ಪಡಿತರ ವಿತರಕರಿಂದ ಹಣ ವಸೂಲಿ?: ದುಡ್ಡು ನೀಡದಿದ್ರೆ ನಡೆಯುತ್ತೆ ರೈಡ್..!
ಪ್ರತಿಭಟನೆಗೆ ಪ್ರತಿಯೊಂದು ಅಂಗಡಿಯಿಂದ ಒಂದರಿಂದ ಎರಡು ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಆಡಿಯೋ ಒಂದು ಭಾರೀ ವೈರಲ್ ಆಗಿದೆ. ಇನ್ನೂ ಹಣ ನೀಡದೇ ಇದ್ರೇ, ಒತ್ತಡ ಹಾಕಿಸೋದು ಫುಡ್ ಡಿಪಾರ್ಟ್ ಅಧಿಕಾರಿಗಳಿಂದ ದಾಳಿ ಮಾಡಿಸೋದು ಮಾಡ್ತಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ನ.08): ಪಡಿತರ ವಿತರಕರಿಂದ ತಿಂಗಳಿಗೆ ಇಂತಿಷ್ಟು ಹಣ ವಸೂಲಿ ಮಾಡಲಾಗುತ್ತಿದೆಂತೆ. ಹಣ ಕೊಡದೇ ಇದ್ರೇ, ಫುಡ್ ಡಿಪಾರ್ಟ್ಮೆಂಟ್ ಅಧಿಕಾರಿಗಳಿಂದ ದಾಳಿ ಮಾಡಿಸೋದು ಇಲ್ಲವಾದ್ರೇ, ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸುವ ಆರೋಪ ಕೇಳಿ ಬಂದಿದೆ. ಇನ್ನೂ ಇಲ್ಲಿ ವಸೂಲಿ ಮಾಡ್ತಿರೋದು ಮತ್ಯಾರು ಅಲ್ಲ ಪಡಿತರ ವಿತರಕ ಸಂಘಟನೆಯೇ ಅನ್ನೋದು ವಿಶೇಷ. ಪ್ರತಿಭಟನೆಗೆ ಹಣ ನೀಡಬೇಕು ಎಂದಿರೋ ಆಡಿಯೋ ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಯಾಕೆ ಈ ವಸೂಲಿ ದಂಧ ನಡೆಯುತ್ತಿದೆ ಅಂತೀರಾ ಈ ಸ್ಟೋರಿ ನೋಡಿ..
ನವೆಂಬರ್ 9ರಂದು ನಡೆಯಲಿರೋ ಪ್ರತಿಭಟನೆಗೆ ಹಣ ವಸೂಲಿ ಆರೋಪ
ದಶಕಕಗಳಿಂದಲೂ ಪಡಿತರ ವಿತರಕ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದ ಸಂಘಟನೆ ಮೇಲೆ ಇದೀಗ ಹಣಕೇಳುತ್ತಾರೆನ್ನುವ ಗಂಭೀರ ಆರೋಪ…ರಾಜ್ಯಾಧ್ಯಕ್ಷ ಕೃಷ್ಣಪ್ಪ ಮತ್ತು ಸಂಘಟನೆ ಮುಖಂಡ ಬಳ್ಳಾರಿಯ ತಾಯಣ್ಣ ಮೇಲೆ ವಸೂಲಿ ಮಾಡ್ತಿರೋ ಆರೋಪ.
Ration ಅಂಗಡಿಗಳ ಮುಷ್ಕರ: ಈ ತಿಂಗಳು ರಾಜ್ಯದಲ್ಲಿ ಪಡಿತರ ವಿತರಣೆ ತಡ?
ಹೌದು, ರಾಜ್ಯ ಸರ್ಕಾರ ಇದೀಗ ಹತ್ತು ಕೆಜಿ ಅಕ್ಕಿ ಬದಲು ಕೇವಲ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದರಿಂದ ವಿತರಕರಿಗೆ ಬರುವ ಕಮಿಷನ್ ಹಣ ಕಡಿಮೆಯಾಗಿ ನಿರ್ವಹಣೆ ಮಾಡೋದು ಕಷ್ಟವಾಗಿದೆ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 9 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಡಿತರ ವಿತಕರ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದ್ರೇ, ಈ ಪ್ರತಿಭಟನೆಗೆ ಪ್ರತಿಯೊಂದು ಅಂಗಡಿಯಿಂದ ಒಂದರಿಂದ ಎರಡು ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಆಡಿಯೋ ಒಂದು ಭಾರೀ ವೈರಲ್ ಆಗಿದೆ. ಇನ್ನೂ ಹಣ ನೀಡದೇ ಇದ್ರೇ, ಒತ್ತಡ ಹಾಕಿಸೋದು ಫುಡ್ ಡಿಪಾರ್ಟ್ ಅಧಿಕಾರಿಗಳಿಂದ ದಾಳಿ ಮಾಡಿಸೋದು ಮಾಡ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೇವಲ ಪ್ರತಿಭಟನೆಗೆ ಮಾತ್ರವಲ್ಲದೇ ತಿಂಗಳು ತಿಂಗಳು ಸಾವಿರ ರೂಪಾಯಿ ಕಡ್ಡಾಯವಾಗಿ ನೀಡಲೇ ಬೇಕು. ಇಲ್ಲವಾದಲ್ಲಿ ಅಂಗಡಿ ಬಂದ್ ಮಾಡಿಸೋ ಬೆದರಿಕೆಯನ್ನು ಸಂಘಟನೆಯವರು ಹಾಕುತ್ತಿದ್ದಾರೆಂದು ಬಳ್ಳಾರಿ ಕೆಲ ಪಡಿತರ ವಿತರಕ ಸಂಘಟನೆಯವರು ಆರೋಪಿಸಿದ್ದಾರೆ.
ಸಂಘಟನೆ ಮಾಡೋ ಹೆಸರಲ್ಲಿ ನಡೆಯುತ್ತಿಯದೆಯಂತೆ ನಿರಂತರ ವಸೂಲಿ
ಇನ್ನೂ ರಾಜ್ಯದಲ್ಲಿ 22 ಸಾವಿರಕ್ಕೂ ಹೆಚ್ಚು ಪಡಿತರ ವಿತಕರ ಅಂಗಡಿಗಳಿದ್ದು, ಒಬ್ಬೊಬ್ಬರಿಂದ ಒಂದು ಸಾವಿರ ಅಂದ್ರೂ ಕೋಟಿಗಟ್ಟಲೇ ಹಣ ಆಗುತ್ತದೆ. ಇದೆಲ್ಲವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನಲಾಗುತ್ತಿದೆ. ಆದ್ರೇ, ಈ ಬಗ್ಗೆ ಸ್ಪಷ್ಟಕರಣ ನೀಡಿರೋ ಸಂಘಟನೆ ಮುಖಂಡ ತಾಯಣ್ಣ ಬೆಂಗಳೂರಿನಲ್ಲಿ ಪ್ರತಿಭಟನೆ ಅಂದ್ರೇ, ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಅದಕ್ಕೆಲ್ಲ ಲೆಕ್ಕಪತ್ರ ಇರುತ್ತದೆ. ಖರ್ಚು ನಿಭಾಯಿಸಲು ಹಣ ಕೇಳಿರೋದು ನಿಜ ಆದ್ರೇ, ಯಾರಿಗೂ ಒತ್ತಡ ಹಾಕಿಲ್ಲ ನೀಡಿದ ಮತ್ತು ನೀಡದವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ. ಇನ್ನೂ ಇದೀಗ ಆರೋಪ ಮಾಡಿದವರು ಸಂಘಟನೆಯಲ್ಲಿಯೇ ಇಲ್ಲ. ತಿಂಗಳು ತಿಂಗಳು ಹಣ ವಸೂಲಿ ಬಗ್ಗೆ ದಾಖಲೆ ಇದ್ರೇ, ನೀಡಲಿ ಎಂದು ಸವಾಲು ಹಾಕಿದ್ದಾರೆ.
ಆರೋಪ ಪ್ರತ್ಯಾರೋಪ ಬಿಡಿ ಮೊದಲು ರೇಷನ್ ನೀಡಿ
ಸಂಘಟನೆ ಮತ್ತು ಸದಸ್ಯರ ಮಧ್ಯೆ ಪರಸ್ಪರ ಆರೋಪ ಪ್ರತ್ಯಾರೋಪ ಏನೇ ಇರಲಿ. ಮೊದಲು ಜನರಿಗೆ ಪ್ರಮಾಣಿಕವಾದ ಪಡಿತರ ಧಾನ್ಯವನ್ನು ಸರಬರಾಜು ಮಾಡಬೇಕಿದೆ. ಇದರ ಜೊತೆ ಸೂಕ್ತ ತನಿಖೆ ಮಾಡಿದ್ರೆ, ಸಂಘಟನೆ ತಪ್ಪೋ ಸಂಘದಲ್ಲಿರೋ ಕೆಲ ಸದಸ್ಯರು ತಪ್ಪೋ ಅನ್ನೋದು ಬಯಲಿಗೆ ಬರಲಿದೆ.