ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 30 ಗ್ರಾಮ ಪಂಚಾಯ್ತಿಗಳು ಇವೆ. ಇದರಡಿ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಭರದಿಂದ ಸಾಗಿವೆ. ಪ್ರತಿ ದಿನ 14 ರಿಂದ 15 ಸಾವಿರ ಕೂಲಿಕಾರರಿಗೆ ನಿತ್ಯ ಕೆಲಸ ನೀಡಲಾಗುತ್ತಿದೆ. ಏಪ್ರಿಲ್‌-ಮೇ ತಿಂಗಳ ಮಧ್ಯೆ ಇದುವರೆಗೆ 3,17,000 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.

ಗುರು​ರಾಜ ಗೌಡೂ​ರು 

ಲಿಂಗಸುಗೂರು(ಮೇ.24): ಶ್ಯಾರಿ ಗಂಜಿಗಾಗಿ ಊರೂರು ತಿರುಗುವ ಬೀಭತ್ಸ ಬದುಕು ಬಂಗಾರದ ನಾಡಿನ ಜನರದು. ದುರಿತ ಕಾಲದಲ್ಲಿ ಬಡ ಜನರ ಕೈಗೆ ಉದ್ಯೋಗ, ಹೊಟ್ಟೆಗೆ ಅಂಬಲಿ ನೀಡುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತಾಲೂಕಿನಲ್ಲಿ ಹೊಸ ಕ್ರಾಂತಿ ಮಾಡಿದೆ.

3.17 ಲಕ್ಷ ಮಾನವ ದಿನಗಳು ಸೃಷ್ಟಿ:

ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 30 ಗ್ರಾಮ ಪಂಚಾಯ್ತಿಗಳು ಇವೆ. ಇದರಡಿ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಭರದಿಂದ ಸಾಗಿವೆ. ಪ್ರತಿ ದಿನ 14 ರಿಂದ 15 ಸಾವಿರ ಕೂಲಿಕಾರರಿಗೆ ನಿತ್ಯ ಕೆಲಸ ನೀಡಲಾಗುತ್ತಿದೆ. ಏಪ್ರಿಲ್‌-ಮೇ ತಿಂಗಳ ಮಧ್ಯೆ ಇದುವರೆಗೆ 3,17,000 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.

ನಾನ್‌ ರೊಕ್ಕಾ ಕೊಡಂಗಿಲ್ಲ.. ಬಸ​ನ​ಗೌಡ ಟಿಕೆಟ್‌ ತಗೊ​ಬ್ಯಾಡ ಅಂತ ಹೇಳ್ಯಾ​ನ: ಫ್ರೀ ಪ್ರಯಾಣಕ್ಕಾಗಿ ಅಜ್ಜಿ ಕಿರಿಕ್‌

ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ:

ಮಳೆ ಕೊರತೆಯಿಂದ ಅಂತರ್ಜಲಮಟ್ಟಕುಸಿಯುತ್ತಿದೆ. ಇದನ್ನು ಮನಗಂಡು ಕೆರೆ ಹೂಳೆತ್ತುವುದು, ಗೋಕಟ್ಟೆಗಳ ನಿರ್ಮಾಣ, ಹೊಸಕೆರೆ ನಿರ್ಮಾಣ, ಹಳೆ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಕೃಷಿ ಹೊಂಡಗಳ ನಿರ್ಮಾಣ, ಪ್ರಮುಖವಾಗಿ ಪೈದೊಡ್ಡಿ, ಗೌಡೂರು, ಗೆಜ್ಜಲಗಟ್ಟಾ, ಚಿತ್ತಾಪುರ, ನಾಗರಾಳ, ನಾಗಲಾಪುರ ಹಲ್ಕಾವಟಗಿ, ಸರ್ಜಾಪುರ, ಹೊನ್ನಹಳ್ಳಿಗಳಲ್ಲಿ ಕೆರೆಗಳಲ್ಲಿ ಕೃಷಿ ಹೊಂಡಗಳ ನಿರ್ಮಿಸಿ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಇನ್ನೂ ಗೋಕಟ್ಟೆಗಳಂತೂ ಜಾನುವಾರಗಳಿಗೆ ಕುಡಿವ ನೀರಿಗೆ ಆಸರೆಯಾಗಿವೆ. ನೀರಾವರಿ ಯೋಜನೆಗಳ ನಾಲೆಗಳ ಹೂಳೆತ್ತುವ ಕಾಮಗಾರಿಗಳೂ ಭರದಿಂದ ಸಾಗಿದ್ದು ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಿದೆ.

