ಕಲುಷಿತ ಕುಡಿಯುವ ನೀರಿಗೆ ಇನ್ನೆಷ್ಟು ಬಲಿಯಾಗಬೇಕು? 5 ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಕೊಪ್ಪಳ ಜಿಲ್ಲಾಡಳಿತ!

700 ಕಂದಾಯ ಗ್ರಾಮಗಳಿರುವ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಕುಡಿಯುವ ನೀರಿಗಾಗಿ ಸುಮಾರು .2500 ಕೋಟಿಗೂ ಅಧಿಕ ಹಣ ಸುರಿಯಲಾಗಿದೆ. ಆದರೂ ಕುಡಿಯುವ ನೀರಿನ ಗೋಳು ತಪ್ಪಿಲ್ಲ. ಫೆä್ಲೕರೈಡ್‌ ನೀರು, ಕೆರೆ ನೀರು ಕುಡಿದೇ ಜನರು ಬದುಕುತ್ತಿದ್ದಾರೆ. ಕಲುಷಿತ ನೀರಿನಿಂದಲೇ ನಾಲ್ವರು ಮೃತಪಟ್ಟಿದ್ದಾರೆ.

Five died after drinking contaminated water Koppal district administration was negligent rav

ಸೋಮರಡ್ಡಿ ಅಳವಂಡಿ

ಕೊಪ್ಪಳ (ಜು.1) : 700 ಕಂದಾಯ ಗ್ರಾಮಗಳಿರುವ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಕುಡಿಯುವ ನೀರಿಗಾಗಿ ಸುಮಾರು .2500 ಕೋಟಿಗೂ ಅಧಿಕ ಹಣ ಸುರಿಯಲಾಗಿದೆ. ಆದರೂ ಕುಡಿಯುವ ನೀರಿನ ಗೋಳು ತಪ್ಪಿಲ್ಲ. ಫೆä್ಲೕರೈಡ್‌ ನೀರು, ಕೆರೆ ನೀರು ಕುಡಿದೇ ಜನರು ಬದುಕುತ್ತಿದ್ದಾರೆ. ಕಲುಷಿತ ನೀರಿನಿಂದಲೇ ನಾಲ್ವರು ಮೃತಪಟ್ಟಿದ್ದಾರೆ.

ಹಾಗಾದರೆ, ಇನ್ನೆಷ್ಟುಬಲಿ ನೀಡಬೇಕು? ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇನ್ನೆಷ್ಟುಹಣ ಬೇಕು? ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಲ್ಪ ಇತ್ತ ಗಮನ ಹರಿಸಿ, ಕೋಟಿ ಕೋಟಿ ಹಣ ನೀರಿನಂತೆ ಖರ್ಚಾದರೂ ಮುಗಿಯದ ಹಾಗೂ ಕುಡಿಯುವ ನೀರು ಪೂರೈಕೆ ಮಾಡದ ಈ ಯೋಜನೆಗಳ ಮೇಲೆ ಒಂದಷ್ಟುಕಣ್ಣಾಡಿಸಬೇಕಾಗಿದೆ.

ಪ್ರತಿ ಗ್ರಾಮಕ್ಕೂ ಲೆಕ್ಕ ಹಾಕಿದರೆ ಕಳೆದ 15 ವರ್ಷಗಳಲ್ಲಿ ಬರೋಬ್ಬರಿ .3 ಕೋಟಿ ಕುಡಿಯುವ ನೀರಿಗೆ ವೆಚ್ಚವಾಗಿದೆ. ಇದು ಕೇವಲ ಬಹುಗ್ರಾಮ ಕುಡಿಯುವ ನೀರಿಗಾಗಿ ಮಾಡಲಾಗಿರುವ ವೆಚ್ಚ. ವಾಸ್ತವದಲ್ಲಿ ಇತರೆ ಯೋಜನೆಗಳಡಿ, ಬೇಸಿಗೆ ಸಮಯದಲ್ಲಿ ಉಂಟಾಗುವ ಸಮಸ್ಯೆಗಾಗಿ ಸೇರಿದಂತೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ವ್ಯಾಪ್ತಿಗೆ ಇಲ್ಲದ ಗ್ರಾಮಗಳಿಗೆ ಹಾಗೂ ನಗರ ಪ್ರದೇಶಕ್ಕೆ ಮಾಡಿರುವ ಕುಡಿಯವ ನೀರು ಯೋಜನೆಯ ಲೆಕ್ಕಾಚಾರ ಬೇರೆಯದೇ ಇದೆ. ಅದನ್ನು ಸೇರಿಸಿದರೆ .5-6 ಸಾವಿರ ಕೋಟಿ ಆಗುತ್ತದೆ.

ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು: ಇಬ್ಬರು ಪಿಡಿಒಗಳನ್ನು ಅಮಾನತು ಮಾಡಿದ ಸರ್ಕಾರ

ಕುಷ್ಟಗಿ, ಯಲಬುರ್ಗಾ ತಾಲೂಕಿನ ಸುಮಾರು 323 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ .700 ಕೋಟಿ ವೆಚ್ಚದ ಡಿಬಿಒಟಿ ಯೋಜನೆ ಜಾರಿ ಮಾಡಲಾಗಿದೆ. ಬಹುತೇಕ ಹಣ ವ್ಯಯವಾಗಿದೆ. ಜಿಪಂ ನೀಡುವ ಲೆಕ್ಕಾಚಾರದ ಪ್ರಕಾರ ಕುಷ್ಟಗಿ ತಾಲೂಕಿನ 155 ಗ್ರಾಮಗಳು ಹಾಗೂ ಯಲಬುರ್ಗಾ ತಾಲೂಕಿನ 140 ಗ್ರಾಮಗಳಿಗೆ ಕೃಷ್ಣಾದಿಂದ ಕುಡಿಯುವ ನೀರು ಒದಗಿಸಲಾಗಿದೆ ಎಂದು ವರದಿ ಮಾಡಿದೆ. ಅಚ್ಚರಿ ಎಂದರೆ ಹತ್ತಾರು ಗ್ರಾಮಗಳಿಗೂ ಇನ್ನೂ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈಗಲೂ ಕೆರೆ ನೀರು ಇಲ್ಲ, ಬೋರ್‌ವೆಲ್‌ ನೀರನ್ನೇ ಆಶ್ರಯಿಸಿದ್ದಾರೆ.

ದೋಟಿಹಾಳ, ಬಿಜಕಲ್‌ ಸೇರಿದಂತೆ ಯಾವೊಂದು ಗ್ರಾಮಗಳಲ್ಲೂ ಈ ಯೋಜನೆಯ ಕುಡಿಯುವ ನೀರು ಪೂರೈಕೆಯಾಗಿಲ್ಲ. ಜೂನ್‌ ತಿಂಗಳ ಮೊದಲ ವಾರ ಚೆಕ್‌ ಮಾಡುವ ಉದ್ದೇಶದಿಂದ ಮಾತ್ರ ಪೂರೈಕೆ ಮಾಡಿ, ನಂತರ ಮತ್ತೆ ಬಂದ್‌ ಮಾಡಲಾಗಿದೆ. ಇದು ವಾಸ್ತವ. ಆದರೆ ದಾಖಲೆಯಲ್ಲಿ 295 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಅಚ್ಚರಿಯಾದರೂ ಸತ್ಯ.

ಕೊಪ್ಪಳ, ಗಂಗಾವತಿ ತಾಲೂಕಿನಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ 9 ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕಳೆದ 15 ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗಿವೆ. ನೀರು ಪೂರೈಕೆಯಾಗುವುದು ಅಷ್ಟಕಷ್ಟೇ. ಸುಮಾರು 300 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಈ 9 ಯೋಜನೆಗಳೂ ಕಾಗದದಲ್ಲಿ ಮಾತ್ರ ಬಹುತೇಕ ಪೂರ್ಣಗೊಂಡಿವೆ. ಆದರೆ, ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

ಮುಂಡರಗಿ ಸೇರಿ 84 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸುಮಾರು .65 ಕೋಟಿ ಯೋಜನೆ ಪೂರ್ಣಗೊಂಡರೂ ನೀರು ಬಂದಿಲ್ಲ. ಕುಡಿಯುವ ನೀರು ಪೂರೈಕೆ ಮಾಡುವ ಪಂಪ್‌ಸೆಟ್‌ನ ಪೈಪ್‌ಗಳು ಒಡೆದು ಹೋಗಿದ್ದರಿಂದ ಯೋಜನೆ ಮಣ್ಣುಪಾಲಾಗಿದೆ. ಈಗ ಅದರ ಡಿಸೈನ್‌ ಬದಲಾಯಿಸಿ ಜಾರಿ ಮಾಡಲು ಪುನಃ .25 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಕಸರತ್ತು ನಡೆದಿದೆ. ಇತ್ತ ಜನರು ಅಶುದ್ಧ ನೀರು ಕುಡಿದು ಪ್ರಾಣ ತೆರುತ್ತಿದ್ದಾರೆ.

ಕೊಪ್ಪಳ: ಕಲುಷಿತ ನೀರಿಗೆ 4ನೇ ಬಲಿ, ಕನಕಗಿರಿಯಲ್ಲಿ 5 ವರ್ಷದ ಮಗು ಸಾವು

ಹೀಗೆ ಕುಂಟುತ್ತಾ, ತೆವಳುತ್ತಾ ಸಾಗಿ ಕಾಗದಲ್ಲಿಯೇ ಜಾರಿಯಾಗುತ್ತಿರುವ ಅಷ್ಟುಯೋಜನೆಗಳನ್ನು ತನಿಖೆಗೆ ಒಳಪಡಿಸುವ ಅಗತ್ಯವಿದೆ. ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios