Bengaluru: ಕರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಂಕಿ ಅವಘಡ: ಕ್ಷಣಾರ್ಧದಲ್ಲಿ ಹೊತ್ತಿಉರಿದ ಮಳಿಗೆ
ಕರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಬೆಂಗಳೂರು- ಸರ್ಜಾಪುರ ಮುಖ್ಯರಸ್ತೆಯ ಕೈಕೊಂಡ್ರಹಳ್ಳಿ ಬಳಿ ನಡೆದಿದೆ.
ಬೊಮ್ಮನಹಳ್ಳಿ (ಮಾ.09): ಕರ್ಲಾನ್ ಹಾಸಿಗೆ ಮಳಿಗೆಯಲ್ಲಿ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಬೆಂಗಳೂರು- ಸರ್ಜಾಪುರ ಮುಖ್ಯರಸ್ತೆಯ ಕೈಕೊಂಡ್ರಹಳ್ಳಿ ಬಳಿ ನಡೆದಿದೆ. ಮಳಿಗೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಕ್ಕಪಕ್ಕದಲ್ಲಿದ್ದ ಮಳಿಗೆಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಈ ವೇಳೆ ಮಳಿಗೆಗಳಲ್ಲಿ ಯಾರು ಇರಲಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆಯಿದ್ದು, ಬೆಳ್ಳಂದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಫರ್ನೀಚರ್ ಶಾಪ್‌ಗೆ ಬೆಂಕಿ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಉಳಿದ ಅಂಗಡಿಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಕ್ಲೋಸ್ ಮಾಡಿಸಿ ಬಾಗಿಲು ಹಾಕಿ ಬರುವಂತೆ ಸೂಚನೆ ನೀಡಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆತಂಕವಾಗಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಸರ್ಜಾಪುರದ ಕೈಕೊಂಡ್ರಹಳ್ಳಿ, ದೊಮ್ಮಸಂದ್ರ ಸೇರಿದಂತೆ ಹಲವು ಬಡಾವಣೆ ಪವರ್ ಕಟ್ ಮಾಡಲಾಗಿದ್ದು, ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಫುಲ್‌ಟ್ರಾಫಿಕ್ ಜಾಮ್ ಆಗಿದೆ.
ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಎಂದಿಗೂ ಒಂದಾಗೋಲ್ಲ: ನಳಿನ್ ಕುಮಾರ್ ಕಟೀಲ್
ಕಸಕ್ಕೆ ಬೆಂಕಿ ತಡೆಗೆ ಇ-ಬೈಕ್: ನಗರದ ಬ್ಲಾಕ್ ಸ್ಪಾಟ್‌ಗಳಲ್ಲಿ (ಕಸ ಸುರಿಯುವ ಸ್ಥಳ) ಕಸಕ್ಕೆ ಬೆಂಕಿ ಹಾಕಿರುವುದನ್ನು ನಂದಿಸಲು ಮತ್ತು ನಿಗಾ ವಹಿಸಲು ಬಿಬಿಎಂಪಿಯ ಘನತ್ಯಾಜ್ಯ ವಿಭಾಗ 270 ಇ-ಬೈಕ್ ಖರೀದಿಗೆ ಮುಂದಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ವಾಯು ಮಾಲಿನ್ಯ ನಿಯಂತ್ರಣ ಕಾರ್ಯಕ್ರಮದಡಿ ಬಿಬಿಎಂಪಿ ಇ-ಬೈಕ್ ಖರೀದಿಗೆ ಮುಂದಾಗಿದೆ. ನಗರದಲ್ಲಿ ಕಸಕ್ಕೆ ಬೆಂಕಿ ಹಾಕಿದರೆ ತಕ್ಷಣ ಆ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲು ಮತ್ತು ಕಸಕ್ಕೆ ಬೆಂಕಿ ಹಾಕುವುದನ್ನು ತಡೆಯಲು ಮಾರ್ಷಲ್‌ಗಳಿಗೆ ಇ- ಬೈಕ್ ನೀಡಲು ತೀರ್ಮಾನಿಸಿದೆ.
4 ಕೋಟಿ ವೆಚ್ಚದಲ್ಲಿ 270 ಇ ಬೈಕ್ ಖರೀದಿಸಿ, ಬಿಬಿಎಂಪಿಯ 243 ವಾರ್ಡ್‌ಗಳಿಗೆ ತಲಾ ಒಂದರಂತೆ ವಿತರಿಸಲಾಗುವುದು. ಜತೆಗೆ, 27 ವಿಧಾನಸಭಾ ಕ್ಷೇತ್ರವಾರು ನಿಯೋಜನೆ ಮಾಡಲಾದ ಮೇಲ್ವಿಚಾರಕರಿಗೆ ನೀಡಲಾಗುತ್ತದೆ. ಜತೆಗೆ .3 ಕೋಟಿ ವೆಚ್ಚದಲ್ಲಿ ಬೆಂಕಿ ನಂದಿಸುವ ಉಪಕರಣಗಳು, ನೀರು ಸಿಂಪಡಣೆ ಯಂತ್ರ ಹಾಗೂ ಅಗ್ನಿ ನಂದಿಸುವ ಸಿಲಿಂಡರ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಈ ವಾಹನಗಳ ವಾರ್ಡ್ ಮಾರ್ಷಲ್ ಅಥವಾ ಆರೋಗ್ಯ ನಿರೀಕ್ಷಕರಿಗೆ ನೀಡಲಾಗುತ್ತದೆ. ಪ್ರತಿ ದಿನ ಮಾರ್ಷಲ್‌ಗಳು ಹಾಗೂ ಆರೋಗ್ಯ ನಿರೀಕ್ಷಕರು ವಾರ್ಡ್‌ನಲ್ಲಿ ಇ ಬೈಕ್ ಮೂಲಕ ಸಂಚಾರ ನಡೆಸಿ ನಿಗಾ ವಹಿಸಲಿದ್ದಾರೆ.
ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಭರವಸೆಗಳಿಗೆ ಮರುಳಾಗಬೇಡಿ: ಸಿಎಂ ಬೊಮ್ಮಾಯಿ
ಈ ಕುರಿತು ವಿವರಣೆ ನೀಡಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರವೀಣ್ ಲಿಂಗಯ್ಯ, ಪ್ರತಿ ವಾರ್ಡ್‌ನಲ್ಲಿ ಆರೇಳು ಕಡೆ ಕಸಕ್ಕೆ ಬೆಂಕಿ ಹಾಕುವ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಮಾರ್ಷಲ್‌ಗಳಿಗೆ ಇ-ಬೈಕ್ ನೀಡಲಾಗುವುದು. ವಾರ್ಡ್ ಮಟ್ಟದಲ್ಲಿ ಗಾಳಿಯ ಗುಣಮಟ್ಟಹೆಚ್ಚಿಸುವುದು ಇಡೀ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.