Asianet Suvarna News Asianet Suvarna News

Ramanagar News : ಡಿ.ಕೆ.ಶಿವಕುಮಾರ್ ಶತಾಯುಷಿ ಅಜ್ಜಿ ನಿಂಗಮ್ಮ ನಿಧನ

  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಅವರ ಅಜ್ಜಿ ನಿಂಗಮ್ಮ ನಿಧನ
  • ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ನಿಧನ
DK Shivakumar  Grandmother Passes Away At The Age Of 106 snr
Author
Bengaluru, First Published Dec 18, 2021, 7:51 AM IST
  • Facebook
  • Twitter
  • Whatsapp

ರಾಮನಗರ (ಡಿ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC DK Shivakumar) ಹಾಗೂ ಸಂಸದ ಡಿ.ಕೆ. ಸುರೇಶ್‌ (DK Suresh) ಅವರ ಅಜ್ಜಿ ನಿಂಗಮ್ಮ(106) ಕನಕಪುರದ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಯಲ್ಲಿ (Hospital) ಶುಕ್ರವಾರ ಮುಂಜಾನೆ ನಿಧನರಾದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿಂಗಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಬೆಳಗಾವಿ ಅಧಿವೇಶನದಲ್ಲಿ (Belagavi Assembly Session)  ಪಾಲ್ಗೊಂಡಿದ್ದ ಡಿ.ಕೆ.ಶಿವಕುಮಾರ್‌ ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕು ಗೊಳಿಸಿ, ಮಧ್ಯಾಹ್ನ 12 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ (Bengaluru) ನಂತರ ಅಲ್ಲಿಂದ ದೊಡ್ಡಾಲ ಹಳ್ಳಿಗೆ ಆಗ​ಮಿ​ಸಿ​ದರು. ದೆಹ​ಲಿ​ಯಿಂದ (Delhi) ಬೆಂಗ​ಳೂ​ರಿಗೆ ಸಂಜೆ 4.30ರ ವೇಳೆಗೆ ಬಂದಿ​ಳಿದ ಸಂಸದ ಡಿ.ಕೆ.​ಸು​ರೇಶ್‌ (DK Suresh) ಅವ​ರು ನೇರ​ವಾಗಿ ದೊಡ್ಡಾ​ಲ​ಹ​ಳ್ಳಿಗೆ ಆಗ​ಮಿ​ಸಿ​ದರು. ಶುಕ್ರವಾರ ಸಂಜೆ ಅಂತಿಮ ಸಂಸ್ಕಾರ ನೆರವೇರಿತು.

ಅಂದುಕೊಂಡಿದ್ದ ದಿನವೇ  ಶತಾಯುಷಿ ನಿಧನ :  ಶನಿವಾರ ತನ್ನ ಕೊನೇ ದಿನ ಎಂದು ಹೇಳಿದ್ದ ಶತಾಯುಷಿಯೊಬ್ಬರು ಅಂದೇ ಕೊನೆಯುಸಿರೆಳೆದ ಅಪರೂಪದ ಘಟನೆ ಸಾಗರದಲ್ಲಿ (sagar) ಬೆಳಕಿಗೆ ಬಂದಿದೆ.

ತಾಲೂಕಿನ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಹೆಬ್ಬೋಡಿ ಗ್ರಾಮದ ಬಿಸಿನಗದ್ದೆ ವಾಸಿಯಾದ ಮಂಗರವಳ್ಳಿ ಚೌಡಪ್ಪ (105) ಮೃತ ಶತಾಯುಷಿ. ಇವರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಮೂಲತಃ ಕೃಷಿಕರಾಗಿದ್ದ ಚೌಡಪ್ಪ ಅವರು, ತಾವು ನಿಧನ ಹೊಂದುವ ಮೊದಲು ಶುಕ್ರವಾರವೇ ತಮ್ಮ ಕುಟುಂಬದವರಿಗೆ ‘ಶನಿವಾರ ನನ್ನ ಕೊನೆಯ ದಿನ’ ಎಂದು ಮೊದಲೇ ತಿಳಿಸಿದ್ದರು.

