ರೈತರ ಸಾಲ ಕೇಳಬೇಕು ಆದರೆ, ಒತ್ತಡ ಹಾಕುವಂತಿಲ್ಲ: ಸಚಿವ ಸಂತೋಷ್‌ ಲಾಡ್‌

ರೈತರಿಗೆ ಸಾಲ ನೀಡಿರುವ ಬ್ಯಾಂಕ್‌ಗಳು ಅವರಿಂದ ಮರುಪಾವತಿಗೆ ಕೇಳುವ ವಿಧಾನ ಬೇರೆ ಇದೆ. ಸಾಲವನ್ನು ತುಂಬಿ ಎಂದು ಒತ್ತಡ ಹಾಕುವುದು, ತೊಂದರೆ ಕೊಡುವುದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

Farmers should ask for loans but not pressured Says Minister Santosh Lad gvd

ಧಾರವಾಡ (ಅ.29): ರೈತರಿಗೆ ಸಾಲ ನೀಡಿರುವ ಬ್ಯಾಂಕ್‌ಗಳು ಅವರಿಂದ ಮರುಪಾವತಿಗೆ ಕೇಳುವ ವಿಧಾನ ಬೇರೆ ಇದೆ. ಸಾಲವನ್ನು ತುಂಬಿ ಎಂದು ಒತ್ತಡ ಹಾಕುವುದು, ತೊಂದರೆ ಕೊಡುವುದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. ಇತ್ತೀಚೆಗೆ ನವಲಗುಂದ ಗುಮ್ಮಗೋಳದ ರೈತನಿಗೆ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಮರುಪಾವತಿ ಕುರಿತು ಆಗಿರುವ ತೊಂದರೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಸಾಲ ಮರುಪಾವತಿಗೆ ದೇಶದಲ್ಲಿ ಬೇರೆಯೇ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಸಣ್ಣ ಸಾಲ ಪಡೆದವರು ಅತ್ಯಂತ ನಿಯತ್ತಿನಿಂದ ಮರುಪಾವತಿ ಮಾಡುತ್ತಾರೆ. 

ಈ ಬಗ್ಗೆ ಹೆಚ್ಚು ಮಾತನಾಡಿದಾರೆ ರಾಜಕೀಯ ಆಗುತ್ತದೆ. ಆದ್ದರಿಂದ ಮುಂಬರುವ ಸರ್ಕಾರಗಳು ಸಣ್ಣಪುಟ್ಟ ಉದ್ಯಮ ಮತ್ತು ರೈತರ ಬಗ್ಗೆ ಕಾಳಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ರೈತರು ಸಾಲ ತುಂಬದಿದ್ದಲ್ಲಿ ಸರ್ಕಾರ ಮನ್ನಾ ಮಾಡಬೇಕು. ಮಾನದಂಡಗಳ ಆಧಾರದ ಮೇಲೆ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದರು. ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿಯೇ ಈ ಬಗ್ಗೆ ಹೇಳಿದ್ದಾರೆ. ಬಹಳಷ್ಟು ರೈತರಿಗೆ ಸಾಲ ಕೊಡಲಾಗಿದೆ. ಆದರೆ ಕೆಲವರಿಗೆ ಮರಳಿ ತುಂಬಲು ಆಗುವುದಿಲ್ಲ. ಅವರ ಬಗ್ಗೆ ಸರ್ಕಾರ ಮಾನವೀಯತೆ ದೃಷ್ಟಿಯಿಂದ ವಿಚಾರ ಮಾಡಬೇಕು ಎಂದು ಲಾಡ್‌ ಹೇಳಿದರು.

ಮಹಾಕಾವ್ಯ ರಚನೆ ಮೂಲಕ ಆದಿಕವಿಯಾದ ವಾಲ್ಮೀಕಿ: ಸಚಿವ ಎಂ.ಸಿ.ಸುಧಾಕರ್

ವಾಲ್ಮಿಕಿ ರಾಮಾಯಣ ಹಿಂದೂ ರಾಷ್ಟ್ರದ ಅತ್ಯಮೂಲ್ಯ ಸಂಪತ್ತು: ಆದಿಕವಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಇಡೀ ಹಿಂದೂ ರಾಷ್ಟ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ.ಈ ಮಹಾನ್ ಜ್ಞಾನಿಯನ್ನು ಸಮಾಜ ಸದಾಕಾಲ ಸ್ಮರಿಸಬೇಕೆಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಜಿಲ್ಲಾಡಳಿತವು ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ರಾಮಾಯಾಣ ಮಹಾಕಾವ್ಯದ ಸ್ಮರಣೆ. 24 ಸಾವಿರ ಶ್ಲೋಕದ ಈ ರಾಮಾಯಾಣವು ಇಡೀ ಹಿಂದೂ ರಾಷ್ಟ್ರಕ್ಕೆ ಅತೀ ದೊಡ್ಡ ಅತ್ಯಮೂಲ್ಯ ಸಂಪತ್ತು ಆಗಿದೆ. ಈ ಮಹಾಕಾವ್ಯ ಬರೆದ ವಾಲ್ಮೀಕಿಯನ್ನು ಬ್ರೀಟಿಷರು ಮಹಾನ್ ಜ್ಞಾನಿಯೆಂದು ಕರೆದಿದ್ದಾರೆ ಎಂದರು.

