ಯಾದಗಿರಿ(ಜೂ.30): ಮಗಳ ಮದುವೆ ಮಾಡಿದ ಮಾರನೇ ದಿನವೇ ತಂದೆ ಹಠಾತ್ ನಿಧನ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೃತ ವ್ಯಕ್ತಿಯ ಕೋವಿದ್ ಪ್ರಾರ್ಥಮಿಕ ವರದಿ ಪಾಸಿಟಿವ್ ಬಂದಿರುವುದು ಇದೀಗ ಹೆಚ್ಚಿನ ಆತಂಕ ಮೂಡಿಸಿದೆ.

ತಾಲೂಕಿನ ಹೊನಗೇರಿ ಗ್ರಾಮದ 48 ವರ್ಷದ ವ್ಯಕ್ತಿಯೊಬ್ಬ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದ. ಆದರೆ, ಆ ವ್ಯಕ್ತಿ ಭಾನುವಾರ ಸಿರವಾರ ಪಟ್ಟಣದಲ್ಲಿ‌ ಮಗಳ ಮದುವೆ ನೆರವೇರಿಸಿದ್ದ.  ಈ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೆಮ್ಮ, ಜ್ವರದಿಂದ ಬಳಲುತ್ತಿದ್ದ. 

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ

ಸೋಮವಾರ ಬೆಳಿಗ್ಗೆ ತೀವ್ರ ಉಸಿರಾಟ ತೊಂದರೆಗೆ ಒಳಗಾದಾಗ ಸಂಬಂಧಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ,  ಹೆಚ್ಚಿನ ಚಿಕಿತ್ಸೆಗಾಗಿ ಆತ ನನ್ನು ಅಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆ ಗಾಗಿ ರಾಯಚೂರಿಗೆ ತೆರಳುತ್ತಿರುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ.

ಸಂಬಂಧಿಕರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕೊಂ ಕೊಂಡೊಯ್ದಾಗ, ಮೃತನ ಗಂಟಲು ದ್ರವ ತೆಗೆದು ಕೊಂಡು ಕೋವಿಡ್ ಪ್ರಾಥಮಿಕ ಪರೀಕ್ಷೆ ಮಾಡಿದ್ದಾಗ  ಪಾಸಿಟಿವ್ ಎಂದು ತಿಳಿದು ಬಂದಿದೆ.

ಮಗಳನ್ನು ಕೊಂದು ಕೃಷಿ ಹೊಂಡಕ್ಕೆ ಹಾಕಿದ ತಾಯಿ: 17ರ ಬಾಲೆಗೆ ಪ್ರೀತಿಯೇ ಉರುಳಾಯ್ತು

ಆತನ ಮಗಳ ಮದುವೆಗೆ ಸಿರವಾರ ಪಟ್ಟಕ್ಕೆ ತೆರಳಿದ ಹೊನಗೇರಿ ಗ್ರಾಮದ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಯಾಗಿದೆ. ಸೋಮವಾರ ರಾತ್ರಿ ಹೊನಗೆರ ಗ್ರಾಮದಲ್ಲಿ ಮೃತನ ಅಂತ್ಯಕ್ರಿಯೆಯನ್ನು ಸರಕಾರದ ನಿಯಮಗಳನುಸಾರ ಮಾಡಲಾಗುವುದು ಎಂದು ತಿಳಿದುಬಂದಿದೆ.