ಬಳ್ಳಾರಿ: ಫ್ಯಾಕ್ಟ್ರಿಗಳಿಗೆ ಬಿಡೋ ನೀರು ನಿಲ್ಲಿಸಿ, ರೈತರಿಗೆ ಮೊದಲು ನೀಡಿ: ಅನ್ನದಾತನ ಅಳಲು..!
ನೀರಿಲ್ಲದೇ ಕಾರ್ಖಾನೆ ನಾಲ್ಕು ದಿನ ನಿಂತರೆ ಯಾರಿಗೂ ನಷ್ಟವಾಗೋದಿಲ್ಲ ಆದ್ರೇ, ಈ ತಿಂಗಳ ಅಂತ್ಯದವರೆಗೂ ಬೆಳೆಗೆ ನೀರನ್ನು ನೀಡದೇ ಇದ್ರೇ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಮಣ್ಣು ಪಾಲಾಗಲಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ನ.09): ಬೆಳೆದು ನಿಂತ ಬೆಳೆಗೆ ನೀರಿಲ್ಲವೆಂದು ರೈತರು ಪರದಾಡುತ್ತಿರೋವಾಗಲೇ ಇಂತಿಷ್ಟು ನೀರು ನೀಡಬೇಕೆನ್ನುವ ಕೋಟಾದ ಹೆಸರಲ್ಲಿ ನಿರಂತರವಾಗಿ ತುಂಗಭದ್ರಾ ಜಲಾಶಯದ ನೀರನ್ನು ಕಾರ್ಖಾನೆಗೆ ಹರಿಸಲಾಗುತ್ತಿದೆ. ನೀರಿಲ್ಲದೇ ಕಾರ್ಖಾನೆ ನಾಲ್ಕು ದಿನ ನಿಂತರೆ ಯಾರಿಗೂ ನಷ್ಟವಾಗೋದಿಲ್ಲ ಆದ್ರೇ, ಈ ತಿಂಗಳ ಅಂತ್ಯದವರೆಗೂ ಬೆಳೆಗೆ ನೀರನ್ನು ನೀಡದೇ ಇದ್ರೇ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಮಣ್ಣು ಪಾಲಾಗಲಿದೆ. ಸರ್ಕಾರದ ತಾರತಮ್ಯ ನೀತಿ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ನವೆಂಬರ್ ಹತ್ತರಂದು ಕಾಲೂವೆಯ ನೀರು ಬಂದಾಗಲಿದೆ.
ತುಂಗಭಧ್ರಾ ಮಂಡಳಿಯಿಂದ ಕಾರ್ಖಾನೆಗಳಿಗೆ ನೀರು ರೈತರಿಗೆ ಮಾತ್ರ ಕಣ್ಣಿರೇ ಗತಿ... ಸರ್ಕಾರ ಮತ್ತು ತುಂಗಭದ್ರಾ ಆಡಳಿತ ಮಂಡಳಿ ದ್ವಂದ್ವ ನಿಲುವಿನಿಂದಾಗಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರೋ ಅನ್ನದಾತ.. ಹೌದು, ಇದೀಗ ತುಂಗಭದ್ರಾ ಜಲಾಶಯದ ಹೆಚ್ಎಲ್ಸಿ ಕಾಲೂವೆಯ ಮೂಲಕ ಹರಿಯುತ್ತಿರೋ ನೀರು ಇದೇ ತಿಂಗಳ ಹತ್ತನೇ ತಾರೀಖು ನಿಲ್ಲಲಿದೆ. ಆದ್ರೇ, ನಿಯಮದಂತೆ ಕಾರ್ಖಾನೆಗಳಿಗೆ ಮಾತ್ರ ನೀರನ್ನು ನಿರಂತರವಾಗಿ ಹರಿಸಲಾಗುತ್ತಿದೆ ಎನ್ನುವುದರು ರೈತರ ಆರೋಪ.. ಮುಂಗಾರು ಆರಂಭದಲ್ಲಿ ತುಂಗಭದ್ರ ಆಡಳಿತ ಮಂಡಳಿ ಸಭೆ ಮಾಡೋ ಮೂಲಕ ನವೆಂಬರ್ ಮೂವತ್ತವರೆಗೂ ನೀರು ಬಿಡೋದಾಗಿ ಆದೇಶ ಹೊರಡಿಸಿತ್ತು. ಆದ್ರೇ, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ನೂರು ಟಿಎಂಸಿ ಸಾಮಾರ್ಥ್ಯದ ಜಲಾಶಯ 70ರಷ್ಟು ಮಾತ್ರ ತುಂಬಿತ್ತು. ಹೀಗಾಗಿ ನವೆಂಬರ್ ಹತ್ತಕ್ಕೆ ನೀರು ನಿಲ್ಲಿಸೋದಾಗಿ ಇದೀಗ ಹೊಸ ಆದೇಶ ಹೊರಡಿಸಿದೆ. ಆದ್ರೇ, ಕಾರ್ಖಾನೆಗಳಿಗೆಂದು ಮೀಸಲಿಟ್ಟಿರೋ ಒಂದುವರೆ ಟಿಎಂಸಿ ನೀರನ್ನು ಹೊಲಗಳಿಗೆ ಹರಿಸಿ, ಹಿಂಗಾರು ಮಳೆ ಬಂದಾಗ ಅದೇ ನೀರನ್ನು ಕಾರ್ಖಾನೆಗೆ ನೀಡಿ ಎನ್ನುವುದು ರೈತ ಮಾದವ ರೆಡ್ಡಿ ಸೇರಿದಂತೆ ಇತರೆ ರೈತರ ವಾದವಾಗಿದೆ.
