ಕುಡಿತದ ದಾಸನಾಗಿದ್ದ ಯುವಕನಿಗೆ ಯುವ ರೈತ ಪ್ರಶಸ್ತಿ, ಸಕ್ಸಸ್‌ಫುಲ್ ರೈತನ ಸೂಪರ್ ಸ್ಟೋರಿ

ಕುಡಿತವನ್ನೇ ಕೆಲಸವಾಗಿ ಮಾಡಿಕೊಂಡಿದ್ದ ಯುವಕ ಈಗ ಯುವ ರೈತ ಪ್ರಶಸ್ತಿ ವಿಜೇತ ಸಕ್ಸಸ್‌ಫುಲ್ ರೈತ. ದಿನಪೂರ್ತಿ ಕುಡಿಯುತ್ತಿದ್ದ ಯುವಕನಿಗೆ ಈಗ ಮೂರು ಲಕ್ಷ ಆದಾಯ. ಯುವ ರೈತನ ಇನ್ಪೈರಿಂಗ್ ಸ್ಟೋರಿ ನೀವೇ ಓದಿ.

story of alcoholic youth who changed as a successful farmer in chamarajnagar

ಚಾಮರಾಜನಗರ(ಜ.18): ಕುಡಿತದ ದಾಸನಾಗಿದ್ದ ಯುವಕನೊಬ್ಬ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯ ತ್ಯಜಿಸಿದ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡ ಬಳಿಕ ಮಾದರಿ ರೈತನಾಗಿ ಹೊರ ಹೊಮ್ಮಿದ್ದಾನೆ.

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಯುವಕ ಪುಟ್ಟಸ್ವಾಮಿ ಮದ್ಯ ತ್ಯಜಿಸಿದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿ ಸರಿ ಸುಮಾರು 3 ಲಕ್ಷ ರು. ಆದಾಯ ಪಡೆಯುತ್ತಿದ್ದಾನೆ. ಎರಡು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ಪರಿಗಣಿಸಿರುವ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ಗಳಿಸಿಕೊಂಡಿದ್ದಾನೆ.

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!

3 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳಾದ ಸಪೋಟ, ಮಾವು, ಸೀಬೆ ಹಾಗೂ ಅರಿಶಿನ, ಟಮೆಟೋ ಬೆಳೆ ಬೆಳೆಯುತ್ತಿದ್ದು, ಹೆಬ್ಬೇವು ಕೂಡ ಬೆಳೆದಿದ್ದಾನೆ. ಕೃಷಿಯಲ್ಲಿ ತೊಡಗಿಕೊಂಡಿರುವ ಜೊತೆಗೆ 5 ಹಸು ಹಾಗೂ ಕುರಿಗಳನ್ನು ಸಾಕುತ್ತಿದ್ದಾನೆ. ಇತನೊಂದಿಗೆ ಪತ್ನಿ ದೊಡ್ಡಮ್ಮ ಹಾಗೂ ತಂದೆ ಸಾಥ್‌ ನೀಡುತ್ತಿರುವುದು ಸಹಕಾರಿಯಾಗಿದೆ.

ಸಾಲ ಪಡೆದ:

ಪುಟ್ಟಸ್ವಾಮಿ ಪತ್ನಿ ದೊಡ್ಡಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಲ್ಲಿ ಸದಸ್ಯರಾಗಿದ್ದರು. ಪತಿಯ ಕುಡಿತ ಚಟ ಬಿಡಿಸಲು ಮದ್ಯವರ್ಜನ ಶಿಬಿರಕ್ಕೆ ಸೇರಿದರು. ಗುಂಡ್ಲುಪೇಟೆಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಸೇರಿದ ಪುಟ್ಟಸ್ವಾಮಿ ಶಿಬಿರ ಮುಗಿಯುವ ಹೊತ್ತಿಗೆ ಕುಡಿತದ ಚಟ ಸಂಪೂರ್ಣವಾಗಿ ಬಿಟ್ಟಿದ್ದ ಎನ್ನಲಾಗಿದೆ.

ಕಿರಿಯ ವಯಸ್ಸಿನ ಹೆಮ್ಮೆಯ ಡ್ರಮ್ಮರ್ ಪ್ರಿಯಾ

ಇದಾದ ಬಳಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಾಗಿದ್ದ ಪುಟ್ಟಸ್ವಾಮಿ ಪತ್ನಿ ದೊಡ್ಡಮ್ಮ 1.5 ಲಕ್ಷ ರು.ಸಾಲ ಪಡೆದು ಬೇಸಾಯ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಕುಡಿತ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡ ಬಳಿಕ ಅರಿಶಿನ, ಟಮೆಟೋ ಬೆಳೆ ಕೈ ಹಿಡಿದಿದೆ. ಇದಾದ ಬಳಿಕ ಸಪೋಟ ಮತ್ತಷ್ಟುಕೈ ಹಿಡಿದಿದೆ ಎಂದು ರೈತ ಪುಟ್ಟಸ್ವಾಮಿ ಹೇಳಿಕೊಂಡರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಆಯೋಜಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಸೇರಿದ ಬಳಿಕ ನಾನು ಕುಡಿತ ಬಿಟ್ಟು ಕೃಷಿಯತ್ತ ಮುಖ ಮಾಡಿದ್ದು ನನ್ನ ಬಾಳು ಬಂಗಾರವಾಗಿದೆ ಎಂದಿದ್ದಾರೆ.

ಸಪೋಟ ಹಣ್ಣನನ್ನು ಬೈಕ್‌ನಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಮಾರಾಟ ಮಾಡುವೆ. ಸೀಬೆ ಕೂಡ ಮಾರಾಟ ಆಗುತ್ತಿದೆ. ಸದ್ಯ ಈಗ ಕುಡಿತ ನಿಲ್ಲಿಸಿದ ಬಳಿಕ ನಾನು ಸಂಪೂರ್ಣ ಬದಲಾಗಿರುವೆ.​​ ಕುಡಿತ ಬಿಟ್ಟಮೇಲೆ ನೆಮ್ಮದಿಯ ಜೀವನ ಸಾಗಿಸುತ್ತಿರುವೆ. ಈಗ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಾರಣ ಸದಾ ಕುಡಿಯುತ್ತಿದ್ದ ನನಗೆ ಈಗ ಕುಡಿತದ ಗಮನವೇ ಇಲ್ಲ ಎನ್ನುತ್ತಾರೆ ಪುಟ್ಟಸ್ವಾಮಿ.

ಕೊಡಗು ಸಂತ್ರಸ್ತ ಮಹಿಳೆಯರ ಮಹಾ ಸಾಧನೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಸೇರಿ ಕುಡಿತ ಬಿಟ್ಟಬಳಿಕ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಬಂದಿದೆ ನಿಜಕ್ಕೂ ಸಂತಸ ತಂದಿದೆ ಎಂದು ಕೃಷಿ ಮೇಲ್ವಿಚಾರಕ ನವೀನ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios