Asianet Suvarna News Asianet Suvarna News

ಆಕ್ರೋಶಕ್ಕೆ ಕಾರಣವಾದ ಸಂಸದೆ ಸುಮಲತಾ ಅಂಬರೀಶ್ ನಡೆ

  • ಸಂಸದೆ ಸುಮಲತಾ ಅಂಬರೀಶ್‌ಗೆ ರೈತ ಹಿತರಕ್ಷಣಾ ಸಮಿತಿ ಪರೋಕ್ಷ ಎಚ್ಚರಿಕೆ 
  •  ರೈತರ ಪೂರ್ವಭಾವಿ ಸಭೆಗೂ ಗೈರಾಗಿದ್ದರಿಂದ ತೀವ್ರ ಅಸಮಾಧಾನ 
farmers organisation unhappy over sumalatha ambareesh snr
Author
Bengaluru, First Published Oct 17, 2021, 4:12 PM IST
  • Facebook
  • Twitter
  • Whatsapp

ಮಂಡ್ಯ (ಅ.17): ರೈತರ ಪೂರ್ವಭಾವಿ ಸಭೆಗೂ (farmers Meet) ಗೈರಾಗಿದ್ದು ಈ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್‌ಗೆ (Sumalatha ambareesh) ರೈತ ಹಿತರಕ್ಷಣಾ ಸಮಿತಿ ಪರೋಕ್ಷ ಎಚ್ಚರಿಕೆ ನೀಡಿದೆ.

ಈ ಹಿಂದೆ ಮೈಶುಗರ್ ಕಾರ್ಖಾನೆ (My sugar) ಖಾಸಗೀಕರಣಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಸಂಸದೆ.  ಸಭೆಯಲ್ಲಿ ಎಲ್ಲರ ನಿರ್ಣಯದಂತೆ ಒಕ್ಕೋರಲಿಗೆ ಬರುವಂತೆ ಸಂಸದೆಗೆ (MP) ಮನವಿ ಮಾಡಲಾಗಿತ್ತು. ಆದರೆ ಇಂದು ನಡೆದ ತರ ಪೂರ್ವಭಾವಿ ಸಭೆಗೆ ಗೈರಾಗಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 

ನಾನು ಇಲ್ಲಿ ಸಂಸದ ಸ್ಥಾನದ ಕ್ಯಾಂಡಿಡೇಟ್ : ಸುಮಲತಾ ಲೇವಡಿ ಮಾಡಿದ ಮುಖಂಡ

ಮಂಡ್ಯದಲ್ಲಿ (Mandya) ರೈತ ಹಿತರಕ್ಷಣಾ ಸಮಿತಿ ಸದಸ್ಯೆ ಸುನಂದಾ ಜಯರಾಂ (Sunanda jayaram) ಮಾತನಾಡಿ ಸಂಸದರ ನಡೆಯ ಬಗ್ಗೆ ಹಲವು ಬಾರಿ ಮಾತನಾಡಿದ್ದೇವೆ. ಅವರ ಹೊಣೆಯನ್ನ ಅವರು ಅರಿತು, ನಾಳೆ ಸಿಎಂ ಬಸವರಾಜ ಬೊಮ್ಮಾಯಿ( Basavaraja Bommai) ಕರೆದಿರುವ ಸಭೆಗೆ ಬರಬೇಕು. ಸಭೆಯಲ್ಲಿ ಬಂದು ಸರ್ಕಾರಿ ಸ್ವಾಮ್ಯದಲ್ಲೆ ಕಾರ್ಖಾನೆ ಉಳಿಯಲು ಮಾತನಾಡಬೇಕಿದೆ‌ ಎಂದರು.

ಸಭೆಗೆ ಬರುವುದು ಅವರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಧರಣಿ ಸ್ಥಳಕ್ಕೆ ಬಂದಿಲ್ಲ ಎಂಬುದು ನಮಗೆ ದೊಡ್ಡ ವಿಷಯವಲ್ಲ. ಅವರ ಉದ್ದೇಶ ನಮಗೆ ಮುಖ್ಯವಾಗುತ್ತದೆ. ಇಲ್ಲಿಯವರೆಗೆ ಉದ್ದೇಶ ಏನೇ ಇರಲಿ.  ಸಭೆಯಲ್ಲಿ ನಾಳೆ ಸರ್ಕಾರಿ ಸ್ವಾಮ್ಯದಲ್ಲೆ ಕಾರ್ಖಾನೆ ಉಳಿಯುವಂತೆ ಅಭಿಪ್ರಾಯ ವ್ಯಕ್ತಪಡಿಸಬೇಕು.  ಇಲ್ಲದಿದ್ದರೆ ಸಂಸದರ ನಡೆಯನ್ನ ಖಂಡಿಸಬೇಕಾಗುತ್ತದೆ ಎಂದ ರೈತ ನಾಯಕಿ ಸುನಂದಾ ಜಯರಾಂ ಅಸಮಾಧಾನ ವ್ಯಕ್ತಪಡಿಸಿದರು. 

ಮೈಶುಗರ್‌ ನಿರ್ವಹಣೆ ವರದಿಗೆ ಉಪ ಸಮಿತಿ

 ಮಂಡ್ಯದ ಸರ್ಕಾರಿ ಸ್ವಾಮ್ಯದ ಮೈಶುಗರ್‌ ಕಾರ್ಖಾನೆ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಬೇಕೇ ಅಥವಾ ಸರ್ಕಾರವೇ ನಿರ್ವಹಣೆ ಮಾಡಬೇಕೇ ಎಂಬುದರ ಬಗ್ಗೆ ಚರ್ಚಿಸಲು ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಮಂಡ್ಯ ಮೈ ಶುಗರ್‌ ಕಾರ್ಖಾನೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಕಾರ್ಖಾನೆಯ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಬೇಕೇ ಅಥವಾ ಸರ್ಕಾರವೇ ನಡೆಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸುವ ಸಂಬಂಧ ಉಪಸಮಿತಿ ರಚಿಸಲು ಸಚಿವ ಸಂಪುಟ ಸಭೆ ಸಹಮತ ವ್ಯಕ್ತಪಡಿಸಿದೆ ಎಂದರು ಹೇಳಿದರು.

ಸಮಿತಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕ್ರೀಡಾ ಸಚಿವ ನಾರಾಯಣಗೌಡ ಇರಲಿದ್ದಾರೆ. ಸಮಿತಿಯು ಚರ್ಚೆ ನಡೆಸಿ ವರದಿ ನೀಡಲಿದೆ. ತದನಂತರ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು. ಸಮಿತಿಯು ವಿಸ್ತೃತವಾಗಿ ಅಧ್ಯಯನ ನಡೆಸಲಿದೆ. ಸಾಧಕ-ಬಾಧಕಗಳನ್ನು ಚರ್ಚಿಸಿದ ಬಳಿಕ ವರದಿ ಸಿದ್ದಪಡಿಸಿದೆ. ನಂತರ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರವು ನಿರ್ಣಯಿಸಲಿದೆ ಎಂದರು.

Follow Us:
Download App:
  • android
  • ios