ಕೊನೇ ಬಾರಿ ತಮ್ಮ ಹೆಣ್ಣು ಮಕ್ಕಳು (Children) ಹಾಗೂ ಬಂಧು ವರ್ಗದರನ್ನು ನೋಡಬೇಕೆಂದು ಕರೆಸಿಕೊಂಡು ಎಲ್ಲರೊಂದಿಗೆ ಮಾತನಾಡಿದ್ದಾರೆ. ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡಿ, ಎಲ್ಲರೊಂದಿಗೆ ಮಾತನಾಡುತ್ತಿದ್ದ ವೇಳೆಯೇ ಕೊನೆಯುಸಿರೆಳಿದಿದ್ದಾರೆ. ಮೊದಲೇ ಸಾವನ್ನು ನಿರ್ಧರಿಸಿದಂತೆ ಶನಿವಾರವೇ ನಿಧನರಾಗಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ

ಜಪಾನ್‌ನಲ್ಲಿದೆ ಶತಾಯುಷಿಗಳ ದ್ವೀಪ : . ಇದು ಒಕಿನಾವಾದ ಮಂದಿ ಪಾಲಿಸುವ ಡಯಟ್‌ನ ಫಲ ಎಂದು ಅಧ್ಯಯನಕಾರರು ಹೇಳುತ್ತಾರೆ. ಇವರ ಆಹಾರಕ್ರಮ ತುಂಬಾ ಸಿಂಪಲ್‌- ತರಕಾರಿ (Vegetable), ಸೋಯ್ ಉತ್ಪನ್ನ ಹಾಗೂ ಸಮುದ್ರೋತ್ಪನ್ನಗಳು ಹೆಚ್ಚು ಸೇವಿಸುತ್ತಾರೆ. ಇಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳೆಂದರೆ ಹಾಗಲಕಾಯಿ, ಸ್ವೀಟ್‌ ಆಲೂಗಡ್ಡೆ, ಹಸಿರು ಸೊಪ್ಪಿನ ತರಕಾರಿಗಳು ಹಾಗೂ ಬೇರಿನಲ್ಲಿ ಆಗುವ ಗಡ್ಡೆಗಳು. ಅಂದರೆ ಆಲೂಗಡ್ಡೆ, ಗೆಣಸಿನ ವೈವಿಧ್ಯಮಯ ಖಾದ್ಯಗಳು. ಹಣ್ಣುಗಳನ್ನು ಸಾಕಷ್ಟು ಸೇವಿಸುತ್ತಾರೆ. ಸಮುದ್ರ (Sea) ಉತ್ಪನ್ನಗಳಾದ ನಾನಾ ಬಗೆಯ ಮೀನುಗಳು, ಸಿಗಡಿ, ಏಡಿ ಮುಂತಾದವು ಇವರ ಬಟ್ಟಲಲ್ಲಿ ಕಾಯಂ. ದಿನಕ್ಕೆರಡು ಬಾರಿ ಟೀ ಕುಡಿಯುತ್ತಾರೆ- ಅದಕ್ಕೆ ಹಾಲು ಸೇರಿಸುವುದಿಲ್ಲ. ಹೆಚ್ಚು ಕೊಬ್ಬಿಲ್ಲದ ಚಿಕನ್‌ ಮುಂತಾದ ಮಾಂಸಾಹಾರ ಮಾಡುತ್ತಾರೆ. ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಬೇಳೆಕಾಳು, ಡೇರಿ ಉತ್ಪನ್ನಗಳನ್ನು ತಿನ್ನುವುದಿಲ್ಲ. ಸಕ್ಕರೆಯನ್ನು ಬಳಸುವುದಿಲ್ಲ. ಕಡಿಮೆ ಕ್ಯಾಲೊರಿ, ಹೆಚ್ಚು ಕಾರ್ಬೊಹೈಡ್ರೇಟ್‌, ಅಧಿಕ ಪ್ರೊಟೀನ್‌, ಸಾಕಷ್ಟು ಪೌಷ್ಟಿಕಾಂಶಗಳೂ ಇವರ ಆಹಾರದಲ್ಲಿ ಇರುತ್ತವೆ.

ಒಕಿನಾವಾದ ಜನ ನೋಡಲು ಕುಳ್ಳರು, ತೆಳ್ಳಗಿರುತ್ತಾರೆ. ಬೊಜ್ಜಿನ ಸಮಸ್ಯೆ ಇವರಲ್ಲಿ ಇಲ್ಲ. ನೂರರ ಮುದುಕ ಮುದುಕಿಯರೂ ಇಲ್ಲಿನ ಬೀದಿಗಳಲ್ಲಿ ಸುಟಿಸುಟಿಯಾಗಿ ನಡೆದುಕೊಂಡು ಹೋಗುತ್ತಾರೆ. 
ಒಕಿನಾವಾದ ಜನತೆ ಇನ್ನೊಂದು ಸೂತ್ರವನ್ನೂ ಆಲಿಸುತ್ತಾರೆ- ಹರಾ ಹಚಿ ಬೂ. ಹಾಗೆಂದರೆ ಹೊಟ್ಟೆ ಸ್ವಲ್ಪ ಖಾಲಿ ಇರಲಿ ಎಂದರ್ಥ. ಹೊಟ್ಟೆ ತುಂಬಿ ಬಿರಿಯುವಷ್ಟು ಇವರು ಎಂದೂ ತಿನ್ನವುದಿಲ್ಲ. ಸ್ವಲ್ಪಾಂಶ ಖಾಲಿ ಬಿಟ್ಟೇ ಇರುತ್ತಾರೆ. ಇದು ಜಠರ ಸಂಕುಚನ ವಿಕಸನಕ್ಕೆ ಹೆಚ್ಚಿನ ಅವಕಾಶ ನೀಡುತ್ತದೆ. ಜೀರ್ಣಾಂಗಕ್ಕೆ ಕೆಲಸ ಹೊರೆಯಾಗುವುದಿಲ್ಲ. 

ಹಾಗಾದರೆ ನೀವು ಒಕಿನಾವಾ ಡಯಟ್ ಪಾಲಿಸಿದರೆ ನೂರು ವರ್ಷ ಬದುಕಬಹುದೇ? ಹಾಗೇನೂ ಹೇಳಲಾಗುವುದಿಲ್ಲ. ಯಾಕೆಂದರೆ ಒಕಿನಾವಾದ ಜೀವನಶೈಲಿ, ವಾತಾವರಣ ಎಲ್ಲವೂ ನಮಗಿಂತ ಬೇರೆ. ನಾವು ನಮ್ಮ ದೇಸಿ ಆಹಾರಪದ್ಧತಿ, ಇಲ್ಲಿನ ವಾತಾವರಣಕ್ಕೆ ಪೂರಕವಾದ ಆಹಾರವನ್ನು ಸೇವಿಸಬೇಕು. ಆಹಾರದ ಜೊತೆಗೆ ಇತರ ಅಂಶಗಳೂ ಈ ದೀರ್ಘಾಯುಷ್ಯದಲ್ಲಿ ಇವೆ. ಉದಾಹರಣೆಗೆ, ದುಡಿಮೆ. ನಾವು ದಿನದ ಹತ್ತಾರು ಗಂಟೆ ಕುಳಿತೇ ಇರುತ್ತೇವೆ. ಒಕಿನಾವನ್ನರು ದಿನದ ಹಗಲು ಹೊತ್ತನ್ನೆಲ್ಲ ಮೈಬಗ್ಗಿಸಿ ದುಡಿಯುತ್ತ ಕಳೆಯುತ್ತಾರೆ.  ಇಲ್ಲಿನವರು ಸ್ವಲ್ಪ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಅದು ಸ್ಥಳೀಯವಾಗಿ ತಯಾರಿಸಿದ, ಹಣ್ಣುಗಳಿಂದ ಮಾಡಿದ ಬ್ರಾಂದಿ. 

ಇವರನ್ನು ಖುಷಿಯಾಗಿ, ನೆಮ್ಮದಿಯಾಗಿಟ್ಟಿರುವ ಇನ್ನೊಂಧು ಅಂಶ ಎಂದರೆ ಇವರ ಸಾಮಾಜಿಕ ಜೀವನ. ನಮ್ಮ ಹಾಗೆ ಇವರು ಮನೆಗಳಲ್ಲೇ ಉಳಿಯುವುದಿಲ್ಲ. ಸಾಮಾಜಿಕವಾಗಿ ತುಂಬಾ ಬೆರೆಯುತ್ತಾರೆ, ಇವರ ಗುಂಪುಜೀವನ ಸಶಕ್ತವಾಗಿದೆ. ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇನ್ನೊಬ್ಬರ ಕಷ್ಟಸುಖಗಳಿಗೆ ಒದಗುತ್ತಾರೆ. ಹೀಗಾಗಿ ಇವರಲ್ಲಿ ಮಾನಸಿಕ ಸಮಸ್ಯೆಗಳಿಲ್ಲ. ಹಾಗಾಗಿ ಅವರ ಜೀವನವೂ ನೆಮ್ಮದಿಯಿಂದ ಕೂಡಿದೆ. 

Follow Us:
Download App:
  • android
  • ios