ನವದೆಹಲಿ(ಜೂ.30): ಹೊಂಡಾ ಸ್ಮಾರ್ಟ್ ಪವರ್, ಹೊಂಡಾ ಇಕೋ ಟೆಕ್ನಾಲಜಿ, ಎಸಿಜಿ ಸ್ಟಾರ್ಟರ್ ಮೋಟಾರ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ BS6 ಎಂಜಿನ್ ಹೊಂಡಾ ಲಿವೊ ಮಾರುಕಟ್ಟೆ ಪ್ರವೇಶಿಸಿದೆ. 110 ಸಿಸಿ, ಸಿಂಗಲ್ ಸಿಲಿಂಡರ್, ಎರ್ ಕೂಲ್ಡ್ ಎಂಜಿನ್ ಹೊಂದಿರುವ ಹೊಂಡಾ ಲಿವೊ ಮತ್ತಷ್ಟು ಆಕರ್ಷ ವಿನ್ಯಾಸ ಹೊಂದಿದೆ.

ಜುಲೈನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ!

BS4 ಹೊಂಡಾ ಲಿವೊ ಬೈಕ್ ಬೆಲೆ 58,775 ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಬಿಡುಗಡೆಯಾಗಿರುವ ನೂತನ BS6 ಹೊಂಡಾ ಲಿವೊ ಬೆಲೆ 69,422 ರೂಪಾಯಿ(ಎಕ್ಸ್ ಶೋ ರೂಂ).  ಎಸಿ ಜನರೇಟರ್ ಸ್ಟಾರ್ಟ್ ಎಂಜಿನ್ ಹಾಗೂ ಫ್ಯುಯೆಲ್ ಇಂಜೆಕ್ಷನ್ ಕಾರಣ ಬೈಕ್ ಅತೀ ಕಡಿಮೆ ಮಾಲಿನ್ಯ ಹಾಗೂ ಹೆಚ್ಚ ಮೈಲೇಜ್ ನೀಡಲಿದೆ.

ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!..

ಹೆಟ್ಟು ಬ್ರೈಟರ್ ಬೀಮ್ ಹೊಂದಿರುವ ಡಿಸಿ ಹೆಡ್‌ಲ್ಯಾಂಪ್ಸ್, ಫ್ಯುಯೆಲ್ ಟ್ಯಾಂಕ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.  ಆಪ್ಟಿಕಲ್ ಡಿಸ್ಕ್ ಬ್ರೇಕ್ ಹೊಂದಿದ್ದು, ಕಾಂಬಿ ಬ್ರೇಕ್ ಸಿಸ್ಟಮ್ ಸ್ಟಾಂಡರ್ಡ್ ಮಾಡಲಾಗಿದೆ. ಹೊಂಡಿ ಲಿವೊ ಕೂಡ 6 ವರ್ಷ ವಾರೆಂಟಿ ಸಿಗಲಿದೆ. 

ಬಜಾಜ್ ಪ್ಲಾಟಿನಂ 110, ಹೀರೋ ಸ್ಲ್ಲೆಂಡರ್ ಐ ಸ್ಮಾರ್ಟ್, ಟಿವಿಎಸ್ ಸ್ಪೋರ್ಟ್, ಸೇರಿದಂತೆ 110 ಸಿಸಿ ಎಂಜಿನ್‌ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಲಿವೊ ಬೈಕ್  ಬಿಡುಗಡೆಯಾಗಿದೆ.