ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ

‘ಕೈಲಾಗದವನು ಮೈ ಪರಚಿಕೊಂಡ’ ಎನ್ನುವಂತೆ ಶಾಸಕ ಕೆ.ಎಸ್‌.ಈಶ್ವರಪ್ಪ ಕಾಂಗ್ರೆಸ್‌ ಸತ್ತುಹೋಗಿದೆ ಎಂದಿದ್ದಾರೆ. ಕಾಂಗ್ರೆಸ್‌ ಎಂದಿಗೂ ಸಾಯುವುದಿಲ್ಲ. ಈಶ್ವರಪ್ಪನವರನ್ನೇ ಈ ಬಾರಿ ಜನರು ಮನೆಗೆ ಕಳಿಸುತ್ತಾರೆ ಎಂದು ಕೆಪಿಸಿಸಿ ಸದಸ್ಯ ವೈ.ಎಚ್‌.ನಾಗರಾಜ್‌ ಟೀಕಿಸಿದರು.

Congress leader outraged against ks eshwarappa at shivamogga rav

ಶಿವಮೊಗ್ಗ (ಮಾ.10) : ‘ಕೈಲಾಗದವನು ಮೈ ಪರಚಿಕೊಂಡ’ ಎನ್ನುವಂತೆ ಶಾಸಕ ಕೆ.ಎಸ್‌.ಈಶ್ವರಪ್ಪ ಕಾಂಗ್ರೆಸ್‌ ಸತ್ತುಹೋಗಿದೆ ಎಂದಿದ್ದಾರೆ. ಕಾಂಗ್ರೆಸ್‌ ಎಂದಿಗೂ ಸಾಯುವುದಿಲ್ಲ. ಈಶ್ವರಪ್ಪನವರನ್ನೇ ಈ ಬಾರಿ ಜನರು ಮನೆಗೆ ಕಳಿಸುತ್ತಾರೆ ಎಂದು ಕೆಪಿಸಿಸಿ ಸದಸ್ಯ ವೈ.ಎಚ್‌.ನಾಗರಾಜ್‌ ಟೀಕಿಸಿದರು.

ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪ ಅವರಿಗೆ ಕಾಂಗ್ರೆಸ್‌(Congress party) ಇತಿಹಾಸ ಗೊತ್ತಿಲ್ಲ. ಇತಿಹಾಸವನ್ನು ತಿರುಚುವ ಅವರಿಗೆ ಹಪಾಹಪಿತನ ಹೆಚ್ಚಾಗಿದೆ. ಕಾಂಗ್ರೆಸ್‌ ಟೀಕಿಸಿದರೆ ಮುಖಂಡರಿಗೆ ಬೈದರೆ ಮಾತ್ರ ತಮ್ಮ ಬೇಳೆ ಬೇಯುತ್ತದೆ ಎಂದುಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.

ಭ್ರಷ್ಟಾಚಾರದ ವಿರುದ್ಧ ಬಂದ್‌ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇದ್ಯಾ? : ಈಶ್ವರಪ್ಪ

ಕಾಂಗ್ರೆಸ್‌ಗೆ ಶತಮಾನದ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಿದೆ. ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ವಿದ್ಯುನ್ಮಾನ ಕ್ರಾಂತಿ, ಸಾಮಾಜಿಕ ಕ್ರಾಂತಿಯ ಮೂಲಕ ಭವ್ಯ ಭಾರತವನ್ನೇ ಕಟ್ಟಿದೆ. ಈಶ್ವರಪ್ಪ ಅದನ್ನು ಮರೆತಂತಿದೆ. ಕಾಂಗ್ರೆಸ್‌ ಬಡವರ ಪಕ್ಷವಾಗಿದೆ. ಅದು ಇಂದಿಗೂ ಎಂದಿಗೂ ಜೀವಂತವಾಗಿರುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಎಂದೂ ಸಾವು ಬರುವುದಿಲ್ಲ ಎಂದು ಹೇಳಿದರು.

ಶಿವಮೊಗ್ಗ(Shivamogga)ದಲ್ಲಿ ಆಗಬೇಕಾದ ಕೆಲಸಗಳು ರಾಶಿ ರಾಶಿ ಇವೆ. ಆದರೂ ಹೊಸದಾಗಿ ಜನರ ನಡುವೆ ಕಾಣಿಸಿಕೊಳ್ಳಬೇಕೆಂದು ಇಲ್ಲದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಈಶ್ವರಪ್ಪ ಅವರಿಗೆ ನಿಜವಾಗಿಯೂ ಪಕ್ಷದ ಮೇಲೆ ಅಭಿಮಾನವಿದ್ದರೆ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಕಟಿಸಿದಂತೆ ತಾವು ಚುನಾವಣೆಗೆ ನಿಲ್ಲುವುದಿಲ್ಲ, ಅದರ ಬದಲು ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಲಿ. ಅದನ್ನು ಬಿಟ್ಟು ತಮಗೇ ಟಿಕೆಟ್‌ ಕೊಡಿ ಎಂದು ಹಠ ಹಿಡಿಯುತ್ತಿರುವ ಅವರ ಧೋರಣೆ ಸರಿಯಲ್ಲ. ಶಿವಮೊಗ್ಗದ ನೆಮ್ಮದಿಗಾಗಿಯಾದರೂ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳಿತು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎಂ.ಪಿ.ದಿವಾಕರ್‌, ರುದ್ರೇಶ್‌ ಇದ್ದರು

ಮಹಾಪುರುಷರ ತ್ಯಾಗದಿಂದ ಭಾರತ ಸಂಸ್ಕೃತಿ, ಸಂಸ್ಕಾರ ವಿಶ್ವಮಾನ್ಯ: ಈಶ್ವರಪ್ಪ

Latest Videos
Follow Us:
Download App:
  • android
  • ios