ಗಂಗಾನದಿಯ ದಡದಲ್ಲಿ ನಡೆಯುವಾಗ ಎರಡು ಬೆಳ್ಳಕ್ಕಿಗಳು ಮಿಲನದಲ್ಲಿ ತೊಡಗಿದ್ದಾಗ ಬೇಟೆಗಾರನೊಬ್ಬ ಒಂದು ಬೆಳ್ಳಕ್ಕಿಯನ್ನು ಕೊಂದ ಸಂದರ್ಭದಲ್ಲಿ ವಾಲ್ಮೀಕಿಯವರು ತಮ್ಮ ಪ್ರಥಮ ಶ್ಲೋಕ ಬರೆಯುತ್ತಾರೆ.ಮುಂದೆ ಅವರು 24 ಸಾವಿರ ಶ್ಲೋಕದ 4 ಲಕ್ಷ 80 ಸಾವಿರ ಪದಗಳುಳ್ಳ ಮಹಾಕಾವ್ಯ ರಾಮಾಯಾಣವನ್ನು ಬರೆದು ಇತಿಹಾಸ ನಿರ್ಮಿಸುತ್ತಾರೆ.ಮಹರ್ಷಿ ವಾಲ್ಮೀಕಿಯವರು ಅನೇಕ ಪುರ್ನಜನ್ಮಗಳನ್ನು ಪಡೆದು ವಿವಿಧ ರೀತಿಯ ಮಹಾಗುರುಗಳಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾರೆಂದು ಅನೇಕ ಸಾಹಿತ್ಯಗಳು ಹೇಳುತ್ತವೆಂದು ಸಚಿವರು ತಿಳಿಸಿದರು.

ಆರಂಭದಲ್ಲಿ ಸಚಿವರು ವಾಲ್ಮೀಕಿ,ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಅಭಿವೃದ್ಧಿ ಮಂಡಳಿಯಿಂದ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ರಾಜ್ಯ ಸಂಪನ್ಮೂಲ ಶಿಕ್ಷಕ ಹಾಗೂ ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ರಂಗನಾಥ ಉಪನ್ಯಾಸ ನೀಡಿದರು.

ಅರಸೀಕೆರೆಗೆ ಸಂಸದ ಪ್ರಜ್ವಲ್ ರೇವಣ್ಣ ಕೊಡುಗೆ ಏನು: ಕಾಟಿಕೆರೆ ಉಮೇಶ್

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರನ್, ಪೋಲಿಸ್ ವರಿಷ್ಠಾಧಿಕಾರಿ ಡಾ. ಗೊಪಾಲ ಬ್ಯಾಕೊಡ್, ಉಪ ಕಾರ್ಯದರ್ಶಿ ಮುಗನೂರುಮಠ, ಅಧಿಕಾರಿಗಳಾದ ಅಲ್ಲಾಭಕ್ಷ ಎಂ.ಎಸ್, ಶಂಕರ ಬೆಳ್ಳಂಕಿ, ಸಮಾಜದ ಮುಖಂಡರಾದ ಲೋಹಿತ ನಾಯಕರ, ಮೋಹನ ಗುಡಸಲಮನಿ, ಶಾಂತಕಾ ಗುಜ್ಜಳ, ಸುರೇಶಬಾಬು ತಳವಾರ, ಲಕ್ಮಣ ಬಕ್ಕಾಯಿ, ಡಾ. ಕಲ್ಮೇಶ ಹಾವೇರಿಪೇಟ, ಮಾರುತಿ ಬೀಳಗಿ, ಡಾ. ತ್ಯಾಗರಾಜ, ಮಂಜುನಾಥ ವಾಲೀಕಾರ ಅಶೋಕ ದೊಡ್ಡಮನಿ, ಕವಿತಾ ಕಬ್ಬೇರ, ಚಂದ್ರಶೇಖರ ಗುತ್ತಲ, ಸುರೇಶ ತಳವಾರ ಇದ್ದರು.

Latest Videos
Follow Us:
Download App:
  • android
  • ios