ಮಂಗಳೂರು(ಜ.18): ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆ ಯತ್ನ ನಡೆದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಯಾರು ಯಾವುದರಲ್ಲಿ ಆಟ ಆಡ್ತಾರೋ ಅವ್ರು ಅದ್ರಲ್ಲೇ ಅಂತ್ಯ ಆಗ್ತಾರೆ ಎಂದಿದ್ದಾರೆ.

ಎರಡು ಕೈಗಳ ಮಧ್ಯೆ ನಾವು (ಕಾಂಗ್ರೆಸ್‌) ಸ್ಯಾಂಡ್‌ ವಿಚ್‌ ಆಗ್ತಿದೀವಿ. ಒಂದು ಕಡೆ ಹಿಂದೂ ಭಯೋತ್ಪಾದಕರು ಮತ್ತೊಂದು ಕಡೆ ಮತ್ತೊಂದು ಭಯೋತ್ಪಾದಕರು. ನಾವು ಸೌಮ್ಯವಾದಿಗಳು, ಹೀಗಾಗಿ ಸರ್ಕಾರ ಮಾಡೋ ತನಿಖೆ ಮಾಡಲಿ ಎಂದಿದ್ದಾರೆ.

ನನಗೆ ಜೀವ ಬೆದರಿಕೆ ಬಂದಿಲ್ಲ: ಖಾದರ್‌

ಸೂಲಿಬೆಲೆ ಕೂಡ ನಾಲಿಗೆ ಹರಿಬಿಟ್ಟವರೇ ಆಗಿದ್ದಾರೆ. ಹಿಂದೆಯೂ ಆರೆಸ್ಸೆಸ್‌ನವರು ಇದ್ದರು, ಅದ್ರೆ ಈ ಥರ ಇರಲಿಲ್ಲ. ಈಗ ಸಂಪೂರ್ಣ ವಾತಾವರಣ ರೌಡಿಸಂ ಕಡೆ ಹೋಗ್ತಿದೆ. ಸಜ್ಜನರಿಗೆ ಕಾಲವಿಲ್ಲ ಎಂಬಂತಾಗಿದೆ. ಏನು ತನಿಖೆ ನಡೆದ್ರೂ ನಡೆಯಲಿ, ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ ಎಂದು ಇಬ್ರಾಹಿಂ ಹೇಳಿದ್ದಾರೆ.