ಕಲಬುರಗಿ: ಒಣಗಿದ ತೊಗರಿ ಬೆಳೆ; ಅನ್ನದಾತರು ಕಂಗಾಲು

ಕಲಬುರಗಿ ಜಿಲ್ಲೆಯ ಅಫಜಲ್ಪುರದ 66347 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ, 53000 ಹೆಕ್ಟೇರ್‌ ನೆಟೆ ರೋಗಕ್ಕೆ ಬಲಿ 

Farmers Faces Problems Due to Toor Dal Crop Loss in Kalaburagi grg

ಅಫಜಲ್ಪುರ(ಡಿ.20):  ತಾಲೂಕಿನ ಹಲವಡೆ ತೊಗರಿ ಬೆಳೆ ಕಾಯಿಕಟ್ಟಿಕಾಳು ತುಂಬುವ ಹಂತದಲ್ಲೇ ಹಠಾತ್ತಾಗಿ ಬೆಳೆ ಒಣಗಿ ಹಾನಿಯಾಗಿದ್ದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 66347 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ 53000 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾಳಾಗಿದೆ.

ತಾಲೂಕಿನ ಮಣ್ಣೂರ ಶಿವಬಾಳನಗರ ರಾಮನಗರ ಉಪ್ಪಾರವಾಡಿ ದಯಾನಂದನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ದಿಕ್ಸಂಗಾ ಉಡಚಣ ಉಡಚಣಹಟ್ಟಿಹಿರಿಯಾಳ ಭೋಸಗಾ ದುದ್ದುಣಗಿ ಮಂಗಳೂರ ಭಂಕಲಗಾ ಅಳ್ಳಗಿ ಗೌರ ಘತ್ತರಗಾ ಶಿವಪುರ ಬೆನ್ನಟ್ಟಿಹವಳಗಾ ಹಿಂಚಗೇರಾ ಮಲ್ಲಾಬಾದ ಅತನೂರ ರೇವೂರ ಕುಲಾಲಿ ಬಡದಾಳ ಅರ್ಜುಣಗಿ ಆನೂರ ಬಿಲ್ಲಾಡ ಚವಡಾಪುರ ಗೊಬ್ಬೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆದ ತೊಗರಿ ಬೆಳೆ ಅರ್ಧದಷ್ಟು ಹಾಳಾದರೆ, ಕೆಲವು ರೈತರ ಸಂಪರ್ಣ ಬೆಳೆ ಒಣಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಇನ್ನಾರ್ಧ ಬೆಳೆ ಒಣಗಲು ಆರಂಭಿಸಿದ್ದರಿಂದ ರೈತರ ವರ್ಗದಲ್ಲಿ ತೀವ್ರ ಆತಂಕ ಮೂಡಿಸಿದೆ.

