ಚೀನಿ ಆ್ಯಪ್ ಬ್ಯಾನ್: ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಡಿಲೀಟ್..!
ಭಾರತದಲ್ಲಿ ಪ್ರಖ್ಯಾತ ಟಿಕ್ ಟಾಪ್ ಆ್ಯಪ್ ನಿಷೇಧಿಸಿ ಒಂದು ದಿನ ಕಳೆಯುವುದರೊಳಗಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ನಾಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.30): ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುತ್ತಿವೆ ಎನ್ನುವ ಕಾರಣ ನೀಡಿ ಚೀನಾದ 59 ಮೊಬೈಲ್ ಅಪ್ಲಿಕೇಷನ್‌ಗಳ ಮೇಲೆ ಭಾರತ ಸರ್ಕಾರ ಸೋಮವಾರ(ಜೂ.29)ವಷ್ಟೇ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಪ್ರಖ್ಯಾತ ಕಿರು ವಿಡಿಯೋ ಅಪ್ಲಿಕೇಷನ್ ಟಿಕ್ ಟಾಕ್ ಆ್ಯಪಲ್ ಆ್ಯಪ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ನಿಂದ ರದ್ದು ಮಾಡಲಾಗಿದೆ.
ಆದರೆ ಸದ್ಯದ ಮಟ್ಟಿಗೆ ಈಗಾಗಲೇ ಯಾರೆಲ್ಲಾ ಟಿಕ್ ಟಾಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೋ ಅವರು ಈ ಆಪ್ ಬಳಸಬಹುದಾಗಿದೆ ಆದರೆ ದೇಶದಲ್ಲಿ ಅಧಿಕೃತವಾಗಿ ಈ ಫ್ಲಾಟ್‌ಫಾರ್ಮ್ ಬ್ಯಾನ್ ಆಗಿದೆ. ಟಿಕ್ ಟಾಕ್ ಭಾರತದಲ್ಲೇ ಸುಮಾರು 12 ಕೋಟಿ ಬಳಕೆದಾರರಿದ್ದು, ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಪ್ಲೇ ಸ್ಟೋರ್‌ನ ಟಾಪ್ 10 ಅಪ್ಲಿಕೇಷನ್‌ಗಳಲ್ಲಿ ಸ್ಥಾನ ಪಡೆದಿತ್ತು. ಇದೀಗ ಟಿಕ್ ಟಾಕ್ ಅಪ್ಲಿಕೇಷನ್ ಹೊಂದಿರುವವರು ತಮ್ಮ ಮೊಬೈಲ್‌ನಲ್ಲಿ ಬಳಸಬಹುದಾಗಿದೆ. ಆದರೆ ಹೊಸದಾಗಿ ಟಿಕ್ ಟಾಕ್ ಡೌನ್‌ಲೋಡ್ ಮಾಡಲು ಇನ್ಮುಂದೆ ಸಾಧ್ಯವಿಲ್ಲ. ಸಾಕಷ್ಟು ಚೀನಿ ಅಪ್ಲಿಕೇಷನ್‌ಗಳು ಬ್ಯಾನ್ ಮಾಡಲಾಗಿದ್ದರೂ, ಈಗಲೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ, ಆದರೆ ಟಿಕ್ ಟಾಕ್ ಮಾತ್ರ ಸಾಧ್ಯವಿಲ್ಲ.
ಚೀನಾದ 59 ಆ್ಯಪ್ ಬ್ಯಾನ್: ಭಾರತದ ನಿರ್ಧಾರ ಡ್ರ್ಯಾಗನ್ ಮೇಲೆಷ್ಟು ಪ್ರಭಾವ ಬೀರುತ್ತೆ?
ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಟಿಕ್ ಟಾಕ್, ನಾವು ಸರ್ಕಾರಕ್ಕೆ ನಮ್ಮ ಆಪ್ಲಿಕೇಷನ್ ಕುರಿತಂತೆ ಸ್ಪಷ್ಟನೆ ನೀಡುತ್ತೇವೆ. ಹಾಗೆಯೇ ಭಾರತ ಸರ್ಕಾರದ ನೀತಿ ನಿಯಮದಂತೆ ಬಳಕೆದಾರರ ಖಾಸಗಿತನಕ್ಕೆ ಹಾಗೂ ದತ್ತಾಂಶ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದೇವೆ. ನಾವು ಭಾರತದಲ್ಲಿರುವ ಯಾವುದೇ ಬಳಕೆದಾರರ ಮಾಹಿತಿಯನ್ನು ಚೀನಿ ಸರ್ಕಾರ ಸೇರಿದಂತೆ ಯಾವ ದೇಶದ ಜತೆಗೂ ಹಂಚಿಕೊಂಡಿಲ್ಲ. ಮುಂದೆಯೂ ಅಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಖಾಸಗಿತನಕ್ಕೆ ಹಾಗೂ ಸಾರ್ವಭೌಮತ್ವಕ್ಕೆ ಮೊದಲ ಆದ್ಯತೆ ನೀಡುತ್ತೇವೆ.
ಟಿಕ್ ಟಾಕ್ ಪ್ರಜಾಸತ್ತಾತ್ಮಕ ರೀತಿಯಂತೆ 14 ಭಾಷೆಗಳಲ್ಲಿ ಕೋಟ್ಯಾಂತರ ಜನರು ಬಳಸುತ್ತಿದ್ದು ಸಾಕಷ್ಟು ಪ್ರತಿಭೆಗಳು ಅನಾವರಣಗೊಂಡಿವೆ ಎಂದು ಭಾರತದ ಟಿಕ್ ಟಾಕ್ ಮುಖ್ಯಸ್ಥ ನಿಕಿಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಟಿಕ್ ಟಾಕ್ ಬ್ಯಾನ್ ಆಗುತ್ತಿರುವುದು ದೇಶದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಪೋರ್ನೋಗ್ರಫಿ ಕಂಟೆಂಟ್ ಹೊಂದಿದೆ ಎನ್ನುವ ಕಾರಣ ನೀಡಿ ಪ್ಲೇ ಸ್ಟೋರ್ ಹಾಗೂ ಅಪ್ಲಿಕೇಷನ್ ಸ್ಟೋರ್‌ನಿಂದ ಬ್ಯಾನ್ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ಬ್ಯಾನ್ ಹಿಂಪಡೆಯಲಾಗಿತ್ತು. ಆದರೆ ಈ ಬಾರಿ ಸರ್ಕಾರ ಹೇಗೆ ಬ್ಯಾನ್ ಕಾರ್ಯರೂಪಕ್ಕೆ ಬರಲಿದೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ದೇಶದ ಸುರಕ್ಷತೆ, ಭದ್ರತೆ, ರಕ್ಷಣೆ, ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ 59 ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಷೇಧಿಸಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.