ಚಾಮರಾಜನಗರ(ಜ.18): ಕೀಡಿಗೇಡಿಗಳ ಕೃತ್ಯಕ್ಕೆ ಕಾವೇರಿ ವನ್ಯಧಾಮದಲ್ಲಿ ಆರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಕೂತ್ತನೂರು ವನ್ಯಜೀವಿ ವಲಯದ ಸುಂಡ್ರಳ್ಳಿ ಬೀಟ್‌ನ ಅರಣ್ಯ ಪ್ರದೇಶ ಮಧುವಿನಗುಡಿನತ್ತ ಬಳಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿದು ತಕ್ಷಣ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೀಡಿಗೇಡಿಗಳ ಕೃತ್ಯ ಶಂಕೆ:

ಅರಣ್ಯ ಪ್ರದೇಶಗಳ ಬೆಂಕಿಯಿಟ್ಟಪ್ರಕರಣಗಳಲ್ಲಿ ಸಿಲುಕಿ ಹೊರ ಬಂದಿರುವ ವ್ಯಕ್ತಿಗಳು ಮತ್ತೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಯಾವುದೇ ಪ್ರಕರಣಗಳೂ ಮತ್ತು ಕಾಡು ಪ್ರಾಣಿಗಳ ಹತ್ಯೆ ಮರಸಾಗಾಟ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿ ಹೊರ ಬಂದಿರುವ ವ್ಯಕ್ತಿಗಳು ಅಸೂಯೆಯಿಂದ ಮಾಡಿರುವ ಕೆಲಸವಾಗಿದೆ.

ಕುಡಿತದ ದಾಸನಾಗಿದ್ದ ಯುವಕನಿಗೆ ಯುವ ರೈತ ಪ್ರಶಸ್ತಿ, ಸಕ್ಸಸ್‌ಫುಲ್ ರೈತನ ಸೂಪರ್ ಸ್ಟೋರಿ.

ಕೂಡಲೇ ನಮ್ಮ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯದಂಚಿನಲ್ಲಿ ಇಂತಹ ಪ್ರಕರಣಗಳೂ ಜರುಗದಂತೆ ಎಚ್ಚರಿಕೆ ವಹಿಸಲು ಗ್ರಾಮಸ್ಥರ ಸಹಕಾರ ಇಲಾಖೆಗೆ ಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಶೇಖರಪ್ಪ ಪತ್ರಿಕೆಗೆ ತಿಳಿಸಿದ್ದಾರೆ.