Asianet Suvarna News Asianet Suvarna News

ಚುನಾವಣೆ ಉದ್ದೇಶಕ್ಕೆ ಪಠ್ಯದಿಂದ ‘ಇಂಡಿಯಾ’ ಪದಕ್ಕೆ ಕೊಕ್‌: ಸಚಿವ ಮಧು ಬಂಗಾರಪ್ಪ

ಕೇಂದ್ರ ಸರ್ಕಾರ ಶಾಲಾ- ಕಾಲೇಜು ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ’ ಎಂದು ಬದಲಾಯಿಸಲು ಮುಂದಾಗಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಬಿಟ್ಟು ಸದಾ ಇಂತಹ ವಿಷಯಗಳನ್ನಿಟ್ಟುಕೊಂಡೇ ರಾಜಕೀಯ ಮಾಡುತ್ತಿರುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

Change from text to word India for election purposes Says Minister Madhu Bangarappa gvd
Author
First Published Nov 4, 2023, 6:03 AM IST

ಬೆಂಗಳೂರು (ನ.04): ಕೇಂದ್ರ ಸರ್ಕಾರ ಶಾಲಾ- ಕಾಲೇಜು ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ’ ಎಂದು ಬದಲಾಯಿಸಲು ಮುಂದಾಗಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಬಿಟ್ಟು ಸದಾ ಇಂತಹ ವಿಷಯಗಳನ್ನಿಟ್ಟುಕೊಂಡೇ ರಾಜಕೀಯ ಮಾಡುತ್ತಿರುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ನಗರದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಶಾಲಾ ಪಠ್ಯಗಳಲ್ಲಿ ‘ಇಂಡಿಯಾ’ ಪದದ ಬದಲಿಗೆ ‘ಭಾರತ’ ಪದ ಬಳಕೆಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ವಿಶೇಷ ಸಮಿತಿಯ ಮಾಡಿರುವ ಶಿಫಾರಸು ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ಮಧು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಅಭಿವೃದ್ಧಿ ಬದಲು ಬರೀ ಹೆಸರು ಬದಲಾವಣೆ ವಿಚಾರ ಮಾತನಾಡುತ್ತಾರೆ. ಇದರಲ್ಲಿ ಸ್ವಾರ್ಥವಿದೆ. ಕೇಂದ್ರದಿಂದ ಇಂತಹ ಹೆಸರು ಬದಲಾವಣೆ ಶಿಫಾರಸುಗಳು ಬಂದರೆ ಅದನ್ನು ಪರಿಗಣಿಸಬೇಕಾ? ಬೇಡವಾ? ಎಂಬುದನ್ನು ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದರು.

ಸರ್ಕಾರ ಬರಗಾಲ ಸಮರ್ಥವಾಗಿ ಎದುರಿಸಲಿದೆ: ಸಚಿವ ಮಧು ಬಂಗಾರಪ್ಪ

ವೇಣುಗೋಪಾಲ್ ವಾರ್ನಿಂಗ್ ಗೊತ್ತಿಲ್ಲ!: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡದಂತೆ ಶಾಸಕ, ಸಚಿವರಿಗೆ ಹೈಕಮಾಂಡ್ ‌ನಾಯಕರು ನೀಡಿರುವ ಎಚ್ಚರಿಕೆ ಕುರಿತ ಪ್ರಶ್ನೆಗೆ, ವಾರ್ನಿಂಗ್ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿ ಅವರಿದ್ದರು. ಅಲ್ಲಿ ಏನು ಹೇಳಿದ್ದಾರೋ ನನಗೆ ತಿಳಿದಿಲ್ಲ ಎಂದರು. ಲೋಕಸಭೆಗೆ ಚುನಾವಣೆಗೆ ಕ್ಷೇತ್ರವಾರು ಪ್ರವಾಸ ಮಾಡಿ ಸಂಭಾವ್ಯ ಅಭ್ಯರ್ಥಿಗಳ ವರದಿ ನೀಡಲು ನೇಮಿಸಿದ್ದ ವೀಕ್ಷಕರು ತಮ್ಮ ಕೆಲಸ ಪೂರ್ಣಗೊಳಿಸಿಲ್ಲವಂತಲ್ಲ ಎಂಬ ಪ್ರಶ್ನೆಗೆ, ನಾನು ವೀಕ್ಷಕನಾಗಿ ನನ್ನ ಟಾರ್ಗೆಟ್ ರೀಚ್ ಮಾಡಿದ್ದಿನಿ. 

ಜನಮಾನಸದಲ್ಲಿ ಎಸ್‌.ಬಂಗಾರಪ್ಪರಿಗೆ ಶಾಶ್ವತ ಸ್ಥಾನ: ಸಚಿವ ಮಧು ಬಂಗಾರಪ್ಪ

ಆದರೆ ಕೆಲವರು ಮಾಡಿಲ್ಲ. ಬೇಗ ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸ್ಥಳೀಯ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ ವರದಿ ಕೊಟ್ಟರೆ ಅಭ್ಯರ್ಥಿಗಳನ್ನು ತೀರ್ಮಾನ ಮಾಡಲು ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂದರು. ಶಿವಮೊಗ್ಗ ಉಸ್ತುವಾರಿ ಸಚಿವರಾದ ತಾವು ಪಕ್ಷದ ಜಿಲ್ಲೆಯ ಶಾಸಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾರೋ ಒಬ್ಬರು ಹೇಳುತ್ತಾರೆಂದು ನಾನು ಅದಕ್ಕೆ ಪ್ರತಿಕ್ರಿಯೆ ನೀಡಲು ಕುಳಿತಿಲ್ಲ. ಯಾವ ಕಾರ್ಯಕ್ರಮಕ್ಕೆ ಅವರನ್ನು ಕರೆದಿಲ್ಲ ಎಂದು ಅವರೇ ಹೇಳಬೇಕು ಎಂದರು.

Follow Us:
Download App:
  • android
  • ios