*  ಬಗರ್‌ಹುಕುಂ ತೆರವು ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಮುಂಡರಗಿ ಮಹಿಳೆ*  ಶವಾಗಾರದ ಎದುರು ಗ್ರಾಮಸ್ಥರ ಪ್ರತಿಭಟನೆ*  ಹೈಡ್ರಾಮಾ ಬಳಿಕ ಅಂತ್ಯಸಂಸ್ಕಾರ 

ಗದಗ(ಮಾ.09):  ಮುಂಡರಗಿ ತಾಲೂಕಿನ ಕೆರೂರ ಗ್ರಾಮದಲ್ಲಿ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ಜಮೀನು ತೆರವಿಗೆ ಮುಂದಾಗಿದ್ದ ವೇಳೆ ಅದನ್ನು ವಿರೋಧಿಸಿ ರೈತ ಮಹಿಳೆ(Farmer Woman) ವಿಷ ಸೇವಿಸಿದ್ದ ಜಾಗದಲ್ಲೇ ಅವರ ಅಂತ್ಯಕ್ರಿಯೆ(Funeral) ನೆರವೇರಿಸುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ದಿನವಿಡೀ ನಡೆದ ಹತ್ತು ಹಲವು ಬೆಳವಣಿಗೆ, ಹೈಡ್ರಾಮಾ, ಪ್ರತಿಭಟನೆ, ಆಕ್ರೋಶ, ಆತಂಕ, ಗೊಂದಲಗಳ ಬಳಿಕ ರೈತ ಮಹಿಳೆ ನಿರ್ಮಲಾ ಪಾಟೀಲ್‌ ಅಂತ್ಯಸಂಸ್ಕಾರವನ್ನು ಮಂಗ​ಳ​ವಾರ ರಾತ್ರಿ ಮಾಡಲಾಯಿತು.

ತಲೆತಲಾಂತ​ರ​ಗ​ಳಿಂದ ಅರಣ್ಯ ಭೂಮಿ​ಯನ್ನು ಸಾಗು​ವಳಿ ಮಾಡಿ​ಕೊಂಡು ಬಂದಿದ್ದ ಮಹಿ​ಳೆ​ಯೊಬ್ಬರು ಅರಣ್ಯ ಇಲಾ​ಖೆಯ ಬಗರ್‌ಹುಕುಂ ಜಮೀನು(Land) ಸಾಗು​ವ​ಳಿ​ದಾ​ರರ ತೆರವು ಕಾರ್ಯಾ​ಚ​ರ​ಣೆ ವಿರೋಧಿಸಿ ವಿಷ ಸೇವಿ​ಸಿ ಮೃತಪಟ್ಟಿದ್ದು, ರಾಜ್ಯಾ​ದ್ಯಂತ(Karnataka) ಸಂಚ​ಲನಕ್ಕೆ ಕಾರ​ಣ​ವಾ​ಗಿತ್ತು. ಸೋಮ​ವಾರ ತಡರಾತ್ರಿಯೇ ಅರಣ್ಯ ಇಲಾಖೆ ಸಿಬ್ಬಂದಿ​ಯನ್ನು ಕೆಲೂರು ಗ್ರಾಮ​ದಲ್ಲಿ ಕೂಡಿ ಹಾಕಿ ಗ್ರಾಮ​ಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗ​ಳ​ವಾರ ಬೆಳ​ಗಾ​ಗು​ತ್ತಿ​ದ್ದಂತೆ ಗದಗ ಜಿಲ್ಲಾ ಆಸ್ಪ​ತ್ರೆ​ಯಲ್ಲಿ ರೈತ ಮಹಿ​ಳೆಯ ಶವ​ವಿದ್ದ ಶವಾ​ಗಾ​ರದ ಬಳಿ ನೂರಾರು ಸಂಖ್ಯೆ​ಯಲ್ಲಿ ಗ್ರಾಮ​ಸ್ಥರು, ಹೋರಾ​ಟ​ಗಾ​ರರು ಜಮಾ​ವ​ಣೆ​ಗೊಂಡು ಸರ್ಕಾರ, ಅರಣ್ಯ ಇಲಾ​ಖೆಯ ವಿರುದ್ಧ ಭಾರೀ ಪ್ರತಿ​ಭ​ಟನೆ(Protest) ನಡೆ​ಸಿ​ದರು.

ACB Raid: ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್‌ ಬಲೆಗೆ

ಕೆಲೂರ ಗ್ರಾಮ​ಸ್ಥರ ಆಕ್ರೋ​ಶಕ್ಕೆ ಹಲ​ವಾರು ಪ್ರಗ​ತಿ​ಪರ, ಜನ​ಪರ ಸಂಘ​ಟ​ನೆ​, ರಾಜ​ಕೀಯ ಪಕ್ಷ​ಗಳು ಸಾಥ್‌ ನೀಡಿದ ಹಿನ್ನೆ​ಲೆ​ಯಲ್ಲಿ ಜಿಲ್ಲಾ ಆಸ್ಪ​ತ್ರೆ​ಯಲ್ಲಿ ಮಂಗ​ಳ​ವಾರ ಸಂಜೆ​ ​ವ​ರೆಗೂ ನಿರಂತರ ಪ್ರತಿ​ಭ​ಟ​ನೆ​ಗಳು ನಡೆದವು. ಪ್ರತಿ​ಭ​ಟ​ನೆ ತೀವ್ರ​ತೆ​ ಅರಿತ ಜಿಲ್ಲಾ​ಧಿ​ಕಾರಿ ಸುಂದ​ರೇ​ಶ​ಬಾಬು, ಎಸ್ಪಿ ಶಿವ​ಪ್ರ​ಕಾಶ ದೇವ​ರಾಜು ಆಸ್ಪ​ತ್ರೆಗೆ ಆಗ​ಮಿಸಿ, ಕುಟುಂಬ​ಸ್ಥ​ರಿಗೆ ಸಾಂತ್ವನ ಹೇಳಿದರು. ಸರ್ಕಾ​ರ​ದಿಂದ ಘೋಷಣೆ ಮಾಡಿ​ರುವ ಪರಿ​ಹಾರ ಕುರಿತು ಮಾಹಿತಿ ನೀಡಿದರು. ಈ ವೇಳೆಯೂ ಗ್ರಾಮಸ್ಥರು ಪ್ರತಿಭಟನೆ ಕೈಬಿಡಲು ಒಪ್ಪಲಿಲ್ಲ.

ಆನಂತರ ಮಹಿ​ಳೆಯ ಶವ​ವನ್ನು ಜಿಲ್ಲಾ​ಧಿ​ಕಾರಿ ಕಚೇರಿ ಮುಂಭಾ​ಗ​ದ​ಲ್ಲಿಟ್ಟು ರೈತ ಮಹಿ​ಳೆಯ ಸಾವಿಗೆ ನ್ಯಾಯ ​ಸಿ​ಗು​ವ​ವ​ರೆಗೂ ಹೋರಾಟ ನಡೆ​ಸಲು ಮುಂದಾದರು. ಜಿಲ್ಲಾ​ಧಿ​ಕಾರಿ ಸೇರಿ​ದಂತೆ ಹಿರಿಯ ಅಧಿ​ಕಾ​ರಿ​ಗಳ ಮಧ್ಯ​ಸ್ಥಿ​ಕೆ​ಯಲ್ಲಿ ಪರಿ​ಸ್ಥಿತಿ ತಿಳಿ​ಗೊ​ಳಿಸಿ, ಮೃತ ಮಹಿ​ಳೆಯ ಶವ​ವನ್ನು(Deadbody) ಅಂತ್ಯಸಂಸ್ಕಾ​ರ​ಕ್ಕಾಗಿ ಗ್ರಾಮಕ್ಕೆ ಸೂಕ್ತ ಪೊಲೀಸ್‌(Police) ಬಂದೋಬಸ್ತ್‌ನಲ್ಲಿ ಕಳುಹಿಸಿಕೊಡಲಾಯಿತು.
ಸಚಿವ ಸಿ.ಸಿ.ಪಾಟೀಲ್‌(CC Patil) ಸರ್ಕಾ​ರ​ದಿಂದ ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ(Compensation) ನೀಡುವ ಘೋಷಣೆ ಮಾಡಿದ್ದು ಒತ್ತುವರಿ ತೆರವು ವೇಳೆ ಮಾನವೀಯತೆಯಿಂದ ನಡೆದುಕೊಳ್ಳಲು ಅಧಿ​ಕಾ​ರಿ​ಗ​ಳಿ​ಗೆ ತಾಕೀತು ಮಾಡಿ​ದ್ದಾ​ರೆ.

