Mysuru: ಯುವತಿ ಬಲಿ ಬೆನ್ನಲ್ಲೇ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಲು ಹತ್ತು ತಂಡ ರಚಿಸಿದ ಅರಣ್ಯ ಇಲಾಖೆ

ಮೈಸೂರು ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ನಿಲುತ್ತಲ್ಲೇ ಇಲ್ಲ. ಅದರಲ್ಲೂ ಟಿ ನರಸೀಪುರದಲ್ಲಿ  ತಿಂಗಳ ಅಂತರದಲ್ಲಿ ಚಿರತೆ ಇಬ್ಬರನ್ನ ಬಲಿ ಪಡೆದಿದ್ದು, ಇದೀಗ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆ ಕೊಲಲ್ಲು ಹುಡುಕಾಟ ಆರಂಭಿಸಿದ್ದಾರೆ. ಕಂಡಲ್ಲಿ ಗುಂಡಿಕ್ಕಲು ಮುಂದಾಗಿದ್ದಾರೆ.

forest department formed a  team  to Shoot at Sight for human Eating Leopard in T narasipura gow

ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಮೈಸೂರು (ಡಿ.2): ಮೈಸೂರು ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ನಿಲುತ್ತಲ್ಲೇ ಇಲ್ಲ. ಅದರಲ್ಲೂ ಟಿ ನರಸೀಪುರದಲ್ಲಿ ಆರಂಭವಾಗಿರುವ ಚಿರತೆ ಹಾವಳಿ ಜನರ ನಿದ್ದೆ ಗೆಡಿಸಿದೆ. ತಿಂಗಳ ಅಂತರದಲ್ಲಿ ಚಿರತೆ ಇಬ್ಬರನ್ನ ಬಲಿ ಪಡೆದಿದ್ದು, ಇದೀಗ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆ ಕೊಲಲ್ಲು ಹುಡುಕಾಟ ಆರಂಭಿಸಿದ್ದಾರೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ನಡೆದ ಚಿರತೆ ದಾಳಿಗೆ ಮೇಘನ ಎಂಬ ಯುವತಿ ಬಲಿಯಾಗಿದ್ದಾಳೆ. ನಿನ್ನೆ ಸಂಜೆ ಮನೆಯಲ್ಲಿದ್ದ ಮೇಘನಾ ತಟ್ಟೆ ತೊಳೆಯೊಕೆ ಅಂಥಾ ಮನೆ ಹಿಂಬಾಗಕ್ಕೆ ಬಂದಿದ್ಧಾಳೆ. ಈ ವೇಳೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಚಿರತೆ ಏಕಾಏಕಿ ಚಿರತೆ ಮೇಘಾನಳ ಮೇಳೆ ದಾಳಿ ಮಾಡಿ ಆಕೆಯನ್ನ 20 ಅಡಿ ದೂರದ ತನಕ್ಕೆ ಎಳೆದು ಹೋಗಿದೆ ಕತ್ತಿನ ಬಾಗವನ್ನ ಗಂಭೀರವಾಗಿ ಗಾಯಗೊಳಿಸದೆ. ಈ ವೇಳೆ ಸ್ಥಳಕ್ಕೆ ಬಂದ ಮೇಘನಳಾ ತಾಯಿ ರಾಜ್ಜಮಣಿ ಚಿರತೆ ಮಗಳ ಮೇಲೆ  ದಾಳಿ ಮಾಡುತ್ತಿರುವುದನ್ನ ನೋಡಿ ಜೋರಾಗಿ ಕೂಗಿ ಕೊಂಡಿದ್ದಾಳೆ. ಸ್ಥಳಕ್ಕೆ ಅಕ್ಕ ಪಕ್ಕದ ಮನೆಯವರು ಆಗಮಿಸಿ ತೀವ್ರ ರಕ್ತಸಿಕ್ತವಾಗಿ ಬಿದಿದ್ದ ಮೇಘನಾಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೇಘನಾ ಮೃತ ಪಟ್ಟಿದ್ದಾಳೆ.

ಇನ್ನೂ ಮೇಘನಾ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಿದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.  ಶಾಸಕ ಅಶ್ವಿನ್ ಕುಮಾರ್ ಸಹ ಗ್ರಾಮಸ್ಥರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ತಡ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ 7.5 ಲಕ್ಷ ಪರಿಹಾರ ಕೊಡುವ ಭರವಸೆ ನೀಡಿ ಸ್ಥಳದಲ್ಲೇ 5 ಲಕ್ಷ ಪರಿಹಾರ ನೀಡಿದ್ದಾರೆ. ಮನೆಯವರಿಗೆ ಅರೆಕಾಲಿಕ  ಉದ್ಯೋಗ ನೀಡಿ 5 ವರ್ಷಗಳ‌ ಕಾಲ ಪ್ರತಿತಿಂಗಳು ಎರೆಡು ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ರು. ಜೊತೆಗೆ ಕಂಡಲ್ಲಿ ಗುಂಡು ಹಾರಿಸಿ ಚಿರತೆ ಕೊಲ್ಲುವ ಆದೇಶ ಮಾಡಿದ್ರು.

ಚಿರತೆ ದಾಳಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆ ಸೆರೆಗೆ 10 ತಂಡ ರಚಿಸಿದ್ದಾರೆ. ಒಂದೊಂದು ತಂಡದಲ್ಲಿ ಶಾರ್ಟ್ ಶೂಟರ್ಸ್ ಸೇರಿಂದಂತೆ 7 ಜನರು ತಂಡದಲ್ಲಿದ್ದು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತು ಆಧಾರಿಸಿ ಚಿರತೆ ವಯಸ್ಸ ಮತ್ತು ಇನ್ನಿತರ ಮಾಹಿತಿ ಕಲೆ ಹಾಕುತ್ತಿದ್ದಾರೆ. 

 

ಮೈಸೂರು: ಚಿರತೆ ದಾಳಿಗೆ ಯುವತಿ ಸಾವು, ಒಂದೇ ತಿಂಗಳಲ್ಲಿ ಇಬ್ಬರು ಬಲಿ, ಹೆಚ್ಚಿದ ಜನಾಕ್ರೋಶ

ತಿಂಗಳ ಅಂತರದಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು ಹಿಡಿದು ಸುತ್ತಾಡುತ್ತಿದ್ದಾರೆ. ಈ ಕಾರ್ಯಾಚರಣೆಯನ್ನ ತಾರ್ಕಿಕ ಅಂತ್ಯ ತೆಗೆದುಕೊಂಡು ಹೋಗಿ ಚಿರೆತೆ ಸೆರೆಹಿಡಿಯುತ್ತಾರ ಕಾದು ನೋಡಬೇಕಾಗಿದೆ.

Bengaluru: ಸಿಲಿಕಾನ್‌ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ

ಬೆಂಗಳೂರಿನಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ
ರಾಜ್ಯದ ರಾಜಧಾನಿ ಬೆಂಗಳೂರಿನ ಜನರಿಗೆ ಚಿರತೆ ಕಾಟ ಶುರುವಾಗಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಂಗೇರಿ ಹಾಗೂ ಚಿಕ್ಕಜಾಲ ಸುತ್ತಮುತ್ತ ಪ್ರತ್ಯೇಕವಾಗಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಈ ನಡುವೆ, ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ ಹಿಂಭಾಗದ ಗೇಟ್‌ ಬಳಿ ಗುರುವಾರ ಮುಂಜಾನೆ ಚಿರತೆ ದಾಳಿಗೆ ಬಲಿಯಾದ ಜಿಂಕೆಯ ಮೃತ ದೇಹ ಪತ್ತೆಯಾಗಿದೆ. ಇದರಿಂದ ಜನ ಭಯಭೀತಗೊಂಡಿದ್ದಾರೆ. ಈಗಾಗಲೇ ಚಿರತೆಗಳನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಇರಿಸಲಾಗಿದೆ. ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ಚಿರತೆ ಪತ್ತೆಯಾದ ಸ್ಥಳಗಳಲ್ಲಿ ಗಸ್ತಿಗೆ ನಿಯೋಜಿಸಲಾಗಿದೆ. ಜತೆಗೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ರಾತ್ರಿ ವೇಳೆ, ಬೆಳಗಿನ ಜಾವ ಒಂಟಿಯಾಗಿ ಓಡಾಟ ನಡೆಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Latest Videos
Follow Us:
Download App:
  • android
  • ios