Chamarajangara: ತನಗಾಗದವರು ರಕ್ತಕಾರಿ ಸಾಯಲಿ : ದೇವರ ಹುಂಡಿಯಲ್ಲಿ ವಿಕೃತಿಯ ಹರಕೆ ಪತ್ರ
ಮ್ಮ ಇಷ್ಟಾರ್ಥ ಗಳನ್ನು ಈಡೇರಿಸುವಂತೆ ಭಕ್ತರು ದೇವರಿಗೆ ಹರಕೆ ಹೊರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತನಗಾಗಾದ ವ್ಯಕ್ತಿಗಳು ರಕ್ತ ಕಕ್ಕಿ ಸಾಯಲಿ, ನರಳಿ ನರಳಿ ಸಾಯಲಿ ಎಂದು ಕೇಡು ಬಯಸಿ ದೇವರಿಗೆ ಹರಕೆ ಹೊತ್ತು ದೇವರ ಹುಂಡಿಗೆ ಹಾಕಿದ್ದಾನೆ.
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಜ18): ತಮ್ಮ ಇಷ್ಟಾರ್ಥ ಗಳನ್ನು ಈಡೇರಿಸುವಂತೆ ಭಕ್ತರು ದೇವರಿಗೆ ಹರಕೆ ಹೊರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತನಗಾಗಾದ ವ್ಯಕ್ತಿಗಳು ರಕ್ತ ಕಕ್ಕಿ ಸಾಯಲಿ, ನರಳಿ ನರಳಿ ಸಾಯಲಿ ಎಂದು ಕೇಡು ಬಯಸಿ ದೇವರಿಗೆ ಹರಕೆ ಹೊತ್ತು ದೇವರ ಹುಂಡಿಗೆ ಹಾಕಿದ್ದಾನೆ.
ಹೌದು ಇಂತಹ ವಿಚಿತ್ರ ಹಾಗು ಕೇಡುಬಯಸುವ ಪತ್ರವೊಂದು ಚಾಮರಾಜನಗರ ಕೊಳ್ಳೇಗಾಲದ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ ವೇಳೆ ಸಿಕಿದೆ. ಕೊಳ್ಳೇಗಾಲದ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿಯಲ್ಲಿ ಈ ವಿಚಿತ್ರ ಹರಕೆಯ ಪತ್ರವು ಲಭ್ಯವಾಗಿದೆ. ತನಗೆ ಆಗದ ಕುಟುಂಬ ಸರ್ವನಾಶವಾಗಲಿ ಎಂದು ವ್ಯಕ್ತಿಯೊಬ್ಬ ಹರಕೆ ಹೊತ್ತಿದ್ದು ಇದರಲ್ಲಿ ಬಳ್ಳಾರಿ ಜಿಲ್ಲೆಯ ವಿಳಾಸ ಬರೆಯಲಾಗಿದೆ. ಹನುಮಾರ್ ರಾಮ ನಾಯ್ಕ ರಕ್ತ ಕಕ್ಕಿ ಸಾಯಲಿ, ನೀಲಾಬಾಯಿ, ನೀಲಗಿರಿ ನಾಯ್ಕ, ಲೋಕೇಶಿ ನಾಯ್ಕ, ಮುಕ್ಕಿ ಬಾಯಿ, ಇವರೆಲ್ಲರೂ ನರಳಿ ಸಾಯಲಿ ಎಂದು ಬರೆಯಲಾಗಿದೆ. ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಿಬ್ಬಂದಿ ಈ ಪತ್ರವನ್ನು ಓದಿ ದಂಗಾಗಿದ್ದಾರೆ.
Chamarajanagara: ದೇವರೇ ನನ್ನ ಮೂರ್ತಿಯೇ ನನ್ನ ಕುತ್ತಿಗೆಗೆ ತಾಳಿ ಕಟ್ಟಲಿ: ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ
ಚಾಮರಾಜನಗರ ಜಿಲ್ಲೆಯಲ್ಲಿ ಈ ಹಿಂದೆಯೂ ವಿಚಿತ್ರ ಹರಕೆ ಪತ್ರಗಳು ಲಭ್ಯವಾಗಿದ್ದವು. ಅದರಲ್ಲಿ ಚಾಮರಾಜನಗರದ ಚಾಮರಾಜೇಶ್ವರನಿಗೆ ತನಗೆ ಇದೇ ಹೆಣ್ಣನ್ನು ಮದುವೆ ಆಗುವುದಕ್ಕೆ ಕರುಣಿಸು ಪತ್ರ ಬರೆಯಲಾಗಿತ್ತು. ಮತ್ತೊಂದೆಡೆ ಮುಕ್ಕಡಹಳ್ಳಿ ಮಾರಮ್ಮನಿಗೆ ಹರಕೆ ಹೊತ್ತು ತನಗೆ ಇಂತಹವನೇ ತಾಳಿ ಕಟ್ಟಬೇಕು ಎಂದು ಹುಂಡಿಗೆ ಹಾಕಿದ್ದ ಪತ್ರಗಳು ಹುಂಡಿಯ ಕಾಣಿಕೆ ಹಣದ ಎಣಿಕೆ ವೇಳೆ ಸಿಕ್ಕಿದ್ದವು. ಇದೀಗ ತನಗಾಗದ ಕುಟುಂಬದ ವಿರುದ್ದ ವಿಷ ಕಾರಿರುವ ಪತ್ರ ಸಿಕ್ಕಿದ್ದು ಮನುಷ್ಯ ನೈತಿಕತೆಯ ಅದಃಪತನಕ್ಕೆ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಕಡಿಮೆಯಾಗಬೇಕು ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ. ಇನ್ನು ದೇವರು ಒಳಿತನ್ನು ಬೇಡಿಕೊಂಡರೆ ಮಾತ್ರ ಈಡೇರಿಸುತ್ತಾನೆ, ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ದೇವಾಲಯದ ಸಿಬ್ಬಂದಿ ಹೇಳಿದ್ದಾರೆ.
ಪತ್ರದಲ್ಲಿರುವ ಸಾಲುಗಳು ಇಂತಿವೆ:
ಹನುಮಾರ್ ರಾಮ ನಾಯಕ ರಕ್ತ ಕಕ್ಕಿ ಸಾಯಲಿ.
ನೀಲಾಬಾಯಿ ಇವಳು ಕೊರಗಿ ಕೊರಗಿ ಸಾಯಲಿ.
ನೀಲಗಿರಿ ನಾಯ್ಕ
ಲೋಕೇಶಿ ನಾಯ್ಕ
ಮುಕ್ಕಿ ಬಾಯಿ, ಇವರೆಲ್ಲರೂ ನರಳಿ ಸಾಯಬೇಕು. ನಮ್ಮ ಮನೆಯ ಹತ್ತಿರ ಇವರು ಯಾರೂ ಇರಬಾರದು. ಹಂಗ ನೀನು ಮಾಡಬೇಕೆಂದು ಹೇಳಿಕೊಳ್ಳುತ್ತೇನೆ. ಒಂದು ವರ್ಷದಾ ಒಳಗೆ ಸಾಯಿಸಬೇಕು ಈ ರಾಮುನಾಯ್ಕನನ್ನು ಎಂದು ಹರಕೆ ಪತ್ರದಲ್ಲಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಬಂಧನಕ್ಕೆ ನಿಮಿಷಾಂಬ ದೇವಿ ಪವಾಡ: ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್
ಇನ್ನು ಈ ಹರಕೆ ಪತ್ರದಲ್ಲಿ ಕಮಲಾಪುರ ಕೆರೆ ತಾಂಡ, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ ಎಂದು ವಿಳಾಸವನ್ನೂ ಕೂಡ ಬರೆಯಲಾಗಿದೆ.