*   ಪಂಚಾಯಿತಿಯಲ್ಲಿ ಠರಾವ್‌ ಪಾಸಾ​ದ​ರೂ ಹಂಚಿಕೆ ಮಾಡದ ಅಧಿಕಾರಿಗಳು*   ಪ್ರವಾಹಕ್ಕೆ ಸಂಕ​ಷ್ಟ​ಕ್ಕೀ​ಡಾ​ಗಿ​ದ್ದ ಹೊಳೆ​ಆ​ಲೂರು ಹೋಬ​ಳಿಯ ಗ್ರಾಮ​ಗಳು*   ಮನೆಗಳ ಸಂಖ್ಯೆ ಮಾಯ

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ಫೆ.20): 2007, 2009ರಲ್ಲಿ ಬೆಣ್ಣೆಹಳ್ಳ, ಮಲಪ್ರಭಾ ನದಿ(Malaprabha River) ಪ್ರವಾಹಕ್ಕೆ(Flood) ಹೊಳೆ​ಆ​ಲೂರು ಹೋಬ​ಳಿಯ ಗ್ರಾಮ​ಗಳು ಸಂಕ​ಷ್ಟ​ಕ್ಕೀ​ಡಾ​ಗಿ​ದ್ದವು. ಜನರ ಸಮ​ಸ್ಯೆಗೆ ಸ್ಪಂದಿ​ಸಿದ ಅಂದಿನ ಸಿಎಂ ಬಿಎ​ಸ್‌​ವೈ, ಎಲ್ಲಾ ಗ್ರಾಮ​ಗಳ ಜನ​ರಿ​ಗಾಗಿ ಆಸರೆ ಯೋಜ​ನೆ​ಯಡಿ ನವಗ್ರಾಮಗಳನ್ನು ನಿರ್ಮಿ​ಸಿ​ದ್ದರು. ಆದರೆ, ನಿರ್ಮಾ​ಣ​ವಾ​ಗಿ​ರುವ ಮನೆಗಳ ಹಂಚಿ​ಕೆ​ಯಲ್ಲಿ ಗ್ರಾಪಂ ಅಧಿ​ಕಾ​ರಿ​ಗಳು ಮಾಡು​ತ್ತಿ​ರುವ ನಿರ್ಲ​ಕ್ಷ್ಯ​ದಿಂದಾಗಿ ಒಂದು ದಶ​ಕ​ದಿಂದ ಗ್ರಾಮ​ಸ್ಥರು(Villagers) ತೀವ್ರ ತೊಂದರೆ ಅನು​ಭ​ವಿ​ಸು​ತ್ತಿ​ದ್ದಾರೆ.

ಪ್ರವಾ​ಹ​ದಿಂದ ತತ್ತ​ರಿ​ಸುವ ಗ್ರಾಮ​ಗಳ ಜನರಿಗೆ ಆಸ​ರೆ​ಯಾ​ಗ​ಬೇ​ಕಾ​ದಿದ್ದ ಯೋಜನೆ ಅಧಿ​ಕಾ​ರಿ​ಗಳ ನಿರ್ಲಕ್ಷ್ಯ ಮತ್ತು ಪರ​ಸ್ಪರ ದೋಷಾ​ರೋ​ಪಣೆಯ​ಲ್ಲಿಯೇ ಮಾಡು​ತ್ತಿ​ರುವ ಕಾಲ ಹರ​ಣ​ದಿಂದಾಗಿ ಸಮಸ್ಯೆ ಇಂದಿಗೂ ಜೀವಂತಾ​ಗಿಯೇ ಉಳಿ​ದಿದೆ. ಮೇಲ್ನೋ​ಟಕ್ಕೆ ಯಾರಿಗೂ ಜವಾ​ಬ್ದಾರಿ ಇಲ್ಲ ಎನ್ನು​ವುದು ಸ್ಪಷ್ಟ​ವಾ​ಗು​ತ್ತದೆ.

8 ತಿಂಗಳಲ್ಲಿ 46,000 ಮನೆ ನಿರ್ಮಾಣ: ಸಚಿವ ಸೋಮಣ್ಣ

ಮನೆಗಳ ಸಂಖ್ಯೆ ಮಾಯ:

ಅಮರಗೋಳ ಗ್ರಾಪಂ ವ್ಯಾಪ್ತಿಯ ಹೊಳೆ ಹಡಗಲಿ ಗ್ರಾಮದಲ್ಲಿನ ಮನೆ(House) ಹಂಚಿಕೆಯಲ್ಲಿ ವ್ಯತ್ಯಾಸವಾಗಿದ್ದು, ಹಳೆಯ ಗ್ರಾಮದಲ್ಲಿ 305 ಮನೆಗಳಿವೆ. ಇಲಾಖೆ ದಾಖ​ಲೆಗಳ ಪ್ರಕಾ​ರ 304 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ವಿಶೇ​ಷ​ವೆಂದ​ರೆ 3 ಬಾರಿ ಮನೆ ಹಂಚಿಕೆಯಾಗಿ​ದ್ದರೂ ಇನ್ನೂ ಹಲ​ವಾ​ರು ಅರ್ಹ ಫಲಾನುಭವಿಗಳ(Beneficiaries) ಉಳಿ​ದು​ಕೊಂಡಿ​ದ್ದಾರೆ. ಅಂದು ಅಧಿ​ಕಾರ ನಡೆ​ಸಿದವರು ತಮಗೆ ಬೇಕಾ​ದ​ವ​ರಿಗೆ ನೀಡಿ​ದ್ದು, ಅರ್ಹರೇ ಉಳಿ​ದು​ಕೊಂಡಿ​ದ್ದಾರೆ ಎನ್ನು​ವುದು ಗ್ರಾಮ​ಸ್ಥರ ಆರೋ​ಪ​ವಾ​ಗಿದೆ. ಈ ಕುರಿತು ತಾಪಂ ಇಒ, ತಹ​ಸೀ​ಲ್ದಾರ್‌, ಜಿಲ್ಲಾ​ಧಿ​ಕಾರಿ ಸೇರಿ​ದಂತೆ ಎಲ್ಲ ಹಿರಿಯ ಅಧಿ​ಕಾ​ರಿ​ಗಳು, ಶಾಸ​ಕ ಸಚಿ​ವರು, ಮಾಜಿ ಶಾಸಕ​ರಿಗೆ ಮನವಿ ಸಲ್ಲಿ​ಸಿ​ದರೂ ಯಾವುದೇ ಪ್ರಯೋ​ಜ​ನ​ವಾ​ಗಿಲ್ಲ ಎನ್ನು​ತ್ತಾರೆ ಗ್ರಾಮ​ಸ್ಥರು.

ಗ್ರಾಪಂನಿಂದ ಠರಾವ್‌ ಪಾಸ್‌

ಅಕ್ಟೋಬರ್‌ 8, 2021ರ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಹಿಯೊಂದಿಗೆ ಠರಾವು ಪಾಸ್‌ ಮಾಡಿ, ಹೊಳೆಹಡಗಲಿ ನವಗ್ರಾಮ ಮನೆ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಸಿಕ್ಕಿಲ್ಲ. ಆದ್ದರಿಂದ ಮರು ಹಂಚಿಕೆ ಮಾಡಬೇಕು ಎಂದು ಠರಾವ್‌ ಪಾಸ್‌ ಮಾಡ​ಲಾ​ಗಿದೆ. ಇದನ್ನು ರೋಣ(Ron) ತಹ​ಸೀ​ಲ್ದಾರರಿಗೆ ತಿಳಿ​ಸಿ​ದರೂ ಅವರು ಜಿಲ್ಲಾ​ಡ​ಳಿ​ತಕ್ಕೆ ಮಾಹಿತಿ ನೀಡಿಲ್ಲ ಎಂದು ಗ್ರಾಮ​ಸ್ಥರು ಗಂಭೀರ ಆರೋ​ಪ ಮಾಡು​ತ್ತಿ​ದ್ದಾ​ರೆ.

ಈ ಸಮಸ್ಯೆ ಮನೆಗಳು ಹಂಚಿಕೆ​ಯಾದ ವೇಳೆ​ಯಿಂದಲೂ ಇದೆ. ನಾನು ಕಳೆ​ದ 3 ತಿಂಗಳ ಹಿಂದೆ ಅಧಿ​ಕಾರ ವಹಿ​ಸಿ​ಕೊಂಡಿ​ದ್ದೇನೆ, ಸರ್ವಸದಸ್ಯರು, ಗ್ರಾಮ​ಸ್ಥರ ಬೇಡಿ​ಕೆ​ಯಂತೆ ಮರು ಹಂಚಿಕೆ ಮಾಡಲು ಠರಾವ್‌ ಮಾಡಿ ಮೇಲಧಿಕಾರಿಗಳಿಗೆ ರವಾ​ನಿ​ಸ​ಲಾ​ಗಿದೆ ಅಂತ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿ.ಎಲ್‌. ಇಂಬ್ರಾಪೂರ ತಿಳಿಸಿದ್ದಾರೆ.

ಈ ವಿಷ​ಯ​ವಾಗಿ ಗ್ರಾಮಸ್ಥರಿಂದ ಹಲ​ವಾರು ಬಾರಿ ಮನವಿಗಳು ಬಂದಿದ್ದು, ಇವು​ಗಳ ಆಧಾ​ರ​ದಲ್ಲಿ ತಹ​ಸೀ​ಲ್ದಾರ್‌ ಮತ್ತು ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಅಗತ್ಯ ಮಾಹಿತಿ, ದಾಖಲೆ ಸಲ್ಲಿ​ಸಿ​ದ್ದೇನೆ. ನಾನೊಬ್ಬನೇ ಏನೂ ಮಾಡ​ಲು ಸಾಧ್ಯವಿಲ್ಲ, ಮೇಲಾಧಿಕಾರಿಗಳಿಂದ ಇದಕ್ಕೆ ವಿಶೇಷ ಆದೇಶ ಬೇಕು ಅಂತ ರೋಣ ಇ.ಒ ಸಂತೋಷ ಪಾಟೀಲ ಹೇಳಿದ್ದಾರೆ.

ಈ ವಿಷ​ಯ​ವಾಗಿ ಈಗಾ​ಗಲೇ ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಮಾಹಿತಿ ನೀಡ​ಲಾ​ಗಿದೆ, ಅಲ್ಲಿಂದ ಬರುವ ನಿರ್ದೇ​ಶ​ನ​ಕ್ಕಾಗಿ ಕಾಯು​ತ್ತಿ​ದ್ದೇವೆ ಅಂತ ರೋಣ ತಹ​ಸೀ​ಲ್ದಾರ ಜೆ.ಬಿ. ಜಕ್ಕನಗೌಡ್ರ ತಿಳಿಸಿದ್ದಾರೆ.

ಕಾನೂನನ್ನು ಸರಳೀಕರಿಸುತ್ತೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ವಸತಿ ಎಲ್ಲರ ಮೂಲಭೂತ ಹಕ್ಕಾಗಿದ್ದು, ಬಡವರಿಗೆ ನಿವೇಶನ ಮತ್ತು ಮನೆಗಳನ್ನು ನ್ಯಾಯಸಮ್ಮತವಾಗಿ ಒದಗಿಸಲು ಕಾನೂನಿನ ಸರಳೀಕರಣದ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಎಲ್ಲರಿಗೂ ವಸತಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

ನಗರ ಪ್ರದೇಶದ ಎಲ್ಲ ಬಡವರಿಗೆ ಸೂರು ಕಲ್ಪಿಸುವೆ: ಸಚಿವ ಸೋಮಣ್ಣ

ಜ.31 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ರಾಜಧಾನಿ ಬೆಂಗಳೂರಿನ(Bengaluru) 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ(Housing Plan) ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಂಚಿಕೆ ಪತ್ರ ವಿತರಿಸಿ ಮಾತನಾಡಿದರು.

ಬಡಾವಣೆಗಳು ಕಾನೂನುಬದ್ಧವಾಗಿ ಅಭಿವೃದ್ಧಿಯಾಗದಿದ್ದರೆ, ಮೂಲಭೂತ ಸೌಕರ್ಯಗಳ ಕೊರತೆಗಳಿರುವ ಕಂದಾಯ ನಿವೇಶನಗಳು ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಬಡವರಿಗೆ ಮನೆ, ನಿವೇಶನ ಪಡೆಯಲು ಸರ್ಕಾರ ಕಾನೂನಿನ ಸರಳೀಕರಣ ಮಾಡಲಿದೆ ಎಂದು ಹೇಳಿದ್ದರು.