ಶಿಗ್ಗಾಂವಿ(ಆ.20):ಚಲಿಸುತ್ತಿದ್ದ ಲಾರಿಯ ಟೈರ್‌ ಸ್ಫೋಟವಾಗಿ ವಾಹನಕ್ಕೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಬಂಕಾಪುರ ಪಟ್ಟಣದ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ಹಿಂದು ರುದ್ರಭೂಮಿಯ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. 

ತಮಿಳುನಾಡಿಗೆ ಸೇರಿದ ಲಾರಿಯೊಂದು ಗೋವಾದಿಂದ ಎಂಆರ್‌ಎಫ್‌ ಟೈರ್‌ ಕಚ್ಚಾ ವಸ್ತುಗಳನ್ನು ಹೇರಿಕೊಂಡು ತಮಿಳುನಾಡಿನ ಕಡೆಗೆ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದರಿಂದ ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. 

ಹಾವೇರಿ: ಅತಿವೃಷ್ಟಿಗೆ 3500 ಹೆಕ್ಟೇರ್‌ ಬೆಳೆಹಾನಿ

ಪೊಲೀಸರ ಸಹಾಯದಿಂದ ವಾಹನಗಳನ್ನು ಏಕಮುಖ ರಸ್ತೆಯ ಮೂಲಕ ಸಂಚರಿಸಲು ಅವಕಾಶ ಮಾಡಿಕೊಟ್ಟರು. ಅಗ್ನಿಶಾಮಕ ವಾಹನ ಆಗಮಿಸಿ ಹೊತ್ತಿ ಉರಿಯುತ್ತಿರುವ ಲಾರಿಯ ಬೆಂಕಿಯನ್ನು ನಂದಿಸಿದರು. ಈ ಕುರಿತು ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.