Asianet Suvarna News Asianet Suvarna News

ವರ್ತೂರು ಸಂತೋಷ್‌ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ಮೇಲೆ ಹಲವು ಅನುಮಾನ!

ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣಕ್ಕಾಗಿ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್‌ ಬಂಧನದ ಬಗ್ಗೆ ಅರಣ್ಯ ಅಧಿಕಾರಿಗಳ ವಿರುದ್ಧ ಹಲವು ಅನುಮಾನ ಕಾಡಿದೆ.

Varthur Santhosh tiger claw pendant case people questioning Forest department gow
Author
First Published Oct 25, 2023, 9:48 AM IST

ಬೆಂಗಳೂರು (ಅ.25): ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್‌ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಇದರ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ನಡೆ ಹಲವು ಅನುಮಾನ ಹುಟ್ಟು ಹಾಕಿದೆ. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸಂತೋಷ್ ಅವರನ್ನು ಅರಣ್ಯ ಅಧಿಕಾರಿಗಳು ಬಂಧನ ಮಾಡಿದ್ದರು. ಮಾತ್ರವಲ್ಲ ಯಾವುದೇ ನೊಟೀಸ್‌ ಕೂಡ ನೀಡದೆ ಬಂಧಿಸಲಾಗಿದೆ ಎನ್ನಲಾಗಿದೆ.

ವರ್ತೂರ್‌ ಸಂತೋಷ್‌ ವಿಲಾಸಿ ಜೀವನ, ಅರಮಾಗಿ ಓಡಾಡ್ಕೊಂಡು ಇದ್ದ: ವಕೀಲರ ಪ್ರತಿಕ್ರಿಯೆ

ಸಂತೋಷ್‌ ಬಂಧನದ ಬಳಿಕ  ಸಾಮಾಜಿಕ‌ ಜಾಲತಾಣದಲ್ಲಿ ಸಾಕಷ್ಟು ಜನರು ಹುಲಿ ಉಗುರು ಧರಿಸಿರುವ ಬಗ್ಗೆ ವಿಡಿಯೋಗಳು ವೈರಲ್ ಆಗಿದ್ದವು. ಇದಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಹೊರತಾಗಿಲ್ಲ. ಆದರೆ ಇವರಿಗೆಲ್ಲ ಅರಣ್ಯ ಅಧಿಕಾರಿಗಳು ಕನಿಷ್ಠ ವಿಚಾರಣೆ ನೊಟೀಸ್‌ ಕೂಡ ಕೊಟ್ಟಿಲ್ಲ. 

ಹಾಗಾದ್ರೆ ಸಂತೋಷ್ ಮಾತ್ರ ಬಂಧನ‌ ಮಾಡಿದ್ದು ಯಾಕೆ? ಸಂತೋಷ್ ಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯವಾ? ಸೆಲೆಬ್ರೆಟಿಗಳು ಅನ್ನೋ ಕಾರಣಕ್ಕೆ ಅರಣ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರಾ? ಕೆಲವು ಸೆಲಬ್ರೆಟಿಗಳು ಇದು ಹುಲಿ ಉಗುರೇ ಎಂದು ಹೇಳಿಕೆ ನೀಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಆದರೂ ಕನಿಷ್ಟ ವಿಚಾರಣೆಗೆ ಸಹ ಅರಣ್ಯ ಅಧಿಕಾರಿಗಳು ನೋಟಿಸ್ ನೀಡಿಲ್ಲ. 

3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್‌ ವರ್ತೂರ್‌ ಸಂತೋಷ್‌ ತಪ್ಪೊಪ್ಪಿಗೆ

ಇಂದು ಸಂತೋಷ್ ಜಾಮೀನು ಅರ್ಜಿ ವಿಚಾರಣೆ:
ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಬಂಧನ‌ ಪ್ರಕರಣದ ಜಾಮೀನು‌ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಎರಡನೇ ಎಸಿಜೆಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸದ್ಯ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸಂತೋಷ್ ಅವರನ್ನು ಇರಿಸಲಾಗಿದೆ.

ಹುಲಿ ಉಗುರು ಧರಿಸಿರುವ ಸ್ಟಾರ್ ನಟರು ರಾಜಕೀಯ ವ್ಯಕ್ತಿಗಳ ವಿರುದ್ದ ಕನ್ನಡ ಜನಪರ ವೇದಿಕೆ ಇಂದು ದೂರು ನೀಡಲಿದೆ.   ಮಲ್ಲೇಶ್ವರಂ ನ ಅರಣ್ಯ ಇಲಾಖೆ ಕಚೇರಿಯಲ್ಲಿ ದೂರು ನೀಡಲಿರುವ ಶಿವಕುಮಾರ್. ಚಿನ್ನದ ಚೈನಿಗೆ ಹುಲಿ ಉಗುರು ಧರಿಸಿರುವ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್‌ ವೆಂಕಟೇಶ್  ಹಾಗೂ ಹುಲಿ ಚರ್ಮದ ಮೇಲೆ ಕುಳಿತಿರುವ ವಿನಯ್ ಗುರೂಜಿ ವಿರುದ್ದ ದೂರು ನೀಡಿ. ಈ ನಾಲ್ವರನ್ನು ಕರೆಸಿ ತನಿಖೆ ನಡೆಸುವುವಂತೆ ಆಗ್ರಹಿಸಲಿರುವ ಕನ್ನಡ ಜನಪರ ವೇದಿಕೆ.

Follow Us:
Download App:
  • android
  • ios