ಚಿಂತಾಮಣಿ (ಸೆ.15):  ಕೃಷಿ ಸಚಿವರು ರೈತ ಸಂಘ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ಅಜ್ಞಾನಿ ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಸಚಿವ ಸ್ಥಾನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ಸೋಮವಾರ ಪ್ರತಿಭಟನೆ ನಡೆಸಿತು.

ನಗರದ ಪ್ರವಾಸಿ ಮಂದಿರದಿಂದ ಸೋಮವಾರ ನೂರಾರು ರೈತರು ಪ್ರಮುಖ ರಸ್ತೆಗಳಲ್ಲಿ ತೆರಳಿ ಬಿಜೆಪಿ ಸರ್ಕಾರ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್‌ ವಿರುದ್ದ ದಿಕ್ಕಾರ ಕೂಗಿದರು. ನಗರದ ಪ್ರವಾಸಿ ಮಂದಿರದಿಂದ ನೂರಾರು ರೈತರು ಪ್ರಮುಖ ರಸ್ತೆಗಳಲ್ಲಿ ತೆರಳಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಳೆ ವಿಮೆ ನಷ್ಟಪರಿಹಾರ ರೈತರ ಖಾತೆಗೆ ಜಮಾ ...

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸೀಕಲ್‌ ರಮಣಾರೆಡ್ಡಿ ಮಾತನಾಡಿ, ಕಾಂಗ್ರೆಸ್‌್ಸ ಬಿಟ್ಟು ಬಿಜೆಪಿ ಸೇರಿ ಸಚಿವರಾಗಿವರೆಲ್ಲಾ ಹಣ ಲೂಟಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ರಾಜ್ಯಾದಂತ ಉಗ್ರ ಹೋರಾಟ ನಡೆಸಲಾಗುವುದು. ಕೃಷಿ ಸಚಿವರು ರಾಜೀನಾಮೆ ಸಲ್ಲಿಸದಿದ್ದಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಿಎಸ್‌ವೈಗೂ ಮೊದಲೇ ಹೈಕಮಾಂಡ್‌ ಭೇಟಿ: ಭಾರೀ ಚರ್ಚೆಗೆ ಗ್ರಾಸವಾಯ್ತು ಕೌರವ ನಡೆ..! ...

ಕಾಂಗ್ರೆಸ್‌್ಸ ಈ ಹಿಂದೆ ದುರಾಡಳಿತ ನಡೆಸುತ್ತಿದೆ ಎಂದು 17 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ ನಂತರ ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣೆಯಲ್ಲಿ ಭಾರೀ ಹಣ ದುಂದು ವೆಚ್ಚ ಮಾಡಿ ಗೆದ್ದಿರುವ ಶಾಸಕರೆಲ್ಲಾ ಸಚಿವ ಸ್ಥಾನ ಆಲಂಕರಿಸಿ ಸರ್ಕಾರದ ಸಾವಿರಾರು ಕೋಟಿ ಕೊಳ್ಳೆ ಹೊಡೆಯುತ್ತಿದ್ದಾರೆಂದು ಆರೋಪಿಸಿದರು.

ರೈತ ಸಂಘದ ಮುಖಂಡರಾದ ಗುಟ್ಟಹಳ್ಳಿ ರಾಮಕೃಷ್ಣಪ್ಪ , ಗುತ್ತಿಗಡ್ಡ ಶ್ರೀನಿವಾಸರೆಡ್ಡಿ, ರಾಚಾಪುರ ಮನೋಜ್‌ , ಕಾಗತಿ ವೆಂಕಟಾಚಲಪತಿ, ನಾಯನಹಳ್ಳಿ ನಾಗರಾಜ್‌ , ಉಲ್ಲಪ್ಪಲ್ಲಿ ಶ್ರೀರಾಮರೆಡ್ಡಿ, ಚಂದ್ರಶೇಖರ್‌ರೆಡ್ಡಿ ಇತರರು ಇದ್ದರು.

ಚಿತ್ರ ; ಚಿಂತಾಮಣಿ ನಗರದ ತಾಲೂಕು ಕಚೇರಿ ಮುಂದೆ ರಾಜ್ಯ ರೈತ ಸಂಘದ ಮುಖಂಡರು ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.