ಚಿತ್ರದುರ್ಗ [ಮಾ.20]: ದೀಪ ಹಚ್ಚುವ ವೇಳೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಬಾಂತಿ ಮಗು ಇಬ್ಬರೂ ಸಾವಿಗೀಡಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ತೊಡ್ಲಾರಹಟ್ಟಿ ಗ್ರಾಮದಲ್ಲಿ  ಬೆಂಕಿ ಅವಘಡ ಸಂಭವಿಸಿದೆ. ದೀಪದಿಂದ ಏಕಾಏಕಿ ಬೆಂಕಿ ತಗುಲಿದ್ದು, 12 ದಿನದ ಗಂಡು ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. \

ಪತಿ ಬಂಧಿಸಲು ಹೋದಾಗ ಪೊಲೀಸರ ಎದುರೇ ಅರೆ ನಗ್ನಳಾಗಿ ರಾದ್ಧಾಂತ..

ಗಂಭೀರವಾಗಿ ಗಾಯಗೊಂಡ ಬಾಣಂತಿ ಗೌರಮ್ಮ [20]ಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.