ACB Raid: ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್ ಬಲೆಗೆ
* 12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಟೈಪಿಸ್ಟ್
* ಎಸಿಬಿ ಡಿಎಸ್‌ಪಿ ಎಂ.ವಿ. ಮಲ್ಲಾಪುರ ನೇತೃತ್ವದ ತಂಡದಿಂದ ದಾಳಿ
* ಇದೀಗ ಉಳಿದ ಹಣ ಕೊಡುವಂತೆ ಪೀಡಿಸುತ್ತಿದ್ದ ಟೈಪಿಸ್ಟ್
ಮುಂಡರಗಿ(ಫೆ.24): ಆರ್‌ಟಿಸಿ ಕಾಲಂ ನ.11 ರಲ್ಲಿ ಹೆಸರು ಕಡಿಮೆ ಮಾಡಲು 5 ಸಾವಿರ ಬೇಡಿಕೆ ಇಟ್ಟಿದ್ದ ಇಲ್ಲಿಯ ತಹಶೀಲ್ದಾರ್‌ಕಚೇರಿಯ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ, ಬುಧವಾರ ಮಧ್ಯಾಹ್ನ ಆ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ(ACB) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಗಂಗಾಪೂರ ಗ್ರಾಮದ ಕರಿಯಪ್ಪ ಬಂಗಿ ಎನ್ನುವವರು ತಮ್ಮ ಜಮೀನಿನ ಆರ್‌ಟಿಸಿ 11 ಕಾಲಂನಲ್ಲಿ ಹೆಸರು ಕಡಿಮೆ ಮಾಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ ಒಟ್ಟು 12 ಸಾವಿರ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಈ ಹಿಂದೆ 6 ಸಾವಿರ ಪಡೆದಿದ್ದರು. ಇದೀಗ ಉಳಿದ ಹಣ ಕೊಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಚೌಕಾಶಿ ಮಾಡಿ 5 ಸಾವಿರ ಕೊಡುವಂತೆ ತಿಳಿಸಿದ್ದರು ಎನ್ನಲಾಗುತ್ತಿದ್ದು, ಬುಧವಾರ ಅದನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ
ಎಸಿಬಿ ಡಿಎಸ್‌ಪಿ ಎಂ.ವಿ. ಮಲ್ಲಾಪುರ ನೇತೃತ್ವದ ತಂಡ ದಾಳಿ(Raid) ನಡೆಸಿದ್ದು, ಈ ಸಂದರ್ಭದಲ್ಲಿ ಎಸಿಬಿ ಸಿಪಿಐ ವಿ.ಎಂ. ಹಳ್ಳಿ, ಆರ್.ಎಫ್. ದೇಸಾಯಿ, ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ, ವೀರೇಶ ಜೋಳದ, ದೀಪಾಲಿ, ವೀರೇಶ ಬಿಸನಳ್ಳಿ, ಎಸ್.ಬಿ. ಮುಲ್ಲಾ, ಎಂ.ಜಿ. ಮುಳಗುಂದ, ಎನ್.ಎಸ್. ತಾಯಣ್ಣವರ, ಐ.ಸಿ. ಜಾಲಿಹಾಲ, ತಾರಪ್ಪ, ನಾರಾಯಣ ರಡ್ಡಿ ಸೇರಿದಂತೆ ಇತರರು ಇದ್ದರು.
ಸಚಿವೆ ಜೊಲ್ಲೆ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಬಟಾಬಯಲು: ಇಬ್ಬರ ಬಂಧನ
ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ತವರು ಜಿಲ್ಲೆಯಲ್ಲೇ ಮುಜರಾಯಿ ಇಲಾಖೆಯ ಭ್ರಷ್ಟಾಚಾರ(Corruption) ಬಟಾಬಯಲಾಗಿದೆ. ಬೆಳಗಾವಿ ಎಸಿಬಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಲಂಚಕ್ಕೆ ಬೇಡಿಕೆಯಿಟ್ಟ ಇಬ್ಬರನ್ನ ಬಂಧಿಸಿದ ಘಟನೆ ಜ.22 ರಂದು ನಡೆದಿತ್ತು.
ಮುಜರಾಯಿ ತಹಶೀಲ್ದಾರ್ ದಶರಥ್ ಜಾಧವ್, ತಹಶೀಲ್ದಾರ್ ಸಂಬಂಧಿ ಸಂತೋಷ ಕಡೋಲ್ಕರ್ ಬಂಧಿತ ಅರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ದೇವಸ್ಥಾನದ(Temple) ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಜಿಲ್ಲೆಯ ರಾಮದುರ್ಗದ(Ramdurg) ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆರಾಧನಾ ಯೋಜನೆಯಡಿ 4 ಲಕ್ಷ ರೂ. ಅನುದಾನ(Grants) ಮಂಜೂರಾಗಿತ್ತು. ಮಂಜೂರಾದ ಅನುದಾನದ ಶೇ. 5ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಮುಜರಾಯಿ ತಹಶೀಲ್ದಾರ್ ದಶರಥ್ ಜಾಧವ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ತನ್ನ ಅಳಿಯ ಸಂತೋಷಗೆ ಹಣ ನೀಡುವಂತೆ ದಶರಥ್ ಜಾಧವ್ ತಿಳಿಸಿದ್ದರು. ಮುಜರಾಯಿ ತಹಶೀಲ್ದಾರ್ ದಶರಥ ಅಳಿಯ ಸಂತೋಷ ಹಾಲಿನ ಡೈರಿಗೆ ತೆರಳಿ ಲಂಚ ನೀಡುವಂತೆ ತಿಳಿಸಿದ್ದರು.
ACB Raid: ರೈತನಿಂದ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸುಭಾಷ್ ಗೋಡಕೆ ಅವರು ಎಸಿಬಿಗೆ ದೂರು ನೀಡಿದ್ದರು. ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಇಬ್ಬರೂ ಬಲೆಗೆ ಬಿದ್ದಿದ್ದಾರೆ. ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಎಸಿಬಿ ಡಿವೈಎಸ್‌ಪಿ ಕರುಣಾಕಾರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎಸಿಬಿ ದಾಳಿ: ಎಸ್‌ಐ, ಎಎಸ್‌ಐ ಬಂಧನ
ಕೊಟ್ಟೂರು: ಅಕ್ರಮ ಮರಳು ಸಾಗಣೆ(Illegal Sand Transport) ಪ್ರಕರಣವೊಂದನ್ನು ಖುಲಾಸೆಗೊಳಿಸಲು 10 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಕೊಟ್ಟೂರು(Kotturu) ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳದ (ACB) ಅಧಿಕಾರಿಗಳು ಕಳೆದ ಡಿ.11 ರಂದು ದಾಳಿ ನಡೆಸಿ, ಬಂಧಿಸಿದ್ದರು. ಸಬ್ ಇನಸ್ಪೆಕ್ಟರ್ ಹೆಚ್. ನಾಗಪ್ಪ ಹಾಗೂ ಸಹಾಯಕ ಸಬ್ ಇನಸ್ಪೆಕ್ಟರ್ ಸೈಫುಲ್ಲಾ ಬಂಧಿತರು(Arrest). ಪ್ರಕರಣದ ಇತರೆ ಆರೋಪಿಗಳಾದ ಸಿಪಿಐ ಟಿ.ಎಸ್. ಮುರುಗೇಶ್, ಪೊಲೀಸ್ ಪೇದೆಗಳಾದ ತಿಪ್ಪೇಸ್ವಾಮಿ, ನಾಗರಾಜ, ಕೊಂಡಿ ಬಸವರಾಜ್ ಪರಾರಿಯಾಗಿದ್ದರು.
ಲಂಚದ(Bribe) ಹಣವನ್ನು ಸ್ವೀಕರಿಸುವ ವೇಳೆ ಬಳ್ಳಾರಿಯ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ರಾವ್ ನೇತೃತ್ವದ ತಂಡ ಇಲ್ಲಿನ ಸಿಪಿಐ ಕಚೇರಿ ಮೇಲೆ ಶನಿವಾರ ಮಧ್ಯಾಹ್ನ ದಾಳಿ(Raid) ನಡೆಸಿ, ಪಿಎಸ್‌ಐ, ಎಎಸ್‌ಐ ಅವರನ್ನು ಬಂಧಿಸಿತ್ತು.