ಸ್ಯಾಂಟ್ರೋ ರವಿ ಬಂಧನಕ್ಕೆ ನಿಮಿಷಾಂಬ ದೇವಿ ಪವಾಡ: ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್
ರಾಜ್ಯದಲ್ಲಿ ವಿವಿಧ ಆರೋಪಗಳನ್ನು ಹೊತ್ತ ಸ್ಯಾಂಟ್ರೋ ರವಿ ಬಂಧನದ ಕುರಿತು ಶ್ರೀರಂಗಪಟ್ಟಣದ ನಿಮಿಷಾಂಬ ದೇವಿಗೆ ಹರಕೆ ಹೊತ್ತುಕೊಂಡು ಒಂದೇ ದಿನದಲ್ಲಿ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನವಾಗಿದ್ದಾನೆ. ಹೀಗಾಗಿ, ಆರೋಪಿ ಬಂಧನದ ಬೆನ್ನಲ್ಲೇ ನಿಮಿಷಾಂಬ ದೇವಿಗೆ ಹರಕೆ ತೀರಿಸಲು ಆಗಮಿದ್ದೇನೆ.
ಮಂಡ್ಯ (ಜ.14): ರಾಜ್ಯದಲ್ಲಿ ವಿವಿಧ ಆರೋಪಗಳನ್ನು ಹೊತ್ತ ಸ್ಯಾಂಟ್ರೋ ರವಿ ಬಂಧನದ ಕುರಿತು ಶ್ರೀರಂಗಪಟ್ಟಣದ ನಿಮಿಷಾಂಬ ದೇವಿಗೆ ಹರಕೆ ಹೊತ್ತುಕೊಂಡು ಒಂದೇ ದಿನದಲ್ಲಿ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನವಾಗಿದ್ದಾನೆ. ಹೀಗಾಗಿ, ಆರೋಪಿ ಬಂಧನದ ಬೆನ್ನಲ್ಲೇ ನಿಮಿಷಾಂಬ ದೇವಿಗೆ ಹರಕೆ ತೀರಿಸಲು ಆಗಮಿದ್ದೇನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ತೀರದ ಗಂಜಾಂನಲ್ಲಿರುವ ನಿಮಿಷಾಂಭ ದೇವಿಗೆ ಹರಕೆ ಪೂಜೆಯನ್ನು ತೀರಿಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ನಿಮಿಷಾಂಭ ದೇವಿ ಮೇಲೆ ಹನ್ನೆರಡು ವರ್ಷಗಳಿಂದ ನನಗೆ ನಂಬಿಕೆ ಇದೆ. 2011ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ಆಗಿತ್ತು. ಆಗಲೂ ಬಂದು ನಾನು ದೇವಿಗೆ ಹರಕೆ ಹೊತ್ತಿದ್ದೆ. ಹಾಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ನಾವು ಮೈಸೂರಿಗೆ ಹೋಗುವುದರ ಒಳಗಾಗಿ ಅಂದರೆ ಕೇವಲ 5 ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿತ್ತು. ಈಗಲೂ ಸ್ಯಾಂಟ್ರೋ ರವಿ ವಿಚಾರದಲ್ಲಿ ಅಂತಹದೇ ಪವಾಡ ನಡೆದಿದೆ ಎಂದಿದ್ದಾರೆ.
ಸ್ಯಾಂಟ್ರೋ ರವಿಯನ್ನು ಗುಜರಾತ್‌ಗೆ ಕರೆಸಿಕೊಂಡಿದ್ದೇ ಗೃಹ ಸಚಿವರು: ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಸ್ಯಾಂಟ್ರೋ ರವಿ ಬಂಧನಕ್ಕೆ ಹರಕೆ ಹೊತ್ತಿದ್ದೆ:
ಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಆರೋಪಿ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಜ.10 ರಂದು ನಾನು ಬಂದು ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದೆನು. ಈಗಲೂ ಹರಕೆ ಹೊತ್ತ 22 ಗಂಟೆಗಳಲ್ಲೇ ಆರೋಪಿ ಸಿಕ್ಕಿದ್ದಾನೆ. ಹಾಗಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇನೆ. ದೇವಿ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ. ನಾನಗೂ ಬಹಳ ನಂಬಿಕೆ ಇದೆ. ಆತನಿಂದಾಗಿ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹಾಗಾಗಿ ಆತ ನಮಗೆ ಬೇಗ ಸಿಗಲಿ ಎಂದು ಹರಕೆ ಹೊತ್ತಿದ್ದೆನು ಎಂದು ತಿಳಿಸಿದ್ದಾರೆ.
