ಮೈಸೂರಿನಲ್ಲಿ ಎಲ್-ಎತಾಪ್ ಸೈಕ್ಲಿಂಗ್ ಕ್ರೀಡಾಕೂಟ ನಡೆಯಲಿದ್ದು, 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮೈಸೂರು: ಎಲ್- ಎತಾಪ್ ಮೈಸೂರು- ಸೈಕ್ಲಿಂಗ್ ಕ್ರೀಡಾಕೂಟವನ್ನು ಅ.4ರಹ ಬೆಳಗ್ಗೆ 6 ರಿಂದ 10.30 ಗಂಟೆಯವರೆಗೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದಿಂದ ಆಯೋಜಿಸಿದ್ದು, ಈ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಸುಮಾರು 1500 ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಸೈಕ್ಲಿಂಗ್ ಕ್ರೀಡಾಕೂಟದ ಮಾರ್ಗ ಈ ರೀತಿಯಾಗಿದೆ

ಈ ಸೈಕ್ಲಿಂಗ್ ಸ್ಪರ್ಧೆಯು ಮೈಸೂರು ಅರಮನೆ, ದೇವರಾಜ ಅರಸ್ ರಸ್ತೆ, ರಾಮಸ್ವಾಮಿ ವೃತ್ತ, 100 ಅಡಿ ರಸ್ತೆ, ಗನ್ ಹೌಸ್ ವೃತ್ತ, ನಂಜನಗೂಡು ರಸ್ತೆ, ರಾಜಹಂಸ ಜಂಕ್ಷನ್, ಲಾರಿ ಟರ್ಮಿನಲ್, ಚಾಮಪ್ಪಾಜಿ ರಸ್ತೆ, ಸಿಎಆರ್ ಜಂಕ್ಷನ್, ತಾವರಕಟ್ಟೆ, ಚಾಮುಂಡಿಬೆಟ್ಟ ಮೇಲೆ ತಲುಪಿ, ಉತ್ತನಹಳ್ಳಿ ಮೂಲಕ ಹೊಸಹುಂಡಿಯಿಂದ ರಿಂಗ್ ರಸ್ತೆ ಮೂಲಕ ಟಿ. ನರಸೀಪುರ ಜಿಂಕ್ಷನ್ ತಲುಪಿ, ಅಲ್ಲಿಂದ ಟಿ. ನರಸೀಪುರ, ಸುತ್ತೂರು, ವರುಣ ಮತ್ತು ಹೊಸಹಳ್ಳಿ ಕಡೆಗೆ ಸಾಗಲಿದೆ. ನಂತರ ಡಾಕ್ಟರ್ಸ್ ಕಮ್ಯುನಿಟಿ ಹಾಲ್, ಲಲಿತ್ ಮಹಲ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಎಂಆರ್ ಸಿ ಸಿಗ್ನಲ್ ಮತ್ತು ಕಾರಂಜಿ ಕೆರೆ ಬಂಡ್ ರಸ್ತೆ ಮಾರ್ಗವಾಗಿ ಹಿಂದಿರುಗಿ ಎಂ.ಕೆ. ಇರಾನಿ ರಸ್ತೆಯಲ್ಲಿ ರೇಸ್ ಅಂತ್ಯಗೊಳ್ಳಲಿದೆ.

ಹೀಗಾಗಿ, ಸಾರ್ವಜನಿಕರು ರೇಸ್ ಸಮಯದಲ್ಲಿ ಪರ್ಯಾಯ ರಸ್ತೆಗಳನ್ನು ಬಳಸು ಹಾಗೂ ಸಂಚಾರ ಪೊಲೀಸರು ನೀಡುವ ಸೂಚನೆ ಮತ್ತು ಮಾರ್ಗ ಬದಲಾವಣೆ ಪಾಲನೆ ಮಾಡುವಂತೆ ನಗರ ಪೊಲೀಸರು ಕೋರಿದ್ದಾರೆ.

ಇಂದು ಸಿಎಂ ಡಿಕೆಶಿ ಮೈಸೂರು ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ.3 ರಂದು ಬೆಳಗ್ಗೆ 11.30ಕ್ಕೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸುವರು. ನಂತರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ಪ್ರಜಾಸೇವಾ ಆಂದೋಲನ ಕಾರ್ಯಕ್ರದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.35ಕ್ಕೆ ಜಿಪಂ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ- 2026 ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವರು. ಸಂಜೆ 5.30ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.

ಇದನ್ನೂ ಓದಿ: ಈ ವರ್ಷದ ಮೈಸೂರು ದಸರಾ 2026ಕ್ಕೆ ಕೌಂಟ್‌ಡೌನ್ ಶುರು, ಈ ಬಾರಿ ಅಡಗಿರುವ ಅಚ್ಚರಿಗಳೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ 9ನೇ ಕ್ಲಾಸ್‌ ಅಜಯ್‌ಗೆ ಬಹುಮಾನ