ಹಾಸನ [ಜ.04]: ಮಲೆನಾಡಿನಲ್ಲಿ ದಟ್ಟ ಮಂಜು ಕವಿದಿದ್ದು,  ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. 

ಬೆಂಗಳೂರಿನಿಂದ -ಮಂಗಳೂರಿಗೆ  ಸಕಲೇಶಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. 

ಮಂಜು ಕವಿದು ಸುಂದರ ವಾತಾವರಣದಲ್ಲಿ  ಸಂಚರಿಸುವ ವಾಹನಗಳು ಮಾತ್ರ ಕಾಣಿಸುತ್ತಿಲ್ಲ. ವಾಹನಗಳು ಮುಂದೆ ಚಲಿಸಲಾಗದೇ ಲಾರಿ ಚಾಲಕರು ರಸ್ತೆ ಬದಿಯಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. 

ಆದರೆ ಸಂಚರಿಸುವಾದ ಪ್ರಯಾಸದಿಂದಲೇ ಸಂಚರಿಸಬೇಕಿದೆ. ಕಳೆದ ಎರಡು ದಿನಗಳಿಂದಲೂ ಪ್ರತಿಕೂಲ ವಾತಾವರಣವಿದ್ದು, ವಾಹನ ಸವಾರರ ಪರದಾಟ ಮುಂದುವರಿದಿದೆ. 

ಶಿರಾಡಿ ಘಾಟ್‌ನಲ್ಲಿ ನಿರ್ಮಾಣವಾಗಲಿದೆ ಸುರಂಗ ಮಾರ್ಗ..

ಕಳೆದ ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಸಂದರ್ಭದಲ್ಲಿ ಶಿರಾಡಿ ಘಾಟಿಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಲವು ದಿನಗಳ ಕಾಲ ರಸ್ತೆ ಬಂದ್ ಮಾಡಲಾಗಿತ್ತು. ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಚಳಿಗಾಲದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಮಂಜು ಕವಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.