Asianet Suvarna News Asianet Suvarna News

ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು

ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಮೇರಿಕಾ, ಬ್ರಿಟನ್, ಅರಬ್, ಕೆನಡಾ ಸೇರಿದಂತೆ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ದೊರಕಿಸಲು ಹೆಚ್ಚು ಒತ್ತು ನೀಡುವುದಾಗಿ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು.

Emphasis on higher education abroad for rural students snr
Author
First Published Nov 7, 2023, 8:25 AM IST

  ತುಮಕೂರು :  ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಮೇರಿಕಾ, ಬ್ರಿಟನ್, ಅರಬ್, ಕೆನಡಾ ಸೇರಿದಂತೆ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ದೊರಕಿಸಲು ಹೆಚ್ಚು ಒತ್ತು ನೀಡುವುದಾಗಿ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು.

ಸಾಹೇ ವಿವಿಗೆ ಭೇಟಿ ನೀಡಿದ ಅಮೆರಿಕಾದ ಕನ್ಸರ್ಟಿ ಯಂ ಫಗ್ಲೋಬಲ್ಎಜುಕೇಶನ್ (ಸಿಜಿಇ) ನಿಯೋಗದ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದರು, ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನುನೀಡಲು ಹಲವು ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದರು.

ವಿದ್ಯಾಭ್ಯಾಸಕ್ಕೆಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನುನೀಡಲಾಗುತ್ತಿದ್ದು, ಸಾಹೇ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದೇಶಗಳಲ್ಲೂ ಉದ್ಯೋಗ ಪಡೆದುಕೊಂಡು. ಉನ್ನತ ಹುದ್ದೆಗಳಲ್ಲಿ ಕಾರ್ಯೇನರ್ವಹಿಸುತ್ತಿದ್ದಾರೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಇದುವರೆಗೂ 36 ಸಾವಿರ ಇಂಜಿನಿಯರ್ ವಿದ್ಯಾರ್ಥಿಗಳು 6 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆದು ವೃತ್ತಿ ಬದುಕು ರೂಪಿಸಿಕೊಂಡಿದ್ದಾರೆ ಎಂದು ಕಾಲೇಜಿನ ಶೈಕ್ಷಣಿಕ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಾಗತಿಕ ಮಟ್ಟದಲ್ಲಿ ಭಾಗವಹಿಸುವಿಕೆಯ ಮೂಲಕ ಉನ್ನತ ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ನಿಯೋಗವು ಸಾಹೇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ವಿನಿಮಯ ಮಾಡಿಕೊಂಡರು.

ನಿಯೋಗದಲ್ಲಿ ಸಿಜಿಇ ಅಧ್ಯಕ್ಷ ಡಾ.ಕ್ಯಾರೊಲಿನ್ಬಿಷಪ್, ವೇಲ್ಯಾಂಡ್ಬ್ಯಾಪ್ಟಿಸ್ಟ್ವಿ ವಿಶ್ವವಿದ್ಯಾಲಯದ ಡಾ.ಬಾಬಿಹಾಲ್, ವೇಲ್ಯಾಂಡ್ಬ್ಯಾಪ್ಟಿಸ್ಟ್ವಿ ವಿಶ್ವವಿದ್ಯಾಲಯ ಜಾಗತಿಕ ಕಾರ್ಯಕ್ರಮಗಳ ನಿರ್ದೇಶಕ ಡಾನ್ಆಶ್ಲೇ, ಆಂರ್ಸಾನ್ವಿ ಇದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಸಾಹೇವಿವಿಯ ಉಪಕುಲಪತಿ ಡಾ. ಕೆಬಿಲಿಂಗೇಗೌಡ, ರಿಜಿಸ್ಟಾರ್‌ ಡಾ. ಎಂ.ಝಡ್. ಕುರಿಯನ್, ಕುಲಾಧಿಪತಿಗಳ ಸಲಹೆಗಾರ ವಿವೇಕ್ ವೀರಯ್ಯ, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಂಬಿಸಾಣೆಕೊಪ್, ಟಿ.ಬೇಗೂರಿನ ಡಾ.ದಿವಾಕರ್, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಕುಡುವ, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ್ ಹಾಜರಿದ್ದು ನಿಯೋಗಕ್ಕೆಸಾಹೇ ವಿಶ್ವವಿದ್ಯಾನಿಲಯ ಮಾಹಿತಿ ನೀಡಿದರು.

Follow Us:
Download App:
  • android
  • ios