12.50 ಕೋಟಿ ಕೂಲಿ ಹಣ ಪಾವತಿ:

ಚುನಾವಣೆ ಮಧ್ಯೆಯೂ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ಇದುವರೆಗೂ ರು.12.50 ಕೋಟಿ ಹಣವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿ ಮಾಡಲಾಗಿದೆ.

ಬಿಸಿಲಿಗೂ ರಕ್ಷಣೆ:

ಈಗಾಗಲೆ ಬಿಸಿಲು ವೀಪರೀತವಾಗಿದೆ. ಇದರಿಂದ ಕೂಲಿಕಾರರಿಗೆ ನೆರಳಿನ ಸೌಕರ್ಯ, ಕುಡಿಯುವ ನೀರು ಹಾಗೂ ಆರೋಗ್ಯ ತಪಾಸಣೆಯನ್ನು ಕೂಲಿಕಾರರು ಕೆಲಸ ಮಾಡುವ ಸ್ಥಳದಲ್ಲೆ ಮಾಡಲಾಗುತ್ತಿದೆ. ಪರಿಣಾಮ ಬಿಸಿಲಿನಲ್ಲಿ ದಣಿದ ಕೂಲಿಕಾರರಿಗೆ ವಿಶ್ರಾಂತಿಯೂ ದೊರೆತು ನಿಗದಿತ ಕೆಲಸ ಮಾಡಲು ಹುಮ್ಮಸ್ಸು ಉಂಟಾಗುತ್ತಿದೆ.

ಆರೋಗ್ಯ ತಪಾಸಣೆ:

ಬಡ ಕೂಲಿಕಾರರಿಗೆ ಕೆಲಸದ ವೇಳೆಯಲ್ಲಿಯೇ ಅಮೃತ ವರ್ಷಣಿ ಯೋಜನೆಯಡಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಗಂಭೀರ ಕಾಯಿಲೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಗೂ ಉನ್ನತ ಆಸ್ಪತ್ರೆಗಳಿಗೆ ತೆರಳಲು ಸೂಚನೆ ನೀಡಲಾಗುತ್ತಿದೆ. ಇದರಿಂದ ಬಡ ಕೂಲಿಕಾರರಿಗೆ ಕೆಲಸ ಜೊತೆಗೆ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುತ್ತಿದೆ.

ರಾಯಚೂರು: ಬಿಸಿಲುನಾಡಿನ ಯುವಕ ಐಎಎಸ್‌ಗೆ ಸೆಲೆಕ್ಟ್..!

ಬೇಸಿಗೆಯಲ್ಲಿ ರೈತರು, ಕೂಲಿಕಾರರು, ಬಡ ಜನರಿಗೆ ಉದ್ಯೋಗ ಕಡಿಮೆ ಇರುತ್ತದೆ. ಇದನ್ನು ಮನಗಂಡು ತಾಲೂಕಿನಾದ್ಯಂತ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಉದ್ಯೋಗ ಕೇಳಿದ ತಕ್ಷಣ ಜನರಿಗೆ ಕೆಲಸ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳ ರಚನೆ ಮಾಡಿದ್ದು ಬಡ ಜನರಿಗೆ ಅನುಕೂಲ ಮಾಡಿ, ಗುಳೆ ಹೋಗುವುದಕ್ಕೆ ಕಡಿವಾಣ ಹಾಕಲು ಶ್ರಮಿಸಲಾಗುತ್ತಿದೆ ಅಂತ ಲಿಂಗಸುಗೂರು ತಾಪಂ ಇಒ ಅಮರೇಶ ಯಾದವ್‌ ಹೇಳಿದ್ದಾರೆ. 

ಉದ್ಯೋಗ ಖಾತ್ರಿ ಯೋಜನೆಯಡಿ 3 ತಿಂಗಳಿಂದಲೂ ಕಾಮಗಾರಿಗಳು ಭರದಿಂದ ಸಾಗಿವೆ. ಪ್ರತಿ ದಿನ 14 ರಿಂದ 15 ಸಾವಿರ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಗುಳೆ ಪ್ರಮಾಣ ತಗ್ಗಿದೆ ಅಂತ ಲಿಂಗಸುಗೂರು ಎಂಎನ್‌ಆರ್‌ಇಜಿ ನಿರ್ದೇಶಕ ಸೋಮನಗೌಡ ಲೆಕ್ಕಿಹಾಳ ತಿಳಿಸಿದ್ದಾರೆ.