ಶಿವಮೊಗ್ಗ (ಜು.14): ಆಲ್ದೂರು ಸಮೀಪದ ಹುಲ್ಲೆಮನೆಯ ಕಾಫಿ ತೋಟದ ಬಳಿ ಸುಮಾರು 8 ವರ್ಷ ವಯಸ್ಸಿನ ಗಂಡಾನೆ ಮೃತಪಟ್ಟಿರುವುದು ಶನಿವಾರ ಬೆಳಕಿಗೆ ಬಂದಿದೆ.

ಚಂದ್ರೇಗೌಡ ಎಂಬವರ ಕಾಫಿ ತೋಟದ ಹತ್ತಿರ ಆನೆ ಮೃತಪಟ್ಟಿದೆ. ಶುಕ್ರವಾರ ಇಲ್ಲವೇ ಶನಿವಾರ ಆನೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕಾಫಿ ತೋಟಕ್ಕೆ ಅಳವಡಿಸಿರುವ ವಿದ್ಯುತ್‌ ಬೇಲಿಯ ಸ್ಪರ್ಶದಿಂದ ಆನೆ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

20 ಅಡಿ ಮೇಲಿಂದ ಬಿದ್ದು ಆನೆ ಸಾವು