ಕಲಬುರಗಿ ಜಿಲ್ಲೆಯ 7 ಕೇಂದ್ರಗಳಲ್ಲಿ 14 ಡಯಾಲಿಸಿಸ್‌ ಯಂತ್ರಗಳಿವೆ. ಈ ಪೈಕಿ 6 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್ ತಂತ್ರಜ್ಞರು, ದಾದಿಯರು, ಸಹಾಯಕರು ಸೇರಿದಂತೆ 35ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಸೇವೆ ಸ್ಥಗಿತಗೊಂಡಿದೆ.

ಕಲಬುರಗಿ(ಡಿ.04): ಬಾಕಿ ವೇತನ ಪಾವತಿಗೆ ಆಗ್ರಹಿಸಿ ನೌಕರರು ಪ್ರತಿಭಟನೆಗೆ ಮುಂದಾಗಿರುವುದರಿಂದ ಕಲಬುರಗಿಯಲ್ಲಿ ಜಿಮ್ಸ್‌ ಸೇರಿದಂತೆ 7 ಕಡೆಗಳಲ್ಲಿರುವ ಡಯಾಲಿಸಿಸ್‌ ಸೇವೆಯಲ್ಲಿ ಭಾರಿ ಅಡಚಣೆ ಉಂಟಾಗಿದೆ. ಜಿಲ್ಲೆಯ 7 ಕೇಂದ್ರಗಳಲ್ಲಿ 14 ಡಯಾಲಿಸಿಸ್‌ ಯಂತ್ರಗಳಿವೆ. ಈ ಪೈಕಿ 6 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್ ತಂತ್ರಜ್ಞರು, ದಾದಿಯರು, ಸಹಾಯಕರು ಸೇರಿದಂತೆ 35ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಸೇವೆ ಸ್ಥಗಿತಗೊಂಡಿದೆ.

ಈ ಕೇಂದ್ರಗಳ ಸೇವೆಯ ಗುತ್ತಿಗೆ ಪ. ಬಂಗಾಳ ಮೂಲದ ಸಂಜೀವಿನಿ ಸಂಸ್ಥೆಗೆ ನೀಡಲಾಗಿದೆ. 4 ತಿಂಗಳಿಂದ ಸಂಬಳವಿಲ್ಲ. ಪ್ರತಿ ತಿಂಗಳು ಹಿಂಬಾಕಿ ಕೊಟ್ಟಿಲ್ಲ. ಸೇವಾ ಹಿರಿತನ ಆಧರಿಸಿ ಸಂಬಳ ಹೆಚ್ಚಿಸುತ್ತಿಲ್ಲ. ಪಿಎಪ್‌, ಇಎಸ್‌ಐ ಯಾವುದೇ ಸವಲತ್ತನ್ನು ನೀಡಿಲ್ಲ. 5 ವರ್ಷ ಅನುಭವಿಗಳಿಗೆ ಮಾಸಿಕ 6 ಸಾವಿರ ರು. ನೀಡಬೇಕು. ಆದರೂ ಕೊಟ್ಟಿಲ್ಲ. ಇದರಿಂದ ನಮಗೆಲ್ಲರಿಗೂ ತೊಂದರೆಯಾಗುತ್ತಿದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಡಯಾಲಿಸಿಸ್‌ ಘಟಕದ ಹಿರಿಯರೊಬ್ಬರು ತಿಳಿಸಿದ್ದಾರೆ.

ಕಲಬುರಗಿ: ರಸ್ತೆ ಅಪಘಾತ, ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ಹೊರಟಿದ್ದ ಇಬ್ಬರು ಫ್ರೆಂಡ್ಸ್‌ ಸಾವು

ಈ ಹಿಂದೆ ಗುತ್ತಿಗೆ ನೀಡಲಾಗಿದ್ದ ಬಿಆರ್‌ಎಸ್‌ ಕಂಪನಿ ಸಕಾಲಕ್ಕೆ ವೇತನ ಕೊಡುತ್ತಿತ್ತು. ಈಗಿನ ಸಂಜೀವಿನಿ ಕಂಪನಿ ವೇತನವನ್ನೇ ನೀಡುತ್ತಿಲ್ಲ. ತುಂಬಾ ಕಷ್ಟದಲ್ಲಿದ್ದೇವೆ ಎಂದು ಸಿಬ್ಬಂದಿ ಗೋಳಾಡುತ್ತಿದ್ದಾರೆ. 25 ಸಾವಿರವಿದ್ದ ಸಂಬಳವನ್ನು ಇದೀಗ ರು.13,800 ಕ್ಕೆ ಇಳಿಸಿದ್ದಾರೆ. ಅದೂ ಕೂಡಾ ಸರಿಯಾಗಿ ನೀಡುತ್ತಿಲ್ಲ ಎಂದು ಸಿಬ್ಬಂದಿ ಗೋಳಾಡುತ್ತಿದ್ದಾರೆ.

ಕಲಬುರಗಿಯ ಜಿಮ್ಸ್‌ನಲ್ಲಿ 14 ಡಯಾಲಿಸಿಸ್‌ ಘಟಕಗಳಿದ್ದು ಈ ಪೈಕಿ 7 ಕಾರ್ಯನಿರ್ವಹಿಸುತ್ತಿವೆ. ರೋಗಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಇಲ್ಲಿ ಮಾಡಿಕೊಂಡಿದ್ದೇವೆ ಎಂದು ವೈದ್ಯರು ಹೇಳುತ್ತಿದ್ದಾರಾದರೂ ಸೇವೆಯಲ್ಲಿ ತೊಂದರೆ ಕಾಡುತ್ತಿರೋದು ಕಟುವಾಸ್ತವ ಎಂದು ಸಿಬ್ಬಂದಿ ತಿಳಿಸಿದ್ದಾರೆ.