ದುಂದು ವೆಚ್ಚಕ್ಕೆ ಸಾಮೂಹಿಕ ವಿವಾಹವೇ ಮದ್ದು: ಸಿದ್ದರಾಮಯ್ಯ

ಅನೇಕ ಹೊಲಗಳಲ್ಲಿ ಭಾಗಶಃ ತೊಗರಿ ಬೆಳೆ ಅಲ್ಲಲ್ಲಿನ ಗಿಡಗಳು ಒಣಗಿ ನಿಂತುಕೊಂಡಿವೆ. ಕೆಲವು ಹೊಲಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಒಣಗಿ ನಿಂತಿವೆ. ಇದು ನೆಟೆ ರೋಗದಿಂದ ಗಿಡ ಒಣಗುತ್ತಿದೆ ಎನ್ನಲಾಗಿದೆ. ಮತ್ತೊಂದಡೆ ತೇವಾಂಶ ಕೊರತೆ ಎನ್ನಲಾಗಿದೆ. ಈ ನಡುವೆ ನೆಟೆ ರೋಗ ನಿವಾರಣೆಗೆ ಗಿಡದ ಬುಡಕ್ಕೆ ಔಷಧಿ ಸಿಂಪರಣೆಗೆ ಅಧಿಕಾರಿಗಳ ನೀಡಿದ ಸಲಹೆ ಇದ್ಯಾವುದೋ ಫಲ ನೀಡದೆ ಬೆಳೆ ಒಣಗಿ ನಷ್ಟವಾಗುತ್ತಿರುವುದು ರೈತರ ಸಮುದಾಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪ್ರಸಕ್ತ ಮುಂಗಾರು ಹಂಗಾಮಿನ ಅತಿವೃಷ್ಟಿ ಅನಾವೃಷ್ಟಿಯಿಂದ ಶೇ.50ರಷ್ಟು ತೊಗರಿ ನಷ್ಟವಾದರೆ ಇನ್ನೂಳಿದ ಶೇ 50ರಷ್ಟುತೊಗರಿ ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣಗುತ್ತಿರುವುದು ಆರ್ಥಿಕ ವರ್ಷದಲ್ಲಿ ತೊಗರಿ ಇಳುವರಿ ಪ್ರಮಾಣ ಬಾರಿ ಕುಂಠಿಗೊಳ್ಳುವ ಆತಂಕ ಎದುರಾಗಿದೆ.ಅತಿವೃಷ್ಟಿಗೆ ತುತ್ತಾದ 17 ಸಾವಿರ ಹೆಕ್ಟೇರ್‌ ತೊಗರಿ ಬೆಳೆಯಿಂದ ಕೈಸುಟ್ಟುಕೊಂಡ ರೈತರಿಗೆ ಅಳಿದುಳಿದ ತೊಗರಿ ತಪ್ಪಾದರೂ ಕೈಹಿಡಿಯಬಹುದು ಎಂಬ ಬಹುತೇಕ ರೈತರ ನಿರೀಕ್ಷೆ ಹುಸಿಯಾಗತೊಡಗಿದೆ.ಈ ಕುರಿತು ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಬೆಳೆ ಒಣಗಿದ ಹೊಲಗಳಿಗೆ ಭೇಟಿ ನೀಡಿ ಇದಕ್ಕೆ ಕಾರಣ ಹುಡಬೇಕಾಗಿದೆ. ಈ ಕುರಿತು ಮುಂಜಾಗೃತಾ ಕ್ರಮವಾಗಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಲು ಮುಂದಾಗಬೇಕಾಗಿದೆ.

'ಆಳಂದದಲ್ಲಿ ತೊಗರಿ ಒಣಗಿ 440 ಕೋಟಿ ರು. ನಷ್ಟ'

ನೆಟೆರೋಗದಿಂದ ಸಂಪೂರ್ಣ ಬೆಳೆ ಒಣಗಿದ್ದರಿಂದ ರೈತರು ಕಣ್ಣೀರು ಹಾಕುವಂತಾಗಿದೆ. ಕೂಡಲೇ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಿದರೆ ರೈತರು ಸಾಲದ ಬಾಧೆಯಿಂದ ಹೊರಬರಬಹುದು. ಸರ್ಕಾರ ಬಂಡವಾಳ ಶಾಹಿಯವರಿಗೆ ಮಾಡುವ ಸಹಕಾರವನ್ನು ರೈತನ ಬದುಕಿಗೆ ಒಂದಿಷ್ಟು ಆರ್ಥಿಕ ಸಹಾಯ ಮಾಡಿಕೊಡಬೇಕಿದೆ.

ಕರಜಗಿ ಹೋಬಳಿ ವ್ಯಾಪ್ತಿಯಲ್ಲಿ ಸಂಪರ್ಣವಾಗಿ ನೆಟೆ ರೋಗ ಬಾಧೆಯಿಂದ ಬೆಳೆ ಒಣಗಿ ನಿಂತಿದೆ. ಸರ್ಕಾರ ಸದ್ಯ ತೊಗರಿ ಬೆಳೆ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ವರದರಾಜ ಅಕಮಂಚಿ ಸೇತುಮಾಧವ ಅವಧಾನಿ ಭೀಮಾಶಂಕರ ಪೂಜಾರಿ ಲಕ್ಷ್ಮಿಕಾಂತರಾವ ಕಮಲಾಪೂರ ವಿಠ್ಠಲ ಹಳಿಮನಿ ಅಣ್ಣಪ್ಪ ಬಿಜಾಪುರ ಭೀಮಣ್ಣ ಹಡಲಗಿ ಗುರಪ್ಪ ಕರೂಟಿ ಬಸಪ್ಪ ಹಿರೊಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios