ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್‌ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಆನೇಕಲ್/ ಬೆಂಗಳೂರು (ಅ.25): ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್‌ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಅದೃಷ್ಟವಶಾತ್‌ ಲಾರಿಯಲ್ಲಿದ್ದ ಆನೆ ಪ್ರಾಣಾಪಾಯದಿಂದ ಪಾರಾಗಿದೆ. ನಂತರ, ಕ್ರೇನ್‌ ತರಿಸಿ ಆನೆಯನ್ನು ರಕ್ಷಣೆ ಮಾಡಲಾಗಿದೆ.

ಬೆಂಗಳೂರಿನ ಹೊರವಲಯ ಬನ್ನೇರುಘಟ್ಟ ಬಳಿ ದಸರಾ ಉತ್ಸವಕ್ಕೆ ತರಲಾಗಿದ್ದ ತಮಿಳುನಾಡಿನ ತಿರುಚ್ಚಿಯ ಆನೆಯನ್ನು ವಾಪಸ್‌ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಲಾರಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಚಾಲಕ ಮೂತ್ರ ವಿಸರ್ಜನೆಗೆ ತೆರಳಿದಾಗ ಲಾರಿಯನ್ನು ಹ್ಯಾಂಡ್‌ ಬ್ರೇಕ್‌ ಮಾಡದ ಹಿನ್ನೆಲೆಯಲ್ಲಿ ಲಾರಿ ಮುಂದಕ್ಕೆ ಚಲಿಸಿ ಮುಂಭಾಗದಲ್ಲಿದ್ದ ಚಾಲಕನ ಮೇಲೆ ಹರಿದಿದೆ. ಇದರಿಂದ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಇಳಿದಿದ್ದ ಲಾರಿಯಲ್ಲಿ ಆನೆ ನಿಂತುಕೊಂಡಿದ್ದು, ಅದನ್ನು ಕ್ರೇನ್‌ ಮೂಲಕ ಸಂರಕ್ಷಣೆ ಮಾಡಲಾಗಿದೆ. 

ಹುಲಿ ಉಗುರು ಪೆಂಡೆಂಟ್‌: ದರ್ಶನ್‌ ತೂಗುದೀಪ್‌ ಹಾಗೂ ವಿನಯ್‌ ಗುರೂಜಿ ವಿರುದ್ಧ ದೂರು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶಾನಮಾವು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ತಮಿಳುನಾಡಿನ ಪುದುಕ್ಕೊಟ್ಟೈ ಮೂಲದ ಆರೋಗ್ಯ ಸ್ವಾಮಿ ಮೃತಪಟ್ಟ ದುರ್ದೈವಿ ಆಗಿದ್ದಾನೆ. ಲಾರಿ ಮುಂದೆ ಮೂತ್ರ ವಿಸರ್ಜನೆಗೆ ಮಾಡುವಾಗ ಡ್ರೈವರ್ ಧಾರಣ ಸಾವನ್ನಪ್ಪಿದ್ದಾರೆ. ರಸ್ತೆಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವಾಗ ಘಟನೆ ನಡೆದಿದೆ. ಲಾರಿಯ ಹ್ಯಾಂಡ್‌ ಬ್ರೇಕ್‌ ಮಾಡದ ಹಿನ್ನೆಲೆಯಲ್ಲಿ ಲಾರಿಯಲ್ಲಿದ್ದ ಆನೆ ಸ್ವಲ್ಪ ಅಲುಗಾಡಿದ್ದರಿಂದ ಲಾರಿ ಸೀದಾ ಮುಂದಕ್ಕೆ ಹೋಗಿ ಚಾಲಕನ ಮೇಲೆ ಹರಿದಿದೆ.

ತಿರುಚ್ಚಿ ಜಿಲ್ಲೆಯ ಶ್ರೀ ರಂಗಂ ಪ್ರದೇಶಕ್ಕೆ ಸೇರಿದ ಭಾಸ್ಕರನ್ ಬಳಿ 3 ಸಾಕಾನೆಗಳು ಇದ್ದವು. ಇದರಲ್ಲಿ ಕರ್ನಾಟಕ ರಾಜ್ಯದ ಬನ್ನೇರುಘಟ್ಟ ಪ್ರದೇಶದ ಪೆರುಮಾಳ್ ದೇವಸ್ಥಾನದಲ್ಲಿ ದಸರಾ ಹಬ್ಬವನ್ನು ಆಚರಿಸಲು ರಾಣಿ ಆನೆಯನ್ನು ಕರೆದೊಯ್ಯಲಾಗಿತ್ತು. 6 ಜನರು ರಾತ್ರಿ ಈಚರ್ ವಾಹನದಲ್ಲಿ ತಿರುಚ್ಚಿಗೆ ತೆರಳಿದರು. ಆದರೆ, ಆನೆಯಿರುವ ಸ್ಥಳಕ್ಕೆ ತೆರಳುವ ಮುನ್ನವೇ ದುರಂತ ಸಂಭವಿಸಿದೆ. ಆನೆಯ ರಕ್ಷಣಾ ಕಾರ್ಯದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತ ಮಾಡಲಾಗಿತ್ತು.

ವರ್ತೂರು ಸಂತೋಷ್‌ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ಮೇಲೆ ಹಲವು ಅನುಮಾನ!

ಎರಡು ಕ್ರೇನ್‌ಗಳ ಸಹಾಯದಿಂದ ಆನೆ ಯನ್ನ ಸುರಕ್ಷಿತವಾಗಿ ಹೊರತೆಗೆಯಲಾಯಿತು. ನಂತರ ಲಾರಿ ಚಾಲಕ ಆರೋಗ್ಯಸ್ವಾಮಿ ಅವರ ಮೃತದೇಹವನ್ನು ಹೂಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದರಿಂದ ಮಧ್ಯರಾತ್ರಿ ಸುಮಾರು 1 ಗಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೂಸೂರು, ಅಡ್ಕೋ ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.