ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...
- ತಾಯಿ ಹಾಗೂ ಮರಿಯಾನೆಯ ಅಪರೂಪದ ವಿಡಿಯೋ
- ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ದೃಶ್ಯ
- ಟೂರ್ ಗೈಡ್ ಈ ದೃಶ್ಯವನ್ನು ಸೆರೆಹಿಡಿದಿದ್ದರು.
ಅಸ್ಸಾಂ(ಜ. 5): ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಪ್ರವಾಸಿಗರನ್ನು ಪಾರ್ಕ್‌ನತ್ತ ಸೆಳೆಯುತ್ತಿದೆ. ತಾಯಿ ಆನೆಯೊಂದು ಮರಿಯಾನೆಗೆ ತಿನ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ತಾಯಿ ಆನೆ ಹಾಗೂ ಮರಿಯಾನೆ ಹುಲ್ಲುಗಾವಲಿನ ಪ್ರದೇಶದಲ್ಲಿ ಜೊತೆಯಾಗಿ ಸಾಗುತ್ತಿವೆ. ತಾಯಿಯನ್ನು ಜೊತೆ ಜೊತೆಯಾಗಿ ಪುಟ್ಟ ಮರಿ ಹಿಂಬಾಲಿಸುತ್ತಿದೆ. ತಾಯಿ ಆನೆ ಹುಲ್ಲನ್ನು ಕಿತ್ತು ಅತ್ತಿತ್ತ ಅಲ್ಲಾಡಿಸುತ್ತ ಸ್ವಚ್ಛಗೊಳಿಸಿ ಅದನ್ನು ಬಾಯಿಗೆ ತುಂಬಿಸುತ್ತಿದೆ. ಬಾರಿ ಆನೆಗಳಲ್ಲದೇ ಎರಡು ಮೂರು ಬಗೆಯ ಹಕ್ಕಿಗಳು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿವೆ.
ಈ ಮುದ್ದಾದ ವಿಡಿಯೋವನ್ನು ಪ್ರವಾಸಿ ಮಾರ್ಗದರ್ಶಕ ಬಿಟುಪನ್ ಕೊಲೊಂಗ್ (Bitupan Kolong) ಅವರು ರೆಕಾರ್ಡ್ ಮಾಡಿದ್ದರು. ಈ ಅಪರೂಪದ ವಿಡಿಯೋವನ್ನು 44 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಬಹುತೇಕ ನೋಡಿದವರೆಲ್ಲಾ ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ಪ್ರವಾಸಿ ಮಾರ್ಗದರ್ಶಕನಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿವಂತ ಪ್ರಾಣಿ ಆನೆ. ಪ್ರಾಣಿಗಳಿಗೆ ಬಾಯಿ ಬಾರದಿರಬಹುದು. ಆದರೆ ಅವು ಬುದ್ದಿವಂತಿಕೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಮನುಷ್ಯನಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಪ್ರಾಣಿಗಳ ಪ್ರೀತಿ ಹಾಗೂ ಭಾವುಕತೆ ಬಗ್ಗೆ ಈಗಾಗಲೇ ನಾವು ಹಲವು ನಿದರ್ಶನಗಳನ್ನು ನೋಡಿರಬಹುದು. ಈಗ ನಾವು ಹೇಳ ಹೊರಟಿರುವುದು ಆನೆಗಳ ಪ್ರೀತಿ ಬಗ್ಗೆ. ಆನೆಗಳು ತಮ್ಮನ್ನು ನೋಡಿಕೊಂಡಿದ್ದ ವ್ಯಕ್ತಿಯನ್ನು 14 ತಿಂಗಳ ಬಳಿಕ ಮೊದಲ ಬಾರಿಗೆ ನೋಡಿದಾಗ ಅವುಗಳ ಭಾವುಕ ಪುನರ್‌ಮಿಲನದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ತಮ್ಮನ್ನು ಸಾಕಿದವನನ್ನು 14 ತಿಂಗಳ ಬಳಿಕ ನೋಡುವ ಆನೆಗಳು ಆತನ ಸುತ್ತ ಸೇರಿ ಪ್ರೀತಿ ಮಾಡುವ ವಿಡಿಯೋ ಇದಾಗಿತ್ತು.
