Asianet Suvarna News Asianet Suvarna News

ನಾನು ಇಲ್ಲಿ ಸಂಸದ ಸ್ಥಾನದ ಕ್ಯಾಂಡಿಡೇಟ್ : ಸುಮಲತಾ ಲೇವಡಿ ಮಾಡಿದ ಮುಖಂಡ

  • ಮಂಡ್ಯ ಸಂಸದ ಸ್ಥಾನವನ್ನು ಎಷ್ಟು ದಿನ ಅಂತ ಹೊರ ರಾಜ್ಯದವರಿಗೆ ಗುತ್ತಿಗೆ ಕೊಡಲಾಗುತ್ತದೆ
  •  ಅದೇ ಸ್ಥಾನಕ್ಕೆ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ
JDS Leader Shrikantegowda taunt mandya MP sumalataha ambareesh  snr
Author
Bengaluru, First Published Sep 27, 2021, 11:25 AM IST
  • Facebook
  • Twitter
  • Whatsapp

ಮದ್ದೂರು (ಸೆ.27):  ಮಂಡ್ಯ (mandya) ಸಂಸದ ಸ್ಥಾನವನ್ನು ಎಷ್ಟು ದಿನ ಅಂತ ಹೊರ ರಾಜ್ಯದವರಿಗೆ ಗುತ್ತಿಗೆ ಕೊಡಲಾಗುತ್ತದೆ. ಅದೇ ಸ್ಥಾನಕ್ಕೆ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸಂಸದ ಸುಮಲತಾ ಅಂಬರೀಷ್ (Sumalatha ambareesh ) ಅವರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ಲೇವಡಿ ಮಾಡಿದರು. 

ತಾಲೂಕಿನ ಕೊಪ್ಪ ಗ್ರಾಮದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆಡಿಎಸ್ (JDS) ಮತ್ತು ಶಾಸಕ ಸುರೇಶ್‌ಗೌಡ ಹಾಗೂ ಕೊಪ್ಪ ಕ್ಷೇತ್ರದ ಜಿಪಂ ಟಿಕೆಟ್ ಆಕಾಂಕ್ಷಿ ದಾಕ್ಷಾಯಿಣಿ ರಾಮಣ್ಣ ಅಭಿಮಾನಿ ಗಳ ಒಳಗದ ವತಿಯಿಂದ ನಡೆದ ಬೃಹತ್ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಮಂಡ್ಯದಲ್ಲಿ ಸುಮಲತಾ ಮನೆ ನಿರ್ಮಾಣಕ್ಕೆ ಪೂಜೆ: ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ

ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಶ್ರೀಕಂಠೇಗೌಡ ಮುಂದಿನ ಲೋಕಸಭಾ ಚುನಾವಣೆಯಲ್ಲಿ (Loksabha Election) ಸುಮ ಲತಾ ಎದುರಾಳಿಯಾಗಿ ಸ್ಪರ್ಧಿಸಲು ಇಚ್ಚಿಸಿರುವುದು ಅವರ ಹೇಳಿಕೆಯಿಂದ ಬಹಿರಂಗಗೊಂಡಿದೆ. 

ಮಂಡ್ಯ ಗಂಟುಮೆಟ್ಟಿನ ಜಿಲ್ಲೆ. ಈ ಜಿಲ್ಲೆಯ ಮಣ್ಣಿನ ವಾಸನೆ ಮತ್ತು ಇಲ್ಲಿಯ ಸಮಸ್ಯೆ ಗೊತ್ತಿರುವ ವ್ಯಕ್ತಿ ಸಂಸದರಾಗಬೇಕೇ ಹೊರತು ಬೇರೆ ರಾಜ್ಯ ದವರನ್ನು ಕ್ಷೇತ್ರ ಸಂಸದರನ್ನಾಗಿ ಆಯ್ಕೆ ಮಾಡಿದರೆ ನಂತರ ಇವರನ್ನು ದೆಹಲಿ ಅಥವಾ ಬೆಂಗಳೂರಿನಲ್ಲಿ (Bengaluru) ಹುಡುಕಬೇಕಾಗುತ್ತದೆ ಎಂದು ಸಂಸದೆ ಸುಮಲತಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. 

ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!

ಮಂಡ್ಯ ಜನರಿಗೆ ಸುಲಭವಾಗಿ ಸಿಗುವ ಜನಪ್ರತಿ ನಿಧಿಗಳ ಆಗತ್ಯವಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾನು ಒಬ್ಬ ಪ್ರಬಲ ಆಕ್ಷಾಂಕಿಯಾಗಿದ್ದೇನೆ. ಜಿಲ್ಲೆಯಲ್ಲಿ ಕಳೆದ 50 ವರ್ಷಗಳಿಂದ ಹೋರಾಟ ಸಂಘಟನೆಯ ಮೂಲಕ ಕೆಲಸ ಮಾಡಿಕೊಂಡು ಬಂದಿದ್ದೇನೆ. 1982-83 ಉಪ ಚುನಾಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಕೆಲಸ ಮಾಡುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿ ಜೆಡಿಎಸ್ ಪಕ್ಷದ ಸಂಘಟನೆಗೆ ದುಡಿದಿದ್ದೇನೆ. 

ಹೀಗಾಗಿ ಪಕ್ಷದ ವರಿಷ್ಠರು ನನ್ನನ್ನು ಪರಿಗಣಿಸುವ ವಿಶ್ವಾಸವಿದೆ ಎಂದರು. ಜೆಡಿಎಸ್ ವರಿಷ್ಠರು ಒಂದು ವೇಳೆ ಮಂಡ್ಯದ ಲೋಕಸಭಾ ಸ್ಪರ್ಧಿಸಲು ಅವಕಾಶ ನೀಡದಿದ್ದಲ್ಲಿ ಮಂಡ್ಯ, ಮದ್ದೂರು ಹಾಗೂ ನಾಗಮಂಗಲ ಕ್ಷೇತ್ರದಿಂದ ವಿಧಾನ ಸಭಾ ಸ್ಪರ್ಧೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎನ್ನುವ ಮೂಲಕ ಕ್ಷೇತ್ರಗಳ ಹಾಲಿ ಶಾಸಕರಾದ ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ ಹಾಗೂ ಸುರೇಶ್ ಗೌಡರಿಗೆ ಟಾಂಗ್ ನೀಡಿದರು.

 ಈ ವೇಳೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜಿ.ಟಿ.ಶ್ರೀನಿವಾಸ್, ಕಾರ್ಯಾ ಧ್ಯಕ್ಷ ಚಿಕ್ಕೊನಹಳ್ಳಿ ತಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ಜೆಡಿಎಸ್ ಹಿಂದುಳಿ ವರ್ಗದ ಘಟಕದ ಅಧ್ಯಕ್ಷ ತಮ್ಮಣ್ಣನಾಯಕ, ಜಿಪಂ ಮಾಜಿ ಸದಸ್ಯೆ ರೇಣುಕಾರಾಮಕೃಷ್ಣ, ಮುಖಂಡರಾದ ನಾಗೇಶ್, ರಾಮು, ಕೊಪ್ಪ ಜಿಪಂ ಕ್ಷೇತ್ರದ ಟಿಕೆಟ್ ಆಕ್ಷಾಂಕಿ ದಾಕ್ಷಾಯಿಣಿ ರಾಮಣ್ಣ ಇದ್ದರು

Follow Us:
Download App:
  • android
  • ios