Mysuru Dasara 2022 ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಅಂತಿಮ

ಮೈಸೂರು ದಸರಾ 2022 ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನ ಆಯ್ಕೆ ಮಾಡಲಾಗಿದ್ದು, ಅಂತಿಮಗೊಂಡ 14 ಆನೆಗಳ ಪಟ್ಟಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

Total 14 elephants Finalized for Mysuru Dasara 2022 rbj

ಮೈಸೂರು, (ಆಗಸ್ಟ್.05): ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಸಕಲ ಸಿದ್ಧತೆಗಳು ಸಹ ನಡೆದಿವೆ.ಇನ್ನು ಈ ಬಾರಿ ಜಂಬೂಸವಾರಿಯಲ್ಲಿ  ಭಾಗವಹಿಸಲಿರುವ ಆನೆಗಳ ಪಟ್ಟಿಯನ್ನೂ ಸಹ ಅಂತಿಮಗೊಳಿಸಲಾಗಿದೆ.

ಒಟ್ಟು 14 ಆನೆಗಳ ಜಂಬುಸವಾರಿಯಲ್ಲಿ ಭಾಗಿಯಾಗಲಿವೆ.  ಈ 14 ಆನೆಗಳ ಪೈಕಿ ‌4 ಹೆಣ್ಣಾನೆಗಳಿಗೆ ಸ್ಥಾನ ನೀಡಲಾಗಿದ್ದು, ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಕಾಲಿಡಲಿದೆ.

ಮೊದಲ ತಂಡದಲ್ಲಿ‌  9 ಆನೆಗಳು ಆಗಸ್ಟ್ 7 ರಂದು ಹುಣಸೂರು ತಾಲೂಕಿನ ವೀರಣನ ಹೊಸಹಳ್ಳಿ ಪ್ರದೇಶದಿಂದ ಗಜಪಡೆಯ ಮೊದಲ‌ ತಂಡ ಆಗಮಿಸಲಿದೆ.

Mysuru Dasara ಮೈಸೂರು ದಸರಾ ಸಿದ್ಧತೆ ಜೋರು: ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

14 ಆನೆಗಳ ವಿವರ ಇಂತಿದೆ.
* ಮತ್ತಿಗೋಡು ಆನೆ ಶಿಬಿರದಿಂದ 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ ಆಯ್ಕೆಯಾಗಿವೆ.

* ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ. ದುಬಾರೆ ಆನೆ ಶಿಬಿರದಿಂದ‌ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯ ಆನೆ ಮೈಸೂರಿಗೆ ಬರಲಿವೆ.

* ರಾಮಾಪುರ ಆನೆ‌ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ‌ 18 ವರ್ಷದ ಪಾರ್ಥಸಾರಥಿ ಆನೆಗಳು ಆಗಮಿಸಲಿವೆ.

ಮಾವುತ ಕಾವಾಡಿ ಕುಟುಂಬಗಳಿಗಾಗಿ ಶೆಡ್ ನಿರ್ಮಾಣ
ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಆಗಸ್ಟ್ 7 ರಂದು ದಸರಾ ಗಜಪಡೆಗೆ ಸ್ವಾಗತ ಸಿಗಲಿದ್ದು, ಅರಮನೆಗೆ ಬರುವ ಮಾವುತ ಕಾವಾಡಿ ಕುಟುಂಬಗಳಿಗಾಗಿ ತಾತ್ಕಾಲಿಕ ಶೆಡ್‌ಗಳು ನಿರ್ಮಾಣಗೊಳ್ಳುತ್ತಿವೆ.

ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ

ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಸರಳವಾಗಿ ಆಚರಿಸ್ಪಟ್ಟಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ. ಈಗಾಗಿ ಆರಂಭದಿಂದಲೇ ದಸರಾ ತಯಾರಿ ಜೋರಾಗಿದೆ. ಅರಮನೆಗೆ ದಸರಾ ಆನೆಗಳನ್ನು ಬರಮಾಡಿಕೊಳ್ಳಲು ತಯಾರಿ ನಡೆದಿದ್ದು, ಆನೆಗಳೊಂದಿಗೆ ಆಗಮಿಸುವ ಮಾವುತರು ಹಾಗೂ ಕಾವಾಡಿ ಕುಟುಂಬಗಳಿಗೆ ಶೆಡ್ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಕಳೆಗಟ್ಟಿದ ಅರಮನೆ ಅಂಗಳದಲ್ಲಿ 40 ಕುಟುಂಬಗಳ ವಾಸ್ತವ್ಯಕ್ಕೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ಗಜಪಡೆ ಆಗಮನಕ್ಕೂ ಒಂದು ವಾರ ಮುನ್ನವೇ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ,

 ಅಕ್ಟೋಬರ್ 5ರಂದು ಜಂಬೂಸವಾರಿ
ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭವಾಗಲಿದ್ದು, ಅಕ್ಟೋಬರ್ 5ರಂದು ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

ದಸರಾಕ್ಕೆ ಆನೆ ಮಾವುತ, ಕಾವಾಡಿಗರ ಬಹಿಷ್ಕಾರ
ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಾಡಿಗರ ಸಂಘ ನಿರ್ಧರಿಸಿದೆ. ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದರೂ ಇದುವರೆಗೂ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿನ್ನೆ(ಸೋಮವಾರ) ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ.

ಆ. 7 ರಂದು ವೀರನಹೊಸಳ್ಳಿಯಿಂದ ಗಜಪಯಣ ಅರಂಭವಾಗಲಿದೆ. ಅಯಾ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಹೊರತುಪಡಿಸಿ ಹುಲಿ ಹಿಡಿಯುವುದು, ಕಾಡಾನೆ ಹಿಡಿಯುವುದು ಸೇರಿದಂತೆ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯ ಬಹಿಷ್ಕರಿಸಿ ಪ್ರತಿಭಟಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಮುಖ ಮೇಘರಾಜ್ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios