ನವದೆಹಲಿ(ಜೂ.30): ಲಡಾಖ್‌ ಗಡಿಯಲ್ಲಿ ನಿರ್ಮಾಣವಾಗಿರುವ ಭಾರತ ಹಾಗೂ ಚೀನಾ ನಡುವಿನ ಬಿಕ್ಕಟ್ಟಿನ ಪರಿಸ್ಥಿತಿ ನಡುವೆಯೇ ದೇಶದಲ್ಲಿ ಮೊಬೈಲ್ Appಗಳಿಗೆ ನಿರ್ಬಂಧ ಹೇರಲಾಗಿದೆ. ಇವುಗಳಂತೆಯೇ ಕಾರ್ಯ ನಿರ್ವಹಿಸುವ ಹಾಗೂ ಫೀಚರ್‌ ಇರುವ Appಗಳಿಗೆ ಭರವಿಲ್ಲ, ಹೀಗಾಗಿ ಭಾರತಕ್ಕೆ ಹೆಚ್ಚು ನಷ್ವಾಗುವುದಿಲ್ಲ. ಆದರೆ ಅತ್ತ ಡ್ರ್ಯಾಗನ್‌ಗೆ ಭಾರತದ App ಮಾರ್ಕೆಟ್‌ ದೊಡ್ಡದು ಮಾತ್ರವಲ್ಲ, ಅದು ಮತ್ತಷ್ಟು ಹಿರಿದಾಗುತ್ತಿತ್ತು. ಚೀನಾದ ಉದ್ಯಮಕ್ಕೆ ಬಹುದೊಡ್ಡ ನಷ್ಟವುಂಟು ಮಾಡುವಲ್ಲಿ ಭಾರತದ ಪ್ರಯೋಗಿಸಿರುವ ಅಸ್ತ್ರವಿದು. ಹೀಗಾಗಿ ಭಾರತದಲ್ಲಿನ್ನು ಈ Appಗಳನ್ನು ಡೌನ್‌ಲೋಡ್ ಹಾಗೂ ಬಳಕೆ ಮಾಡಲು ಸಾಧ್ಯವಿಲ್ಲ. ಇನ್ನು ಭಾರತ ಹಾಗೂ ಚೀನಾ ನಡುವೆ ಸದ್ಯಕ್ಕಿರುವ ಪರಿಸ್ಥಿತಿಯನ್ನು ಗಮನಿಸಿದರೆ ಇನ್ನೂ ಕೆಲ ಕ್ಷೇತ್ರಗಳಿಗೆ ಈ ನಿರ್ಬಂಧ ನೀತಿ ಹೇರಲಾಗುವ ಸಾಧ್ಯತೆ ಇದೆ. ಇದು ಚೀನಾ ಹಾಗೂ ಅಲ್ಲಿನ ಉದ್ಯಮಿಗಳಿಗೆ ಭಾರತ ಕೊಟ್ಟಿರುವ ಬಹುದೊಡ್ಡ ಸಂದೇಶವಾಗಿದೆ.

ಯುವಜನರ ಮೇಲೆ ಚೀನಾ ಪ್ರಭಾವ ಬೀರಲು ಬಿಡಲ್ಲಲ ಭಾರತ ಸರ್ಕಾರ

ವಿಶ್ವದಲ್ಲಿ ಇಂಟರ್ನೆಟ್ ಬೆಲೆ ಕಡಿಮೆ ಇರುವ ದೇಶಗಳಲ್ಲಿ ಭಾರತ ಕೂಡಾ ಒಂದು. ಇಲ್ಲಿ 80 ಕೋಟಿಗೂ ಅಧಿಕ ಇಂಟರ್ನೆಟ್ ಬಳಕೆದಾರರಿದ್ದಾರೆ. ಇದವರಲ್ಲಿ ಅರ್ಧಕ್ಕೂ ಅಧಿಕ ಮಂದಿ 25 ಹಾಗೂ ಅದಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ. ಹೀಗಿರುವಾಗ ಚೀನಾದ 59 App ಬ್ಯಾನ್ ಮಾಡಿ ಭಾರತ ಕೇವಲ ನಿರ್ಧಾರ ಪ್ರಕಟಿಸಿದ್ದು ಮಾತ್ರವಲ್ಲ, ಬದಲಾಗಿ ಚೀನಾಗೆ ಒಂದು ಮಹತ್ವದ ಸಂದೇಶ ಕೂಡಾ ನೀಡಿದೆ. TikTok ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ App ಆಗಿದೆ. ಹನ್ನೆರಡು ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದರು. ಸಾಮಾನ್ಯವಾಗಿ ಆಧುನಿಕ ಸೌಲಭ್ಯಗಳಿಂದ ವಂಚಿತರಾದ ಪ್ರದೇಶದ ಯುವಕರಲ್ಲಿ ಇದು ಬಹಳ ಜನಪ್ರಿಯಗೊಂಡಿತ್ತು. ಇನ್ನು TikTok ನಲ್ಲಿದ್ದ ಶೇ. 30ರಷ್ಟು ವಿಡಿಯೋಗಳು ಭಾರತೀಯರದ್ದಾಗಿತ್ತು. ಅಂದರೆ ಭಾರತೀಯ ಯುವಜನರು ಈ Appನಲ್ಲಿ ತಮ್ಮ ಸಮಯ ಕಳೆಯುತ್ತಿದ್ದರು. ಅಂದರೆ ಚೀನಾ ಅವರಿಗಿಷ್ಟವಾಗುವಂತೆ ಕಂಟೆಂಟ್ ಒದಗಿಸುತ್ತಿತ್ತು. ಆದರೀಗ ಭಾರತ ಈ App ಬ್ಯಾನ್ ಮಾಡಿರುವುದರಿಂದ ಚೀನಾದ ಮಾರುಕಟ್ಟೆಗೆ ಬಹುದೊಡ್ಡ ಬಾಗಿಲುಮುಚ್ಚಿದೆ.

ಬ್ಯಾನ್‌ ಮಾಡಿರುವುದರಿಂದ ಚೀನಾಗೆ ಬಹುದೊಡ್ಡ ಏಟು

TikTok ಮಾತ್ರವಲ್ಲದೇ ಭಾರತ ಬ್ಯಾನ್ ಮಾಡಿರುವ Appಗಳ ಪಟ್ಟಿಯಲ್ಲಿರುವ Helo ಹಾಗೂ Likeeಯಂತಹ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಾಗಿದ್ದವು. Bigo Live App ಇಂಗ್ಲೀಷ್ ಚಡನ್ನಾಗಿ ಅರಿತವರಿಗೆ ಬಹಳ ಇಷ್ಟವಾಗಿತ್ತು. ಆದರೀಗ ಈ ಬಳಕೆದಾರರು ಅಚಾನಕ್ಕಾಗಿ ಇದರ ಬಳಕೆ ನಿಲ್ಲಿಸಿದಾಗ, ಏಕಾಏಕಿ ಬರುತ್ತಿದ್ದ ಆದಾಯ ಕೂಡಾ ನಿಲ್ಲುತ್ತದೆ. ಹೆಚ್ಚಿನ Appಗಳು ಹೆಚ್ಚಿನ ಆದಾಯ ಗಳಿಸಲು ನಡುವೆ ಜಾಹೀರಾತುಗಳನ್ನು ನಿಡುತ್ತಿದ್ದು. ಆದರೀಗ ಬಹುದೊಡ್ಡ ಬಳಕೆದಾರರೇ ಬರುತ್ತಿಲ್ಲ ಎಂದರೆ ಜಾಈರಾತುಗಳು ಕೂಡಾ ನಿಲ್ಲುತ್ತವೆ.


ಬ್ಯಾನ್‌ ಮಾಡಿರುವುದರಿಂದ ಭಾರತಕ್ಕೇನೂ ನಷ್ಟವಿಲ್ಲ

ಚೀನಾದ ಈ Appಗಳನ್ನು ಬ್ಯಾನ್‌ ಮಾಡಿರುವುದರಿಂದ ಭಾರತಕ್ಕೇನೂ ನಷ್ಟವಾಗಿಲ್ಲ. ಯಾರೆಲ್ಲಾ ಬ್ಯಾನ್ ಮಾಡಿದ ಪಟ್ಟಿಯಲ್ಲಿರುವ App ಬಳಸುತ್ತಿದ್ದರೋ ಅವರು ಮಾತ್ರ ಅದೇ ರೀತಿಯ ಬೇರೆ App ಗಳನ್ನು ಹುಡುಕಬೇಕಿದೆ. ಇಂತಹ App ಗಳಿಗೆ ಯಾವುದೇ ಕೊರತೆ ಇಲ್ಲ. ಮತ್ತೊಂದೆಡೆ ಭಾರತ ಈ App ಬ್ಯಾನ್ ಮಾಡಿರುವುದರಿಂದ ಭಾರತೀಯ App ಡೆವಲಪರ್‌ಗಳು ಇಂತಹ App ತಯಾರಿಸಲು ಮತ್ತಷ್ಟು ಉತ್ಸಾಹ ತೋರಿಸಲಿದ್ದಾರೆ. ಅನೇಕ ಮಂದಿ ತನ್ನ Appಗಳಲ್ಲಿ Make In India ಎಂಬ ಡ್ಯಾಗ್‌ ಕೂಡಾ ಬಳಸಲಾರಂಭಿಸಿದ್ದಾರೆ.

ಬ್ಯಾನ್ ಹೇಗೆ ಜಾರಿಗೊಳ್ಳುತ್ತದೆ?

ಭಾರತ ಸರ್ಕಾರದ ಪರವಾಗಿ ಒಂದು ನಟಿಫಿಕೇಷನ್ ಜಾರಿಯಾಗಲಿದ್ದು, ಇಂಟರ್ನೆಟ್‌ ಪ್ರೊವೈಡರ್‌ಗಳಿಗೆ ಈ Appಗಳನ್ನು ಬ್ಲಾಕ್ ಮಾಡಲು ಸೂಚಿಸಲಾಗುತ್ತದೆ. App ಬಳಕೆದಾರರಿಗೆ ಅತೀ ಶೀಘ್ರದಲ್ಲೇ ಮೊಬೈಲ್ ಸ್ಕ್ರೀನ್‌ನಲ್ಲಿ ಸರ್ಕಾರದ ನಿರ್ದೇಶನದಂತೆ ಈ App ಬ್ಲಾಕ್‌ ಮಾಡಲಾಗುತ್ತಿದೆ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಆದರೆ ಇಂಟರ್ನೆಟ್‌ ಬಳಕೆ ಇಲ್ಲದೆಯೂ ಕಾರ್ಯ ನಿರ್ವಹಿಸುವ Appಗಳು ಬಳಸಲು ಸಾಧ್ಯವಾಗುತ್ತದೆ. ಆದರೆ ಇನ್ಮುಂದೆ ಇಂಟರ್ನೆಟ್‌ ಇಲ್ಲದೆಯೂ ಬಳಸಲಾಗುವ Appಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.