ಹುಲಿ ಉಗುರು ಪೆಂಡೆಂಟ್‌: ದರ್ಶನ್‌ ತೂಗುದೀಪ್‌ ಹಾಗೂ ವಿನಯ್‌ ಗುರೂಜಿ ವಿರುದ್ಧ ದೂರು

ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ್‌ ಹುಲಿ ಉಗುರು ಹಾಗೂ ಅವಧೂತ ವಿನಯ್‌ ಗುರೂಜಿ ಅವರು ಹುಲಿ ಚರ್ಮದ ಹೊಂದಿದ್ದಾರೆಂದು ದೂರು ದಾಖಲಾಗಿದೆ.

Karnataka Tiger claw pendant Complaint against sandalwood Darshan Thoogudeep and Vinay Guruji sat

ಬೆಂಗಳೂರು (ಅ.25): ಕನ್ನಡ ಚಲನಚಿತ್ರ ನಟ ದರ್ಶನ್ ಹುಲಿಯ ಉಗುರಿನ ಪೆಂಡೆಂಟ್‌ ಧರಿಸಿದ್ದಾರೆ. ಅವದೂತ ವಿನಯ್ ಗುರೂಜೀ ಅವರು ಹುಲಿ ಚರ್ಮವನ್ನು ಹೊಂದಿದ್ದು ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯ ಸರ್ವಸಂಘಟನೆಗಳ ಒಕ್ಕೂಟದ ವತಿಯಿಂದ ದೂರು ನೀಡಲಾಗಿದೆ.

ಕನ್ನಡ ಚಲನಚಿತ್ರ ನಟ ತೂಗೂದೀಪ್‌ರವರ ಕತ್ತಿನಲ್ಲಿ ಬಂಗಾರದ ಚೈನಿನಲ್ಲಿ ಒಂದು ಹುಲಿಯ ಹಾಕಿಕೊಂಡಿರುವ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ವನ್ಯ ಸಂರಕ್ಷಣಾ ಕಾಯ್ದೆ-1972 ಕಾಯ್ದೆಯಡಿಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಅವರ ವಿರುದ್ಧ ಸೂಕ್ತ ರೀತಿಯ ಕ್ರಮ ಜರುಗಿಸಬೇಕು. ಅವದೂತ ವಿನಯ್‌ಗುರೂಜಿಗಳು ಹುಲಿಯ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದ್ದು, ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ವನ್ಯ ಸಂರಕ್ಷಣಾ ಕಾಯ್ದೆ-1972 ಕಾಯ್ದೆಯಡಿಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಅವರ ವಿರುದ್ಧ ಸೂಕ್ತ ರೀತಿಯ ಕ್ರಮ ಜರುಗಿಸಬೇಕು ಎಂದು ದೂರು ಕೊಡಲಾಗಿದೆ.

ವರ್ತೂರು ಸಂತೋಷ್‌ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ಮೇಲೆ ಹಲವು ಅನುಮಾನ!

Karnataka Tiger claw pendant Complaint against sandalwood Darshan Thoogudeep and Vinay Guruji sat

ಹುಲಿ ಚರ್ಮ ವಾಪಸ್‌ ಕೊಟ್ಟಿರುವ ವಿನಯ್‌ ಗುರೂಜಿ: ಇನ್ನು ಅವಧೂತ ವಿನಯ್‌ ಗುರೂಜಿ ಅವರು ತಮ್ಮ ಬಳಿಯಿದ್ದ ಹುಲಿಯ ಚರ್ಮವನ್ನು ಅರಣ್ಯ ಇಲಾಖೆಗೆ ವಾಪಸ್‌ ಕೊಟ್ಟಿದ್ದಾರೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಅವರು ಹೊಂದಿದ್ದ ಹುಲಿ ಚರ್ಮಕ್ಕೆ ಪರವಾನಗಿಯನ್ನು ಪಡೆದಿದ್ದರು. ಆದರೆ, ಪರವಾನಗಿ ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅದನ್ನು ವಾಪಸ್‌ ಕೊಡಲಾಗಿದೆ. ಹೀಗಾಗಿ, ಹುಲಿ ಚರ್ಮವನ್ನು ಹೊಂದಿದ್ದರೂ ಅಪರಾಧವನ್ನು ಎಸಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಹುಲಿ ಉಗುರು ಪ್ರಕರಣ; ತುಮಕೂರಿನ ಮತ್ತೊಬ್ಬ ಸ್ವಯಂಘೋಷಿತ ಗುರೂಜಿಗೆ ಸಂಕಷ್ಟ!

ನಟ ಜಗ್ಗೇಶ್‌ ವಿರುದ್ಧ ದೂರು ನೀಡಲು ಕಾಂಗ್ರೆಸ್‌ ಯತ್ನ: ಇನ್ನು ನಟ ಜಗ್ಗೇಶ್‌ ಅವರಿಗೆ ಅವರ ತಾಯಿಯೇ ಹುಲಿ ಉಗುರು ನೀಡಿದ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ 20ನೇ ವರ್ಷದ ಜನ್ಮದಿನಾಚರಣೆಗೆ ಅವರ ತಾಯಿ ತನ್ನ ಮಗನ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳಬಾರದು ಎಂದು ಪೂಜೆಯನ್ನು ಮಾಡಿಸಿ ಹುಲಿ ಉಗುರಿನ ಪೆಂಡೆಂಟ್‌ ಮಾಡಿಸಿಕೊಟ್ಟಿದ್ದರು ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈಗ ಬಿಗ್‌ಬಾಸ್‌ ಮನೆಯಲ್ಲಿದ್ದ ವರ್ತೂರು ಸಂತೋಷ್‌ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದರಿಂದ ಅರಣ್ಯ ಇಲಾಖೆಯಿಂದ ಅವರನ್ನು ಬಂಧಿಸಲಾಗಿತ್ತು. ಹೀಗಾಗಿ, ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್‌ ವಿರುದ್ಧ ಕಾಂಗ್ರೆಸ್‌ ಮುಖಂಡ ಪಿ.ಆರ್. ರಮೇಶ್‌ ದೂರು ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ, ಹಲವು ಕಾಂಗ್ರೆಸ್‌ ನಾಯಕರುರಾಜ್ಯಸಭಾ ಸದಸ್ಯರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. 

Latest Videos
Follow Us:
Download App:
  • android
  • ios