Asianet Suvarna News Asianet Suvarna News

Mysuru: ಸರ್ಕಾರದಿಂದ ನವೋದ್ಯಮ ನೀತಿ ರೂಪಿಸಿ ಕೈಗಾರಿಕೆಗೆ ಪ್ರೋತ್ಸಾಹ: ಡಾ.ಇ.ವಿ. ರಮಣರೆಡ್ಡಿ

ರಾಜ್ಯ ಸರ್ಕಾರವು ಐಟಿ ಮತ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ನವೋದ್ಯಮ ನೀತಿ ರೂಪಿಸಿ ನೆರವಾಗುತ್ತಿದ್ದೇವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಅಭಿಪ್ರಾಯಪಟ್ಟರು. 

Encourage industry by formulating innovation policy from the government said dr ev ramana reddy gvd
Author
Bangalore, First Published Aug 6, 2022, 3:51 PM IST

ಮೈಸೂರು (ಆ.06): ರಾಜ್ಯ ಸರ್ಕಾರವು ಐಟಿ ಮತ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ನವೋದ್ಯಮ ನೀತಿ ರೂಪಿಸಿ ನೆರವಾಗುತ್ತಿದ್ದೇವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಅಭಿಪ್ರಾಯಪಟ್ಟರು. ಎಸ್ಜೆಸಿಇ-ಸ್ಟೆಪ್‌, ಟಿಐಇ ಮೈಸೂರು, ಯಂಗ್‌ ಇಂಡಿಯನ್ಸ್‌, ಸಿಐಐ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಡಿಜಿಟಲ್, ಸ್ಟಾರ್ಟ್‌ ಅಪ್‌ ಇಂಡಿಯಾ ಮತ್ತು ಸ್ಟಾರ್ಟ್‌ ಅಪ್‌ ಕರ್ನಾಟಕ ಸಹಯೋಗದಲ್ಲಿ ನವೋದ್ಯಮದಿಂದ ನವಭಾರತ’ ಘೋಷವಾಕ್ಯದೊಂದಿಗೆ ನಗರದ ಎಸ್‌ಜೆಸಿಇ ಕಾಲೇಜಿನ ಫುಟ್ಬಾಲ್‌ ಮೈದಾನದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ಮೈಸೂರು ನವೋದ್ಯಮ ಉತ್ಸವ’ (ಮೈಸೂರು ಸ್ಟಾರ್ಟ್‌ ಅಪ್‌ ಪೆವಿಲಿಯನ್‌)ದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

ಐಟಿ ಮತ್ತು ಕೈಗಾರಿಕೆಗೆ ಪ್ರೋತ್ಸಾಹ ನೀಡಲು 30 ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರು ಹೊರಗಿನ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೀದರ್‌, ಮಂಗಳೂರು ಮೊದಲಾದ ಕಡೆ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡಲಾಗಿದೆ. ವಿವಿಧ ರಿಯಾಯಿತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ತಂತ್ರಜ್ಞಾನ ಅಭಿಯಾನ ವಿಭಾಗದ ಮುಖ್ಯಸ್ಥೆ ಡಾ.ಅನಿತಾ ಗುಪ್ತ ಮಾತನಾಡಿ, ವಿಜ್ಣಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಆದ್ಯತೆ ಕೊಡುತ್ತಿದೆ. ಸದ್ಯ 160 ಇನ್ಕ್ಯುಬೇಟರ್‌ಗಳನ್ನು (ತಂತ್ರಜ್ಞಾನ ಪರಿಪೋಷಣಾ ಕೇಂದ್ರ) ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 25 ಸ್ಥಾಪಿಸುವ ಗುರಿ ಇದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

Mysuru Dasara 2022 ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಅಂತಿಮ

ಉತ್ಸವಕ್ಕೆ ಚಾಲನೆ ನೀಡಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಮೈಸೂರಿನ ಹಲವು ಬ್ರಾಂಡ್‌ಗಳನ್ನು ಸ್ಥಾಪಿಸುವ ಮೂಲಕ ಮಹಾರಾಜರ ಕಾಲದಲ್ಲೇ ನವೋದ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಇಂದಿಗೂ ಅವರು ದೊಡ್ಡ ಹೆಸರು ಮಾಡಿವೆ ಮತ್ತು ತನ್ನ ಹಿರಿಮೆಯನ್ನು ಉಳಿಸಿಕೊಂಡಿವೆ. ಅಲ್ಲದೆ ಮೈಸೂರನ್ನು ಸೈಬರ್‌ ಸೆಕ್ಯುರಿಟಿ ಹಬ್‌ ಆಗಿ ರೂಪಿಸಲು ಅವಕಾಶವಿದೆ ಎಂದರು. ವಿಜ್ಞಾನಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಸಂಪತ್ತು ಮಾಡಿದವರನ್ನು ಕಳ್ಳರಂತೆ ನೋಡಲಾಗುತ್ತಿದೆ. ಆತ, ಕಪ್ಪು ಹಣ ಇಟ್ಟುಕೊಂಡಿರಬಹುದು ಅಥವಾ ಸರ್ಕಾರಕ್ಕೆ ವಂಚಿಸಿರಬೇಕು ಎಂದು ಭಾವಿಸಲಾಗುತ್ತದೆ. 