ಸಹಾಯ ಮಾಡಿದವರ ಮೇಲೂ ಕ್ರಮ:
ಗುಜರಾತ್‌ನಲ್ಲಿ ಬಂಧಿಸಿ ಕರೆತಂದಿರುವ ಸ್ಯಾಂಟ್ರೋ ರವಿ ಈಗ ನಮ್ಮ ಕಸ್ಟಡಿಯಲ್ಲಿದ್ದಾನೆ. ಆತನ ಹೇಳಿಕೆ ದಾಖಲಿಸಲಾಗುತ್ತಿದೆ. ಮೊದಲು ಆತನ ವಿರುದ್ದ ದಾಖಲಾಗಿರುವ ಎಲ್ಲ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತದೆ. ನಂತರ, ಆತ ತಲೆ ಮರೆಸಿಕೊಂಡು ಎಲ್ಲೆಲ್ಲಿ ಇದ್ದ. ಆತನಿಗೆ ಯಾರೆಲ್ಲಾ ಸಹಾಯ ಮಾಡಿದ್ದರು ಎಂಬುದರ ಬಗ್ಗೆ ವಿಚಾರಣೆ ಮಾಡುತ್ತೇವೆ. ಹಾಗೊಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಗುರುತೇ ಸಿಗದಂತೆ ವೇಷ ಬದಲಿಸಿದ ಸ್ಯಾಂಟ್ರೋ ರವಿ ಬಂಧನ, ರಾಜ್ಯ ರಾಜಕೀಯದಲ್ಲಿ ಸಂಚಲನ!
ಕಾಂಗ್ರೆಸ್, ಜೆಡಿಎಸ್ ಆರೋಪ:
ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ, ಅತ್ಯಾಚಾರ, ಮಹಿಳೆಯರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ ಕಳೆದೊಂದು ವಾರದಿಂದ ಕಣ್ಮರೆ ಆಗಿದ್ದನು. ಆದರೆ, ಇದರಿಂದ ಸರ್ಕಾರಕ್ಕೆ ತೀವ್ರ ಕೆಟ್ಟ ಹೆಸರು ಬರುತ್ತಿತ್ತು. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತೀವ್ರ ಆರೋಪಗಳು ಕೂಡ ಕೇಳಿಬರುತ್ತಿದ್ದವು. ಈಗ ನಿನ್ನೆ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಪೊಲೀಸರ ನೆರವಿನಿಂದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ದಿನ ಒಂದೊಂದು ರಾಜ್ಯಕ್ಕೆ ಅಲೆದಾಡಿದ ರವಿ ಕೊನೆಗೆ ಅಹಮ್ಮದಾಬಾದ್‌ನಲ್ಲಿ ಬಂಧಿಸಲಾಗಿದೆ. ಮೊನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಹಮ್ಮದಾಬಾದ್‌ಗೆ ತೆರಳಿದ್ದರು. ನಿನ್ನೆ ರವಿ ಬಂಧನವೂ ಅಹಮ್ಮದಾಬಾದ್‌ನಲ್ಲಿ ಆಗಿದೆ. ಇದು ರವಿಯನ್ನು ರಕ್ಷಿಸಲು ನಡೆದ ನಾಟಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪಿಸಿದೆ. ರವಿ ಬಂಧನದ ಕುರಿತು ವಿಪಕ್ಷಗಳ ಆರೋಪವೇನು? ಸ್ಯಾಂಟ್ರೋ ರವಿ ಪತ್ತೆಹಚ್ಚಿ ಬಂಧಿಸಿದ ರೋಚಕ ಪಯಣ ಇಲ್ಲಿದೆ.