ಕಾಲುವೆಗಿಳಿದ ಆನೆಗಳು... ಮೇಲೆ ಬರಲಾಗದೇ ಗಜಪಡೆಯ ಪಾಡು... ವಿಡಿಯೋ ವೈರಲ್
- ಗ್ರಾಮಸ್ಥರು ಓಡಿಸಿದಾಗ ಕಾಲುವೆಗೆ ಇಳಿದ ಆನೆಗಳು
- ಮೇಲೆ ಬರಲಾಗದೇ ಹರ ಸಾಹಸ
- ಮೈಸೂರಿನ ಹಾನಗೋಡು ಗ್ರಾಮದಲ್ಲಿ ಘಟನೆ
ಮೈಸೂರು: ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಮಾಡುತ್ತಿರುವ ಅವಾಂತರಗಳಿಂದ ಯಾರಿಗೂ ಕೇಡು ಬಯಸದೇ ಬದುಕುವ ಮೂಕ ಜೀವಿಗಳು ತೊಂದರೆ ಅನುಭವಿಸುತ್ತಿವೆ. ಇಲ್ಲೂ ಆಗಿದ್ದು ಅದೇ. ಮೈಸೂರಿ(Mysuru)ನಲ್ಲಿ ಕಾಲುವೆಗೆ ಅದ್ಹೇಗೋ ಇಳಿದ ನಾಲ್ಕು ಕಾಡಾನೆಗಳು ಮೇಲೆ ಬರಲಾಗದೇ ಚಡಪಡಿಸಿದ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು (Hunsur) ತಾಲೂಕಿನ ಹಾನಗೋಡು (Hanagodu) ಗ್ರಾಮದಲ್ಲಿ ಬರುವ ಲಕ್ಷಣ ತೀರ್ಥ ನದಿಗೆ ಸೇರಿದ ಕಾಲುವೆಯಲ್ಲಿ ಈ ಘಟನೆ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಕೆಲಕಾಲ ಕಾಲುವೆಯಿಂದ ಮೇಲೆ ಬರಲು ಹರಸಾಹಸ ಪಟ್ಟ ಆನೆಗಳು ಕೊನೆಗೂ ಕಾಲುವೆಯಿಂದ ಕೆಲವು ಮೆಟ್ಟಿಲುಗಳನ್ನು ಏರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಆನೆಗಳು ಕಾಲುವೆಯಿಂದ ಹೊರಬರಲು ಹೆಣಗಾಡುತ್ತಿರುವ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಐದು ಆನೆಗಳು ಮಾನವ ನಿರ್ಮಿತ ಜಲಮೂಲದಿಂದ ಹೊರಬರಲು ದಾರಿ ಕಂಡುಕೊಳ್ಳಲು ಪ್ರಯತ್ನಿಸುವಾಗ ಹಲವಾರು ಬಾರಿ ಜಾರಿ ಬೀಳುವುದನ್ನು ಕಾಣಬಹುದು.
ಆನೆ ಕಾರಿಡಾರ್‌ಗಳಲ್ಲಿನ ಮೂಲಸೌಕರ್ಯವು ಅವುಗಳ ಮಿತಿಗಳನ್ನು ಪರೀಕ್ಷಿಸುತ್ತಿದೆ. ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಇವುಗಳು ಅದೃಷ್ಟ ಮಾಡಿವೆ. ಎಂದು ಬರೆದು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ (Susanta Nanda) ಅವರು ಈ ಮೇಲೆ ಬರಲು ಹೆಣಗಾಡುತ್ತಿರುವ ಆನೆಗಳ ವೀಡಿಯೊ ಟ್ವೀಟ್ ಮಾಡಿದ್ದಾರೆ.
ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...
ಗ್ರಾಮಸ್ಥರು ಹಿಂಡು ಹಿಂಡು ಬಂದ ಆನೆಗಳನ್ನು ಓಡಿಸಲು ಯತ್ನಿಸಿದಾಗ ಕಾಲುವೆಯಲ್ಲಿ ಸಿಲುಕಿಕೊಂಡಿದೆ. ಕಾಲುವೆಗೆ ಬಿದ್ದ ಆನೆಗಳು ಕಾಲುವೆಯಿಂದ ಹೊರಬರಲು ಸಾಧ್ಯವಾಗಲಿಲ್ಲ ಏಕೆಂದರೆ ನೀರು ಮತ್ತು ಜಾರುವ ದಂಡೆಗಳು ಅವುಗಳ ಸಂಕಟವನ್ನು ಹೆಚ್ಚಿಸಿವೆ. ನಂತರ ಆನೆಗಳು ಕಾಲುವೆಯನ್ನು ಕಷ್ಟ ಪಟ್ಟು ಹತ್ತಿದ್ದು, ಆನೆಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!
ಕಾಲುವೆಯಿಂದ ಹೊರಬಂದ ನಂತರ ಈ ಆನೆಗಳ ಗುಂಪು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂತಹ ಅಹಿತಕರ ಸಂದರ್ಭಗಳನ್ನು ತಪ್ಪಿಸಲು ಮತ್ತು ಭವಿಷ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಗಳನ್ನು ತಡೆಯಲು ಉತ್ತಮ ಯೋಜನೆ ಜಾರಿಗೆ ತರಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಮಾನವರು ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ. ಮಾನವರಿರುವ ಪ್ರದೇಶಗಳಿಗೆ ಕಾಡುಪ್ರಾಣಿಗಳ ಅಲೆದಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಚಿರತೆ ದಾಳಿ ಸಾಮಾನ್ಯ ಎನಿಸಿ ಬಿಟ್ಟಿದೆ. ಚಿರತೆಗಳು ಸಾಮಾನ್ಯವಾಗಿ ನಾಯಿ, ಕುರಿಗಳನ್ನು ಬೇಟೆಯಾಡುತ್ತವೆ. 2015 ರ ಸಂಶೋಧನೆಯ ಪ್ರಕಾರ, ಮಹಾರಾಷ್ಟ್ರವು ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದ ರಾಜ್ಯವಾಗಿದೆ. ನಂತರ ಮಧ್ಯಪ್ರದೇಶವಿದೆ. ಚಿರತೆಯೊಂದು ಮನೆಗೆ ನುಗ್ಗಿ ಸಾಕಿದ ನಾಯಿಯ ಮೇಲೆ ದಾಳಿ ಮಾಡಿರುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.