ಈ ಮನಸ್ಥಿತಿ ಬದಲಾಗಬೇಕು. ಉದ್ಯಮಿಗಳನ್ನು ಕೇಳುವಂತೆ ರಾಜಕಾರಣಿಗಳನ್ನು ಯಾಕೆ ಪ್ರಶ್ನಿಸುವುದಿಲ್ಲ. ಉದ್ಯಮಿಗಳು ಸಂಕಷ್ಟಕ್ಕೆ ಒಳಗಾದಾಗ ಅವರಿಗೆ ನೆರವಾಗಬೇಕು. ಉದ್ಯಮಗಳು ವೃದ್ಧಿಸಿದರೆ ಸಮಾಜವೂ ಬೆಳೆಯುತ್ತದೆ. ಅದಕ್ಕಾಗಿ ಸಮರ್ಪಕವಾದ ನೀತಿ ನಿಯಮಬೇಕು ಎಂದರು. ಸ್ಕ್ಯಾನ್‌ರೇ ಟೆಕ್ನಾಲಜೀಸ್‌ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ ಮೈಸೂರು ಇಂದಿಗಿಂತಲೂ ಬಹಳಷ್ಟು ಬದಲಾಗಲಿದೆ. ಆದರೆ, ಅಡ್ಡಾದಿಡ್ಡಿಯಾಗಿ ಬೆಳೆಯುವ ಬದಲಿಗೆ ವ್ಯವಸ್ಥಿತವಾಗಿ ಪ್ರಗತಿ ಕಾಣಬೇಕು. ಸ್ವಚ್ಛ- ಶುದ್ಧ- ಸಮೃದ್ಧ ಮೈಸೂರು ಆಗಿ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ನವೋದ್ಯಮ ಹಾಗೂ ಹೊಸ ಆಯಾಮಗಳಿಗೆ ಪ್ರೋತ್ಸಾಹ ನೀಡಿದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕೊಡುಗೆ ಅಪಾರವಾಗಿದೆ. ಬಹುತೇಕರು ಉದ್ಯೋಗಿಗಳಾಗಲು ಬಯಸುತ್ತಾರೆಯೇ ಹೊರತು, ಉದ್ಯಮಿಯಾಗುವ ಸವಾಲು ಸ್ವೀಕರಿಸಲು ಮುಂದಾಗುವುದಿಲ್ಲ. ಶಕ್ತಿ ಇದ್ದರೂ ಮುಂದಡಿ ಇಡುವುದಿಲ್ಲ. ಆದರೆ, ಯುವಕರು ಮನಸ್ಸು ಮಾಡಿದರೆ ದೇಶವನ್ನು ಬೆಳೆಸಬಹುದು ಎಂದರು.

ಮೈಸೂರು: ಕಸಾಯಿಖಾನೆಗೆ ಗೋವುಗಳ ಸಾಗಣೆ, ವಿಡಿಯೋ ವೈರಲ್

ಉತ್ಸವ ವಿಶೇಷ: 20ಕ್ಕೂ ಹೆಚ್ಚು ಹೂಡಿಕೆದಾರರು, ಮೆಂಟರ್‌ಗಳು, 25ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುವರು. ನೂರು ಮಳಿಗೆಗಳು ಮತ್ತು 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಸಂಶೋಧಕರು, ಕೈಗಾರಿಕಾ ವೃತ್ತಿಪರರು ಪಾಲ್ಗೊಳ್ಳುವರು.ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್‌, ಎಸ್ಜೆಸಿಇ-ಸ್ಟೆಪ್‌ ಸಿಇಒ ಶಿವಶಂಕರ್‌, ಎಕ್ಸೆಲ್‌ ಸಾಫ್ಟ್‌ ಟೆಕ್ನಾಲಜೀಸ್‌ ಸಿಇಒ ಮತ್ತು ಸಂಸ್ಥಾಪಕ ಸುಧನ್ವ ಧನಂಜಯ, ಪ್ರೋಟೀನ್‌ ಕ್ಲೌಡ್‌ ಕಂಪನಿ ಸಿಇಒ ಸುರೇಶ್‌ ಸೇಥಿ ಇದ್ದರು.

Follow Us:
Download App:
  • android
  • ios