ನೌಕರರ ಹೋರಾಟದ ಜತೆಗೆ ಷಡಾಕ್ಷರಿ ಗಟ್ಟಿನಿಲವು ಫಲವಾಗಿ ಶೇ.17 ಮಧÜ್ಯಂತರ ಪರಿಹಾರ ತಲುಪುವಂತೆ ಮಾಡಿದ್ದಾರೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವ ಜತೆಗೆ 7ನೇ ವೇತನ ಆಯೋಗ ಜಾರಿಗೆ ಮುಂದಾಗಬೇಕು ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಿದ್ದು, ಎಲ್ಲರ ಶ್ರಮದ ಹಿಂದೆ ಸರ್ಕಾರಿ ನೌಕರರ ಶ್ರಮವೂ ಅಪಾರವಾಗಿದೆ. ತಾಲೂಕಿಗೆ ವರ್ಗವಾಗಿ ಬರಲು ಹಿಂದೇಟು ಹಾಕುವ ನೌಕರರು ಬಂದ ನಂತರದಲ್ಲಿ ವಾಪಾಸು ಹೋಗಲು ಹಿಂದೇಟು ಹಾಕುತ್ತಾರೆ ಎಂಬ ವಾತಾವರಣ ನಿರ್ಮಾಣವಾಗಿದೆ. ಶಾಸಕಾಂಗ ಕಾರ್ಯಾಂಗ ಕೈ ಜೋಡಿಸಿದಾಗ ನಿರ್ಮಾಣವಾಗುವ ಉತ್ತಮ ಅಭಿವೃದ್ಧಿ ಕಾರ್ಯಕ್ಕೆ ತಾಲೂಕು ಸಾಕ್ಷಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ನೌಕರರ ಪರವಾಗಿ ಏಕಕಾಲದಲ್ಲಿ 24 ಆದೇಶ ಮಾಡಿದ್ದು, 40 ತಿಂಗಳ ಬೇಡಿಕೆಯನ್ನು 2 ತಿಂಗಳಲ್ಲಿ ಆದೇಶ ಮಾಡಿದ್ದಾರೆ. ವೇತನ ಸಹಿತ ಶಿಶುಪಾಲನಾ ರಜೆ ಹಬ್ಬದ ಬೋನಸ್‌ ಹೆಚ್ಚಳ, .50 ಲಕ್ಷವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಸಹಿತ ಹಲವು ಸೌಲಭ್ಯ ಕಲ್ಪಿಸಿದ್ದಾರೆ. ನೌಕರರ ಪರವಾಗಿ ಇರುವವರನ್ನು ಕುಳಿತಲ್ಲಿ ನಿಂತಲ್ಲಿ ಚರ್ಚಿಸಿ, ಪ್ರಶಂಸಿಸುವುದು ಕರ್ತವ್ಯ ಎಂದು ತಿಳಿಸಿದರು.

ಬಿ.ವೈ. ವಿಜಯೇಂದ್ರ ಮಾತನಾಡಿ, ಸರ್ಕಾರಿ ನೌಕರರಿಗೂ ಯಡಿಯೂರಪ್ಪನವರಿಗೂ ಅವಿನಾಭಾವ ಸಂಬಂಧವಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ನೌಕರರ ರೀತಿ ಯಡಿಯೂರಪ್ಪ ಅವರು ನಾಡಿನ ಕಲ್ಯಾಣಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ನೌಕರರ ಜತೆಗೆ ಜನತೆ ಸಮಸ್ಯೆ ಬಗ್ಗೆ ಕೂಡಲೇ ಸ್ಪಂದಿಸುವ ಯಡಿಯೂರಪ್ಪ ಅವರು ಮಾತೃಹೃದಯದ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದು, ಅವರ ಬಳಿ ಸಮಸ್ಯೆಗೆ ಪರಿಹಾರ ಶಾಶ್ವತ ಎಂದು ಜನತೆ ಭರವಸೆ ಹೊಂದಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ: ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರಸೇನಾನಿ: ಬಿಎ​ಸ್‌​ವೈ

ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್‌.ಡಿ. ಮಧುಕೇಶವ ಅಧ್ಯಕ್ಷತೆ ವಹಿಸಿದ್ದರು. ಗಣ್ಯರನ್ನು ಸನ್ಮಾನಿಸಲಾಯಿತು. ಖ್ಯಾತ ಚಿಂತಕ, ವಾಗ್ಮಿ ಡಾ.ಗುರುರಾಜ ಕರ್ಜಗಿ ಅವರಿಂದ ‘ಪ್ರಜಾಸ್ನೇಹಿ ಆಡಳಿತ ಮತ್ತು ಗುಣಾತ್ಮಕ ಶಿಕ್ಷಣ’ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು.

ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಚ್‌.ಟಿ. ಬಳಿಗಾರ್‌, ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಪುರಸಭಾಧ್ಯಕ್ಷೆ ರೇಖಾಬಾಯಿ, ನೌಕರರ ರಾಜ್ಯ ಸಂಘದ ಉಪಾಧ್ಯಕ್ಷ ಮೋಹನ್‌ಕುಮಾರ್‌, ಸಿದ್ದಬಸಪ್ಪ, ಸುಮತಿ, ತಾಲೂಕು ಘಟಕದ ಬಸನಗೌಡ ಕೋಣ್ತಿ, ರಾಮಚಂದ್ರ, ರೇಣುಕಪ್ಪ, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios