Asianet Suvarna News Asianet Suvarna News

Mysuru: ಪ್ರಾಣಬಿಟ್ಟರೂ, ಕಾಶ್ಮೀರ ಬಿಟ್ಟುಕೊಡುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವನ್ನು ಪ್ರಾಣಕೊಟ್ಟರೂ ಬಿಟ್ಟುಕೊಡುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಶುಕ್ರವಾರ ಲೇಖಕ ಎಸ್‌. ಉಮೇಶ್‌ ಅವರ ಕಾಶ್ಮೀರ್‌ ಡೈರಿ ಕೃತಿ ಕುರಿತು ಮಾತನಾಡಿದರು.

Even at the risk of death kashmir will not give up says chakravarthy sulibele at mysuru gvd
Author
Bangalore, First Published Aug 6, 2022, 5:13 PM IST

ಮೈಸೂರು (ಆ.06): ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವನ್ನು ಪ್ರಾಣಕೊಟ್ಟರೂ ಬಿಟ್ಟು ಕೊಡುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಶುಕ್ರವಾರ ಲೇಖಕ ಎಸ್‌. ಉಮೇಶ್‌ ಅವರ ಕಾಶ್ಮೀರ್‌ ಡೈರಿ ಕೃತಿ ಕುರಿತು ಮಾತನಾಡಿದ ಅವರು, ಕಾಶ್ಮೀರಕ್ಕಾಗಿ ಈಗಲೂ ಯುದ್ಧ, ಜಗಳ ನಡೆಯುತ್ತಿದೆ. ಕಾಶ್ಮೀರದ ಇಂದಿನ ಪರಿಸ್ಥಿತಿಯ ಕಾರಣಗಳನ್ನೂ ತಿಳಿದುಕೊಳ್ಳಬೇಕು ಎಂದರು.

ಕಾಶ್ಮೀರ ಎಂದರೆ ಜನರಲ್ಲಿ ಸೈನ್ಯ, ಗುಂಡು, ಕಲ್ಲೆಸತ ಎಂಬ ಮನೋಭಾವ ಇದೆ. ಆದರೆ ಅದಕ್ಕಿಂತಲೂ ಬೇರೆಯದೇ ಆದ ಕಾಶ್ಮೀರವನ್ನು ನೋಡಬೇಕು. ಜೀವನದಲ್ಲಿ ಪ್ರತಿಯೊಬ್ಬರೂ ಯಾವಾಗಲಾದರೊಮ್ಮೆ ಕಾಶ್ಮೀರಕ್ಕೆ ಹೋಗಿ ಬರಬೇಕು. ಅಂತಹ ಭೂ ಲೋಕದ ಸ್ವರ್ಗವಾದ ಕಾಶ್ಮೀರವನ್ನು ನಾವು ಪ್ರಾಣ ಕೊಟ್ಟರು ಬಿಟ್ಟುಕೊಡುವುದಿಲ್ಲ ಎಂದರು.

Mysuru: ಸರ್ಕಾರದಿಂದ ನವೋದ್ಯಮ ನೀತಿ ರೂಪಿಸಿ ಕೈಗಾರಿಕೆಗೆ ಪ್ರೋತ್ಸಾಹ: ಡಾ.ಇ.ವಿ. ರಮಣರೆಡ್ಡಿ

ಪಾಕಿಸ್ತಾನ ವಿರುದ್ಧದ ಎಲ್ಲಾ ಯುದ್ಧದಲ್ಲಿಯೂ ಭಾರತ ಪ್ರಭುತ್ವ ಸಾರಿದೆ. ಇದು ಪಾಕಿಸ್ತಾನಕ್ಕೂ ಗೊತ್ತಿದೆ. ರಾಜೀವ್‌ ಗಾಂಧಿ ಪ್ರಧಾನಿ ಆದಾಗ ಕಾಶ್ಮೀರ ಕೈತಪ್ಪುತ್ತಿರುವ ಸುಳಿವನ್ನು ಜಗನ್ಮೋನರು ಅನೇಕ ಬಾರಿ ನೀಡಿದರು. ಆದರೆ ಸಮಸ್ಯೆ ಪರಿಹರಿಸಲು ಅವರು ಮುಂದಾಗಲೇ ಇಲ್ಲ. ಬದಲಿಗೆ ನಿಮ್ಮಿಂದಲೇ ಸಮಸ್ಯೆ ಎಂದು ಅವರನ್ನೇ ಹಿಂದಕ್ಕೆ ಕರೆಸಿಕೊಂಡರು. ಅಷ್ಟರಲ್ಲಾಗಲೇ ಕಾಶ್ಮೀರ ಯುವಕರನ್ನು ಅಪಹರಿಸಿ ಪಾಕಿಸ್ತಾನದಲ್ಲಿ ತರಬೇತಿ ನೀಡಿ ಭಾರತದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವಂತೆ ಮಾಡುತ್ತಿದ್ದರು ಎಂದರು.

ಈಗ ಯುವಕರ ಬದಲಿಗೆ ಚಿಕ್ಕ ಚಿಕ್ಕ ಮಕ್ಕಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಪಿಒಕೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಕಸಬ್‌ ಬಂಧಿಸಿದಾಗ ಅವನದೊಂದು ಸಂದರ್ಶನ ನಡೆಸಲಾಯಿತು. ಆತ ಹೇಳಿದ್ದು ಗಮನಾರ್ಹ. ಭಾರತದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಆಗುತ್ತಿಲ್ಲ. ಪ್ರಾರ್ಥನಾ ಮಂದಿರ ನಿರ್ಮಿಸಲು ಆಗುತ್ತಿಲ್ಲ ಎಂದೆಲ್ಲ ಹೇಳಿದ್ದರು. ಆದರೆ ಭಾರತದಲ್ಲಿ ಪಾಕಿಸ್ತಾನಕ್ಕಿಂತ ಹೆಚ್ಚು ಮಸೀದಿ ಇದೆ ಎಂದು ತಿಳಿದದ್ದು ಇಲ್ಲಿಗೆ ಬಂದ ಮೇಲೆಯೇ ಎಂದು ಒಪ್ಪಿಕೊಂಡಿದ್ದಾನೆ ಎಂದರು.

ಕಾಶ್ಮೀರದಲ್ಲಿ ಹರ್‌ ಘರ್‌ ತಿರಂಗ: ಆದರೆ ಪ್ರಧಾನಿ ನರೇಂದ್ರಮೋದಿ ಅವರು ಆರ್ಟಿಕಲ್‌ 370 ರದ್ದುಪಡಿಸಿದ ಮೇಲೆ ಪರಿಸ್ಥಿತಿ ಬದಲಾಗಿದೆ. ಹರ್‌ ಘರ್‌ ತಿರಂಗ ಘೋಷಣೆಯನ್ನು ಕಾರ್ಯಗತಗೊಳಿಸಲು ಕಾಶ್ಮೀರದ ಬಹುಪಾಲು ಮಂದಿ ಮುಂದಾಗಿದ್ದಾರೆ. ಭಾರತೀಯ ಸೇನೆಯ ಕ್ಯಾಪ್ಟನ್‌ ನವೀನ್‌ ನಾಗಪ್ಪ ಕಾರ್ಗಿಲ್‌ ಅನುಭವ ಹಂಚಿಕೊಂಡರು. ಇಂಡಿಯನ್‌ ಏರ್‌ಫೋರ್ಸ್‌ನ ನಿವೃತ್ತ ಗ್ರೂಪ್‌ ಕ್ಯಾಪ್ಟನ್‌ ಡಾ. ವಿನಯ್‌ ವಿಠಲ್‌, ಪತ್ರಕರ್ತ ರವೀಂದ್ರ ಜೋಶಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ನಟರಾಜ್‌ ಮಾತನಾಡಿದರು. ಲೆಪ್ಟಿನೆಂಟ್‌ ಜನರಲ್‌ ಪಿ.ಸಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಎಸ್‌. ಉಮೇಶ್‌ ಇದ್ದರು.

Mysuru Dasara 2022 ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಅಂತಿಮ

ನಮ್ಮ ಅನೇಕ ಮಂದಿ ಸಾಹಿತಿಗಳು ಕುವೆಂಪು ಅವರನ್ನು ಜನರ ಮುಂದಿಡುವ ರೀತಿಯೇ ಬೇರೆ. ಆದರೆ ಕುವೆಂಪು ಅವರ ಒಂದು ಕವನದಲ್ಲಿ ಪಾಪಿ ಪಾಕಿಸ್ತಾನ, ಜಾಸ್ತಿ ಮಾತನಾಡಿದರೆ ನಿನ್ನ ನಾಲಿಗೆ ಸೀಳುತ್ತೇನೆ ಎಂಬರ್ಥದಲ್ಲಿ ಬರೆದಿದ್ದಾರೆ. ಅಂದರೆ ಕವಿಹೃದಯಕ್ಕೂ ಪಾಕಿಸ್ತಾನದ ಮೇಲೆ ಎಷ್ಟುಆಕ್ರೋಶವಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
-ಚಕ್ರವರ್ತಿ ಸೂಲಿಬೆಲೆ

Follow Us:
Download App:
  • android
  • ios