ಬಗರ್‌ಹುಕುಂ ತೆರವಿಗೆ ಮಹಿಳೆ ಬಲಿ..!

ಅತಿಕ್ರಮಿಸಿಕೊಂಡಿರುವ ಬಗರ್‌ ಹುಕುಂ ಜಮೀನನ್ನು ಅರಣ್ಯ ಇಲಾಖೆ ತೆರವು ಮಾಡುವುದನ್ನು ವಿರೋಧಿಸಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಒಬ್ಬಾಕೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರಿನಲ್ಲಿ ಸೋಮವಾರ ನಡೆದಿತ್ತು.

Gadag: ದಶಕವಾ​ದ್ರೂ ಪ್ರವಾಹ ಸಂತ್ರ​ಸ್ತ​ರಿಗೆ ಹಂಚಿಕೆ​ಯಾ​ಗದ ಆಸರೆ ಮನೆ​ಗ​ಳು..!

ಕೆಲೂರಿನ ನಿರ್ಮಲಾ ಪಾಟೀಲ ಮೃತಪಟ್ಟ ಮಹಿಳೆ. ಜಮೀನು(Land) ಕಳೆದುಕೊಳ್ಳುವ ಆತಂಕದಲ್ಲಿ ನಿರ್ಮಲಾ ಪಾಟೀಲ ಮತ್ತು ಸರೋಜಾ ಪಾಟೀಲ ಕ್ರಿಮಿನಾಶಕ(Poison) ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯರು ಖಾಸಗಿ ವಾಹನದಲ್ಲಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿರ್ಮಲಾ ಪಾಟೀಲ ಸಂಜೆಯ ಹೊತ್ತಿಗೆ ಮೃತಪಟಿದ್ದರು. 

ಕಪ್ಪತ್ತಗುಡ್ಡವನ್ನು(Kappatagudda) ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ(Governmet of Karnataka) 2016-17ರಲ್ಲಿ ಘೋಷಿಸಿದ ಬಳಿಕ ಕಪ್ಪತ್ತಗುಡ್ಡ ಒಟ್ಟು ವಿಸ್ತೀರ್ಣದ ಆಧಾರದಲ್ಲಿ ಸರ್ವೇ ಮಾಡಲಾಗಿದೆ. ಸಮೀಕ್ಷೆ ನಂತರ ಅರಣ್ಯ ಭೂಮಿ ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಹೀಗಾಗಿ, ಜನವರಿಯಲ್ಲಿಯೇ ಕೆಲೂರು ಗ್ರಾಮಸ್ಥರಿಗೆ ದಾಖಲೆ ಸಮೇತ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದನ್ನು ಒಪ್ಪದ ಗ್ರಾಮಸ್ಥರು, ನಮ್ಮ ಹಿರಿಯರ ಕಾಲದಿಂದಲೂ ನಾವೇ ಸಾಗುವಳಿ ಮಾಡುತ್ತಿದ್ದೇವೆ ಎಂದು ವಾಗ್ವಾದ ಮಾಡಿದ್ದರು.