ಬೆಂಗಳೂರು(ಜೂ.30): ಕೊರೋನಾ ಸಂಬಂಧ ಯಾರೂ ಆತಂಕ ಪಡಬೇಡಿ. ಬೆಂಗಳೂರಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗ್ತಿವೆ. ಮುನ್ನೆಚ್ಚರಿಕೆ ಯಾವ ರೀತಿ ಎಂಬುದನ್ನು ಹೇಳುತ್ತೇನೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಮಧ್ಯಾಹ್ನ ಸುದ್ದಿಗೋಷ್ಟಿ ಮಾಡುತ್ತೇನೆ. ಅಂಕಿ ಅಂಶ ಇಟ್ಕೊಂಡು ಯಾವುದಕ್ಕೆ ಆತಂಕ‌ ಪಡಬೇಕು ಪಡಬಾರದು, ಮುನ್ನೆಚ್ಚರಿಕೆ ಯಾವ ರೀತಿ ಅಂತ ಹೇಳುತ್ತೇನೆ. ನಂಬರ್ ಮಾತ್ರ ಹೆಚ್ಚಾಗ್ತಿದೆ ಅಷ್ಟೇ. ಜುಲೈನಲ್ಲಿ ಸೋಂಕು‌ ಹೆಚ್ಚಾಗುತ್ತೆ ಅಂತ ನಾನು ಮೊದಲೇ ಹೇಳಿದ್ದೆ ಎಂದಿದ್ದಾರೆ.

ಚೀನಿ ಆ್ಯಪ್ ಬ್ಯಾನ್: ಪ್ಲೇ ಸ್ಟೋರ್‌ನಿಂದ ಟಿಕ್‌ ಟಾಕ್ ಡಿಲೀಟ್..!

ಇವತ್ತು ಖಾಸಗಿ ಮೆಡಿಕಲ್ ಕಾಲೇಜುಗಳ‌ ಜೊತೆ ಸಭೆ ಇದೆ. ಮೂರು ತಿಂಗಳ ಹಿಂದೆಯೇ ಈ ಸಭೆಯನ್ನು ನಾನು ಕರೆದಿದ್ದೆ. ಆಗ ಅವರ ಸಹಕಾರ ಕೇಳಿದ್ದೆವು. ಅದರ ಅನುಷ್ಠಾನ‌ ಈಗ ಆಗ್ತಿದೆ. ರಾಜ್ಯದಲ್ಲಿ ಒಟ್ಡು 80 ಲ್ಯಾಬ್‌ಗಳಿವೆ. ಖಾಸಗಿ ಆಸ್ಪತ್ರೆ,‌ ಮೆಡಿಕಲ್ ಕಾಲೇಜುಗಳ ಸಹಕಾರದಿಂದ ಇಷ್ಟು ಲ್ಯಾಬ್ ಗಳಾಗಿವೆ. ಶೇ.‌50 ರಷ್ಡು ಬೆಡ್ ಗಳನ್ನು ಇವರಿಂದ ಮೀಸಲು ಇರಿಸ್ತೇವೆ ಎಂದಿದ್ದಾರೆ.

ಮನೇಲಿ‌ ಕ್ವಾರಂಟೈನ್ನಲ್ಲಿದ್ದೆ. ಕ್ವಾರಂಟೈನ್‌ನಲ್ಲಿದ್ರೂ ನಿತ್ಯ ಕೋವಿಡ್ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸ್ತಿದ್ದೆ. ಭೌತಿಕವಾಗಿ ಇವತ್ತಿಂದ ಹೊರಗೆ ಬಂದಿದ್ದೇನೆ. ನಾನು ಆಕ್ಟಿವ್ ಆಗಿದ್ರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸ ಆಗ್ತಿತ್ತು. ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ಚೀನಾದ 59 ಆ್ಯಪ್ ಬ್ಯಾನ್: ಭಾರತದ ನಿರ್ಧಾರ ಡ್ರ್ಯಾಗನ್‌ ಮೇಲೆಷ್ಟು ಪ್ರಭಾವ ಬೀರುತ್ತೆ?

ಮತ್ತೆ ಎಂದಿನಂತೆ ಬದ್ದತೆ ಯಿಂದ ಕೆಲಸ ಮಾಡುತ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ‌ ಅವರೂ ಗುಣಮುಖರಾಗಿದ್ದಾರೆ, ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗ್ತಾರೆ. ಪತ್ನಿ, ಪುತ್ರಿಗೆ ಕೊರೋನಾ ಪಾಸಿಟಿವ್ ನಿಂದ ನಾನು ಕ್ವಾರಂಟೈನ್‌ನಲ್ಲಿದ್ದೆ. ಎರಡು ಬಾರಿಯ ಟೆಸ್ಟಿಂಗ್ ನಲ್ಲಿ ನನ್ನ ರಿಪೋರ್ಟ್ ನೆಗಟೀವ್ ಬಂತು. ಇವಾಗ ಕ್ವಾರಂಟೇನ್ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ತನ್ನ ಪತ್ನಿ ಹಾಗೂ ಪುತ್ರಿ ಕೂಡ ಡಿಸ್ಚಾರ್ಜ್ ಆಗುತ್ತಾರೆ ಎಂದಿದ್ದಾರೆ.

ಕೊರೋನಾದಿಂದ ಗುಣ ಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿದ್ದಾರೆ. ನಮ್ಮ ಕುಟುಂಬ ಸದಸ್ಯರು ಗುಣ ಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.