ಶಾಲಾ ಮಕ್ಕಳಿಗೆ ಬಿಸಿ ಊಟದ ಜೊತೆ ವಾರದಲ್ಲಿ 6 ದಿನ ಮೊಟ್ಟೆ: ಸಚಿವ ಮಹದೇವಪ್ಪ

ಪ್ರಗತಿಪರ ಕೈಗಾರಿಕಾ ಉದ್ಯಮಿ ಅಜಿಮ್ ಪ್ರೇಮ್ ಜಿ ಅವರ ಸಿ.ಆರ್.ಎಫ್ ಫೌಂಡೇಶನ್ ವತಿಯಿಂದ 1591 ಕೋಟಿ ಹಣ ನೀಡಿದ್ದು, ಇದರಿಂದ 1 ರಿಂದ 10 ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸೂಚಿಸಿದ್ದಾರೆ.

Eggs 6 days a week with hot meals for school children Says Minister HC Mahadevappa gvd

ಮೈಸೂರು (ಸೆ.26): ಪ್ರಸ್ತುತ ಶಾಲೆಯಲ್ಲಿ ವಾರಕ್ಕೆ 2 ದಿನ ಮಾತ್ರ ಮೊಟ್ಟೆ ನೀಡುತ್ತಾ ಬಂದಿದ್ದರು. ಆದರೆ ಪ್ರಗತಿಪರ ಕೈಗಾರಿಕಾ ಉದ್ಯಮಿ ಅಜಿಮ್ ಪ್ರೇಮ್ ಜಿ ಅವರ ಸಿ.ಆರ್.ಎಫ್ ಫೌಂಡೇಶನ್ ವತಿಯಿಂದ 1591 ಕೋಟಿ ಹಣ ನೀಡಿದ್ದು, ಇದರಿಂದ 1 ರಿಂದ 10 ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸೂಚಿಸಿದ್ದಾರೆ.

ಮಹಾರಾಜ ಕಾಲೇನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಪಂ ವತಿಯಿಂದ ರಾಜ್ಯ ಸರ್ಕಾರದ ಪಿ.ಎಂ. ಪೋಷಣ್ -ಮಧ್ಯಾಹ್ನ ಉಪಾಹಾರ ಯೋಜನೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯೇಂದ್ರ ಅವರೇ ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಿಸಿ: ಸಚಿವ ಎಂ.ಬಿ.ಪಾಟೀಲ್

ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಮುಖ್ಯ, ಆದ್ದರಿಂದ ಮಕ್ಕಳಿಗೆ ಬಿಸಿ ಊಟದ ಜೊತೆ ಮೊಟ್ಟೆ ನೀಡಲಾಗುತ್ತಿದೆ. ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡುತ್ತಾ ಬಂದಿದ್ದೇವೆ. ಸಿಆರ್ಎಫ್ ಫೌಂಡೇಶನ್ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹೇಳಿದಂತೆ, ರಾಜ್ಯದಲ್ಲಿ ಶೇ. 88ರಷ್ಟು ಮಕ್ಕಳು ಮೊಟ್ಟೆ ಪಡೆದರೆ ಇನ್ನು ಶೇ. 8ರಷ್ಟು ಮಕ್ಕಳು ಬಾಳೆಹಣ್ಣು ಹಾಗೂ ಉಳಿದ ಶೇ. 4 ಮಕ್ಕಳು ಕಡಲೆಹಿಟ್ಟಿನ ಚಕ್ಕುಲಿ ಪಡೆಯುತ್ತಿದ್ದಾರೆ ಎಂದು ಅವರು ನೀಡಿದರು.

ಎಲ್ಲಾ ಮಕ್ಕಳು ಪ್ರತಿಯೊಂದು ಸೌಲಭ್ಯ ಪಡೆದು ಸದೃಢವಾಗಬೇಕು, ಉತ್ತಮ ರೀತಿಯ ಆಹಾರ ಸೇವಿಸಿ ಆರೋಗ್ಯಕರ ಜೀವನ ಶೈಲಿಯಲ್ಲಿ ಬೆಳೆಯಬೇಕು ಎಂದು ಸರ್ಕಾರ ಸಮವಸ್ತ್ರ, ಪಠ್ಯಪುಸ್ತಕ, ಬಿಸಿ ಹಾಲಿನ ವಿತರಣೆ, ಜೊತೆಗೆ ಇತ್ತೀಚಿಗೆ ರಾಗಿ ಮಾಲ್ಟ್ ಕೂಡ ನೀಡುತ್ತಿದೆ. ಇಷ್ಟೆಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ನೀವು ಚೆನ್ನಾಗಿ ಓದಬೇಕು.  ಒಳ್ಳೆಯ ಸಂವಿಧಾನ ಕಟ್ಟುವಂತ ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಅವರು ಸಲಹೆ ನೀಡಿದರು.ಮಕ್ಕಳು ಶಾಲೆಯ ಹಂತದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಬೇಕು ಜೊತೆಗೆ ಅರ್ಥೈಸಿ, ಬೇರೆಯವರಿಗೆ ಹೇಳಬೇಕು. 

ಸಂವಿಧಾನದ ಪೀಠಿಕೆಯನ್ನು ನೋಡಿಕೊಳ್ಳದೆ ಪ್ರತಿಯೊಬ್ಬರು ಹೇಳಲು ಕಲಿಯಬೇಕು ಭಾರತೀಯರಾದ ನಾವು ಯಾವುದೇ ಜಾತಿ ಧರ್ಮ ಬೇಧಕ್ಕೆ ತಲೆಕೊಡದೆ ಅಭಿವೃದ್ಧಿ ಕಡೆಗೆ ನಮ್ಮ ನಡೆ ಇರಬೇಕು. ನಾವು ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು. ನಮಗೆ ಧಾರ್ಮಿಕ ಸ್ವಾತಂತ್ರ್ಯವಿದೆ, ಮಾತನಾಡುವ ಸ್ವಾತಂತ್ರ್ಯವಿದೆ. 

ನೈಸರ್ಗಿಕ ಕೃಷಿಯ ಕತೆ ಹೊಂದಿರುವ ಗೋಪಿಲೋಲ: ಕಂಟೈನರ್ ಸಿನಿಮಾ ಟ್ರೇಲರ್‌ ಬಿಡುಗಡೆ

ಆಚಾರ ವಿಚಾರಗಳ ಬಗ್ಗೆ ತಿಳಿಯಲು ಮುಕ್ತವಾದ ಅವಕಾಶವಿದೆ. ನಾವೆಲ್ಲರೂ ಸಹೋದರತ್ವದಿಂದ ಇರಬೇಕು ಅದನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಡಿಡಿಪಿಐ ಎಸ್.ಟಿ. ಜವರೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios