ಚಾಮರಾಜನಗರ(ಜ.18): ಕಳೆದ ಆರೇಳು ವರ್ಷಗಳಿಂದಲೂ ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ ಕಾಮಗಾರಿ ನಡುವೆ ತೊಡಕಾಗಿದ್ದ ಆರು ಮಂದಿ ರೈತರ ಜಮೀನನ್ನು ಶುಕ್ರವಾರ ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌ ಹಾಗೂ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನ್ಯಾಯಾಯದ ಆದೇಶದ ಹಿನ್ನೆಲೆ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ

ಜೆಸಿಬಿ ಮೂಲಕ ಟ್ರಂಚ್‌:

ಕಳೆದ 8 ವರ್ಷಗಳಿಂದ ರಸ್ತೆ ಅಗಲೀಕರಣಕ್ಕೆ ಸರ್ಕಾರ ಆದೇಶಿಸಿದ್ದರೂ ಸಹ ಇಲ್ಲಿನ ರೈತರು ಜಮೀನುಗಳನ್ನು ತೆರವು ಮಾಡಲು ಅವಕಾಶ ನೀಡದೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡೆ ಉಂಟಾಗಿತ್ತು.

ಕಾವೇರಿ ವನ್ಯಧಾಮದಲ್ಲಿ ಬೆಂಕಿ: 6 ಎಕರೆ ನಾಶ

ಆದರೀಗ ಜಮೀನುಗಳನ್ನು ತೆರವುಗೊಳಿಸಿ ಬೈಪಾಸ್‌ ರಸ್ತೆ ಕಾಮಗಾರಿ ಆರಂಭಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದ್ದರಿಂದ ಶುಕ್ರವಾರ ಕೊಳ್ಳೇಗಾಲದ ಭಾಗದ ಸುಮಾರು 8 ಕಿ.ಮೀ ಉದ್ದದವರೆಗೆ ರಸ್ತೆ ಕಾಮಗಾರಿಗೆ ಎರಡು ಬದಿಯಲ್ಲಿ ಜೆಸಿಬಿ ಮೂಲಕ ಟ್ರಂಚ್‌ ತೆಗೆಸುವ ಕಾಮಗಾರಿ ಪ್ರಾರಂಭಿಸಲಾಗಿದೆ.

ರೈತಪರ ಕೆಲಸ ಮಾಡಿ:

ಇದರಿಂದಾಗಿ ನೆನೆಗುದಿಗೆ ಬಿದ್ದಿದ್ದ ಎರಡು ರಾಜ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದಂತಾಗಿದೆ. ತೆರವುಗೊಳಿಸುವ ವೇಳೆ ಹಲವು ರೈತರು ಭತ್ತದ ಫಸಲು ಕಟಾವಿಗೆ ಬಂದಿದೆ. ಕೆಲ ದಿನಗಳು ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಆದರೂ ಸಹ ಅಧಿಕಾರಿಗಳು ರೈತರ ಮನವಿಯನ್ನು ಪುರಸ್ಕರಿಸಿದ ಕಟಾವು ಯಂತ್ರ ತರಿಸಿ ತೆರವು ಕಾರ್ಯಾಚರಣೆ ಸಾಂಗವಾಗಿ ನಡೆಸಿದರು.

ಕುಡಿತದ ದಾಸನಾಗಿದ್ದ ಯುವಕನಿಗೆ ಯುವ ರೈತ ಪ್ರಶಸ್ತಿ, ಸಕ್ಸಸ್‌ಫುಲ್ ರೈತನ ಸೂಪರ್ ಸ್ಟೋರಿ

ಇದೇ ವೇಳೆ ಕೆಲ ರೈತರು ನಮಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಿ, ನಮಗೆ ಬೇರೆ ಕಡೆ ಜಮೀನು ಖರೀದಿಸಿ ಕೊಡಿ ಎಂಬಿತ್ಯಾದಿಯಾಗಿ ಬೇಡಿಕೆ ಇಟ್ಟರು. ಅಲ್ಲದೆ ಈ ವೇಳೆಯಲ್ಲಿ ರೈತ ಸಿದ್ದಯ್ಯ ಎಂಬುವರು ಅಧಿಕಾರಿಗಳಿಗೆ ಕೈಮುಗಿದು ರೈತಪರ ಕೆಲಸ ಮಾಡಿ, ನಮಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಿ ಎಂದು ಕೈಮುಗಿದ ಘಟನೆ ಸಹ ಜರುಗಿತು.

ವಿಧಿ ಇಲ್ಲದೆ ಕಾರ್ಯಾಚರಣೆ:

ಈಗಾಗಲೇ 8 ಕಿ.ಮೀ ವ್ಯಾಪ್ತಿಯಲ್ಲಿ ಅಂತರ ರಾಜ್ಯಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ವೇಳೆ ಎಂಟು ಕಿ.ಮೀ ರಸ್ತೆ ವ್ಯಾಪ್ತಿಗೆ ಬರುವ ರೈತರ ಪೈಕಿ 181 ಮಂದಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಶಿವಮ್ಮ, ಸಣ್ಣಮ್ಮ, ಸವಿತಾ, ಮಹದೇವ, ಸುಂದರಮ್ಮ, ಚಿಕ್ಕಮಾದ ಎಂಬ ಆರು ಮಂದಿ ನ್ಯಾಯಾಲಕ್ಕೆ ಮೊರೆ ಹೋಗಿದ್ದ ಹಿನ್ನೆಲೆ ಕಾಮಗಾರಿಗೆ ಹಿನ್ನಡೆಯಾಗಿತ್ತು. ಹಿರಿಯ ಅಧಿಕಾರಿಗಳು ಹಾಗೂ ರಸ್ತೆ ಸುಧಾರಣಾ ಸಮಿತಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ಶುಕ್ರವಾರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತೆರವು ವೇಳೆ ಹಲವರು ಮನವಿಗೆ ನಾವು ಸ್ಪಂದಿಸಲಾಗಿಲ್ಲ, ಕಾರಣ ಈಗಾಗಲೇ ಕಾಮಗಾರಿಗೆ ಆರೇಳು ವರ್ಷ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಕೆಂಪೇಗೌಡ, ನವೀನ್‌ ಕುಮಾರ್‌, ಶ್ರೀಕಾಂತ್‌ ಇನ್ನಿತರರು ಇದ್ದರು.

'ಹಿಂದೆಯೂ RSS ಇತ್ತು, ಆದರೆ ಈ ಥರ ಇರ್ಲಿಲ್ಲ, ಈಗ ಫುಲ್ ರೌಡಿಸಂ'..!

ನ್ಯಾಯಾಲಯದ ಆದೇಶದಿಂದ ಹಿರಿಯ ಅಧಿಕಾರಿಗಳು ನಿರ್ದೇಶನದ ಮೇರೆಗೆ ಆರು ಮಂದಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟ್ರಂಚ್‌ ತೆಗೆಸುವ ಮೂಲಕ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆಲ ರೈತರು ಬೆಳೆ ಕಟಾವಿಗೆ ಬಂದಿದೆ. ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ವಿಧಿ ಇಲ್ಲದೆ ಹಿರಿಯ ಅಧಿಕಾರಿ ಆದೇಶ ಪಾಲಿಸಲೇಬೇಕಿದೆ ಎಂದು ಭೂಸ್ವಾಧೀನ ಪ್ರಕ್ರಿಯೆ ಜಿಲ್ಲಾಧಿಕಾರಿ ರಾಜೇಂದ್ರಕುಮಾರ್‌ ಹೇಳಿದ್ದಾರೆ.