ಪಡಿತರ ವಿತರಕರಿಂದ ಹಣ ವಸೂಲಿ?: ದುಡ್ಡು ನೀಡದಿದ್ರೆ ನಡೆಯುತ್ತೆ ರೈಡ್..!
ಕಾರ್ಖಾನೆಗಳಿಗೆ ನೀರು ನೀಡೋದು ನಿಲ್ಲಿಸಿ ಎಂದ ಈಶ್ವರಪ್ಪ
ಫ್ಯಾಕ್ಟ್ರಿಗಳಿಗೆ ನೀರಿಲ್ಲದೇ ಒಂದು ನಾಲ್ಕು ದಿನ ನಿಂತ್ರೆ ಯಾರಿಗೂ ನಷ್ಟವಾಗೋದಿಲ್ಲ. ಆದ್ರೇ, ಬೆಳೆದು ನಿಂತ ಬೆಳೆ ಹಾಳಾಗಿ ಹೋದ್ರೇ, ಯಾರು ಹೊಣೆ ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಅಲ್ಲದೇ ಕಾರ್ಖಾನೆಗೆ ನೀಡೋ ಒಂದುವರೆ ಟಿಎಂಸಿ ನೀರಿನ ಜೊತೆ ಜಲಾಶಯದಲ್ಲಿ ಕನಿಷ್ಠ ಮೂರು ಟಿಎಂಸಿ ಡೆಡ್ ಸ್ಟೋರೆಜ್ ನೀರು ಇರುತ್ತದೆ. ರೈತರಿಗೆ ಅದನ್ನು ಸಹ ನೀಡಬಹುದು. ಮಳೆ ಬರುವ ವಿಶ್ವಾಸವಿದೆ. ಹಿಂಗಾರು ಮಳೆ ಬಂದಾಗ ಕೋಟಾದ ಪ್ರಕಾರ ಫ್ಯಾಕ್ಟ್ರಿಗಳಿಗೆ ನೀರು ನೀಡಬಹುದು ಈ ಬಗ್ಗೆ ಉಸ್ತುವಾರಿ ಸಚಿವರು ಗಂಭೀರವಾಗಿರಬೇಕು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಳೆ ಉಳಿಸೋದು ಮುಖ್ಯನಾ..? ಕಾರ್ಖಾನೆ ಹಿತಾಸಕ್ತಿ ಮುಖ್ಯವೇ ಎನ್ನುವ ಪ್ರಶ್ನೆ..?
ಕೊಟ್ಟ ಮಾತಿನಂತೆ ನೆವಂಬರ್ ಅಂತ್ಯದವರೆಗೂ ನೀರು ಬಿಡದೇ ಇದ್ರೇ, ಹತ್ತಿ, ಮೆಣಸಿನಕಾಯಿ ಮತ್ತು ಭತ್ತ ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಲಿವೆ. ಹೀಗಾಗಿ ಈ ಬಗ್ಗೆ ಜನಪ್ರತಿನಿಧಿಗಳು ಮತ್ತೊಮ್ಮೆ ಗಂಭೀರವಾಗಿ ಚಿಂತನೆ ಮಾಡೋ ಮೂಲಕ ಫ್ಯಾಕ್ಟ್ರಿಗಳಿಗೆ ಹರಿಸೋ ನೀರನ್ನು ರೈತರಿಗೆ ನೀಡಬೇಕಿದೆ.. ಇಲ್ಲವಾದಲ್ಲಿ ಅನ್ನದಾತನನ್ನು ಉಳಿಸಿಕೊಳ್ಳುವದು ಕಷ್ಟವಾಗಲಿದೆ.