ರಾಯಚೂರು: ಬಿಸಿಲುನಾಡಿನ ಯುವಕ ಐಎಎಸ್‌ಗೆ ಸೆಲೆಕ್ಟ್..!
ಡಿಗ್ರಿ ಅಭ್ಯಾಸ ಮಾಡುವಾಗಲೇ ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದ ಶ್ರವಣ್ ಕುಮಾರ್, ಡಿಗ್ರಿ ಮುಗಿದ ಬಳಿಕ UPSC ಪರೀಕ್ಷೆಗೆ ಅಟೆಂಡ್ ಆದರೂ ಮೊದಲನೇ ಎರಡು ಅಟ್ಟೆಂಪ್ಟ್ ಗಳಲ್ಲಿ ಯಶಸ್ವಿಯಾಗಲಿಲ್ಲ. ಎರಡು ಬಾರಿ ಫೈಲ್ ಆಗಿದ್ರೂ ಧೃತಿಗೆಡದೆ ಶ್ರವಣ್ ಕುಮಾರ್ ಮೂರನೆಯ ಪ್ರಯತ್ನದಲ್ಲಿ ಐ ಆರ್ ಎಸ್ ಗೆ ಸೆಲೆಕ್ಟ್ ಆಗಿ ಈಗ ತರಬೇತಿಯಲ್ಲಿ ಇದ್ದಾರೆ.
ರಾಯಚೂರು(ಮೇ.23): ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ರಾಘವೇಂದ್ರ ರಾವ್ ಅವರ ಪುತ್ರ ಪಿ. ಶ್ರವಣ್ ಕುಮಾರ್ UPSC ನಡೆಸಿದ ಪರೀಕ್ಷೆಯಲ್ಲಿ 222ನೇ ರ್‍ಯಾಂಕ್ ಪಡೆದಿದ್ದಾರೆ. ಕಳೆದ ವರ್ಷ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಶ್ರವಣ್ ಕುಮಾರ್ ಇಂಡಿಯನ್ ರೆವಿನ್ಯೂ ಸರ್ವಿಸಸ್ ಸೆಲೆಕ್ಟ್ ಆಗಿ ತರಬೇತಿಯನ್ನು ಪಡೆಯುತ್ತಿದ್ದಾರೆ.
1995ರಲ್ಲಿ ಜನಿಸಿದ ಶ್ರವಣ್ ಕುಮಾರ್ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪ್ರಾಥಮಿಕ ಶಿಕ್ಷಣ ಆಂಧ್ರದ ವಿಶಾಖಪಟ್ಟಣಂನಿಂದ ಶುರುವಾಗಿತ್ತು. ಕುದುರೆಮುಖ, ಆರ್ಕೋನಮ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೈಸ್ಕೂಲ್ ಅನ್ನು ಒರಿಸ್ಸಾ ರಾಜ್ಯದ ಕಾನೀಯದಲ್ಲಿ ಮುಗಿಸಿದರು. ಇನ್ನೂ ಪಿಯುಸಿ ಹೈದರಾಬಾದಿನಲ್ಲಿ ಮುಗಿಸಿದ ಆ ಬಳಿಕ ಬಿ ಟೆಕ್ ಅನ್ನು ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಿಂದ ಡಿಗ್ರಿ ಪಡೆದರು.
'ಕಂಡಿದ್ದು ಒಂದೇ ಕನಸು.. ಅದು ನಿಜವಾಗಿದೆ..' ಯುಪಿಎಸ್‌ಸಿ ಟಾಪರ್ ಇಶಿತಾ ಕಿಶೋರ್ ಮಾತು!
ಡಿಗ್ರಿ ಅಭ್ಯಾಸ ಮಾಡುವಾಗಲೇ ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದ ಶ್ರವಣ್ ಕುಮಾರ್, ಡಿಗ್ರಿ ಮುಗಿದ ಬಳಿಕ UPSC ಪರೀಕ್ಷೆಗೆ ಅಟೆಂಡ್ ಆದರೂ ಮೊದಲನೇ ಎರಡು ಅಟ್ಟೆಂಪ್ಟ್ ಗಳಲ್ಲಿ ಯಶಸ್ವಿಯಾಗಲಿಲ್ಲ. ಎರಡು ಬಾರಿ ಫೈಲ್ ಆಗಿದ್ರೂ ಧೃತಿಗೆಡದೆ ಶ್ರವಣ್ ಕುಮಾರ್ ಮೂರನೆಯ ಪ್ರಯತ್ನದಲ್ಲಿ ಐ ಆರ್ ಎಸ್ ಗೆ ಸೆಲೆಕ್ಟ್ ಆಗಿ ಈಗ ತರಬೇತಿಯಲ್ಲಿ ಇದ್ದಾರೆ.
ಇನ್ನೂ ಶ್ರವಣಕುಮಾರ್ ತಂದೆ ರಾಘವೇಂದ್ರ ಕಳೆದ ಎರಡು ದಶಕಗಳಿಂದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ದಲ್ಲಿ ಕೆಲಸ ಮಾಡುತ್ತಿದ್ದು, ದೇಶದ ವಿವಿಧಡೆ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಹೈದರಾಬಾದಿನ ಭಾರತ ಡೈನಮಿಕ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.