Emotional Video : ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ... ಮತ್ತೆ ಮತ್ತೆ ನೋಡುವಂತೆ ಮಾಡುವ ವಿಡಿಯೋ
Buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, 3.7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಆಳವಿಲ್ಲದ ಹರಿಯುವ ನೀರಿನಲ್ಲಿ ದೂರದಲ್ಲಿ ನಿಂತು, ಆನೆ ಸಾಕಿದ ಡೆರೆಕ್ (Derek)ಎಂಬವರು ತಮ್ಮ ಬಾಯಿಯ ಮೂಲಕ ವಿಭಿನ್ನವಾದ ಶಬ್ಧವನ್ನು ಮಾಡುತ್ತಾರೆ. ಈ ಶಬ್ಧವನ್ನು ಕೇಳಿಸಿದ ಕೂಡಲೇ ಶಬ್ಧ ಬಂದ ಕಡೆಗೆ ಧಾವಿಸಿ ಬರುವ ನಾಲ್ಕು ಐದು ಆನೆಗಳ ಗುಂಪು ಹರಿಯುವ ನೀರಿಗೆ ವಿರುದ್ಧವಾದ ದಿಕ್ಕಿನಲ್ಲಿ ನಿಂತಿರುವ ತಮ್ಮನ್ನು ಸಾಕಿದಾತನನ್ನು ನೋಡಲು ಬೇಗ ಬೇಗನೇ ಧಾವಿಸಿ ಬರುತ್ತವೆ. ಬಳಿಕ ಸಾಕಿದಾತನ ಸುತ್ತ ಸೇರಿ ತಮ್ಮ ಸೊಂಡಿಲಿನಲ್ಲಿ ಆತನನ್ನು ಮುದ್ದಾಡುತ್ತವೆ. ಈ ಕ್ಷಣವೂ ಜನರು ವಿಡಿಯೋವನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದೆ.
ಹಿಮದಲ್ಲಿ ಆನೆ ಮರಿಯ ಆಟ... ಮನಮೋಹಕ ದೃಶ್ಯ ವೈರಲ್
ಇನ್ನು ಈ ಆನೆ ಸಾಕಿದ ಡೆರೆಕ್ ತೋಮ್ಸನ್ (Derek Thompson) ಬಗ್ಗೆ ಹೇಳುವುದಾದರೆ ಇವರು ಆನೆಗಳನ್ನು ರಕ್ಷಿಸುವ ಸೇವ್ ಎಲಿಪ್ಯಾಂಟ್ ಫೌಂಡೇಶನ್‌ನ (Save The Elephant Foundation) ಸಹ ಸಂಸ್ಥಾಪಕರಾಗಿದ್ದಾರೆ. ವಿಭಿನ್ನವಾದ ಸ್ವರಗಳಲ್ಲಿ ಆನೆಗಳನ್ನು ಕರೆದಾಗ ಅವುಗಳು ಓಡಿ ಓಡಿ ಬರುವ ದೃಶ್ಯ ಎಲ್ಲರನ್ನು ಭಾವುಕರನ್ನಾಗಿಸುತ್ತವೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್ 24 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ಅಲ್ಲಿ 3.7 ಲಕ್ಷ ಜನ ಅದನ್ನು ವೀಕ್ಷಿಸಿದ್ದಾರೆ. ಜೊತೆ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲೂ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಡೆರೆಕ್ ಥಾಮ್ಸನ್‌ನನ್ನು ಗುರುತಿಸಿದ ವ್ಯಕ್ತಿಯೊಬ್ಬರು, ಈತ ಆನೆಗಳ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ತನ್ನ ಫೈರ್‌ಫೈಟರ್ (ಅಗ್ನಿಶಾಮಕ ಇಲಾಖೆಯ ಕೆಲಸ) ಕೆಲಸವನ್ನು ಬಿಟ್ಟು ಬಂದಿದ್ದಾನೆ ಎಂದಿದ್ದಾರೆ.