Asianet Suvarna News Asianet Suvarna News

Rafales In India: 'ನೋ ಪ್ರಾಬ್ಲಮ್ ಭಾರತಕ್ಕೆ ಬೇಕಾದಷ್ಟು ರಫೇಲ್ ಕೊಡ್ತೆವೆ'

* ಭಾರತಕ್ಕೆ ಮತ್ತಷ್ಟುರಫೇಲ್‌ ಯುದ್ಧ ವಿಮಾನಗಳ ಪೂರೈಕೆಗೆ ಸಿದ್ಧ: ಫ್ರಾನ್ಸ್‌

*  ಭಾರತದ ಮೇಕ್‌ ಇನ್‌ ಇಂಡಿಯಾಗೆ ಫ್ರಾನ್ಸ್‌ ಪೂರ್ತಿ ಬೆಂಬಲ

* ಭಾರತದ ಪ್ರವಾಸದಲ್ಲಿರುವ ಸಚಿವೆ ಫ್ಲಾರೆನ್ಸ್ ಪಾರ್ಲೆ ಸ್ಪಷ್ಟನೆ

Open and ready to provide India more Rafales says French defence minister Parly Newdelhi mah
Author
Bengaluru, First Published Dec 18, 2021, 4:17 AM IST

ನವದೆಹಲಿ (ಡಿ. 18) ಭಾರತದ ಸೇನಾ ಬತ್ತಳಿಕೆಗೆ ಈಗಾಗಲೇ 33 ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಿರುವ ಫ್ರಾನ್ಸ್‌, ಭಾರತ ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟುರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಲು ಸಿದ್ಧ ಎಂದು ಹೇಳಿದೆ.

ಭಾರತ ಪ್ರವಾಸದಲ್ಲಿರುವ ಫ್ರಾನ್ಸ್‌ ಭದ್ರತಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಅವರು, ‘ಉಭಯ ದೇಶಗಳು ಒಂದೇ ಯುದ್ಧ ವಿಮಾನ ಬಳಸುತ್ತಿರುವುದು ಉಭಯ ದೇಶಗಳ ಬಾಂಧವ್ಯದ ನಿಜವಾದ ಆಸ್ತಿ ಮತ್ತು ಶಕ್ತಿ’ ಎಂದು ಬಣ್ಣಿಸಿದರು.

ರಫೇಲ್‌ ಯುದ್ಧ ವಿಮಾನಗಳ ಬಗ್ಗೆ ಭಾರತ ತೃಪ್ತವಾಗಿರುವುದು ಖುಷಿ ತಂದಿದೆ. ಜತೆಗೆ ಕೊರೋನಾ ಹೊರತಾಗಿಯೂ, ಭಾರತದ ಬೇಡಿಕೆಯಂತೆ 36 ಯುದ್ಧ ವಿಮಾನಗಳನ್ನು ಸರಿಯಾದ ಸಮಯಕ್ಕೆ ಪೂರೈಸಲಾಗುತ್ತದೆ. ಜತೆಗೆ ಭಾರತದ ಮಹತ್ವಾಕಾಂಕ್ಷಿ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಫ್ರಾನ್ಸ್‌ ಪೂರ್ತಿಯಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಚೀನಾ ಚಟುವಟಿಕೆಗೆ ಫ್ರಾನ್ಸ್‌ ಕಿಡಿ: ಇಂಡೋ ಪೆಸಿಫಿಕ್‌ ಪ್ರಾಂತ್ಯ ಮತ್ತು ದಕ್ಷಿಣ ಚೀನಾ ಸಮುದ್ರದ ಭಾಗಗಳಲ್ಲಿ ಚೀನಾ ಹೆಚ್ಚು ಪರಾಕ್ರಮ ಮೆರೆಯಲು ಯತ್ನಿಸುತ್ತಿದೆ ಎಂದು ಪ್ರಾನ್ಸ್‌ ಭದ್ರತಾ ಸಚಿವೆ ಪಾರ್ಲೆ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಈ ವ್ಯಾಪ್ತಿಯಲ್ಲಿ ಸಮುದ್ರಯಾನಕ್ಕೆ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ನಿಯಮಾವಳಿಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು

ರಫೇಲ್ ಯುದ್ಧ ವಿಮಾನ ವಿಚಾರ, ಕಿಕ್ ಬ್ಯಾಕ್ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನಿರಂತರ ವಾಕ್ ಸಮರಕ್ಕೆ ಕಾರಣವಾಗಿಯೇ ಇತ್ತು. ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಬೃಹತ್ ಭ್ರಷ್ಟಾಚಾರ  ಮಾಡಿದೆ ಎಂದು ಆರೋಪಿಒಸಿಕೊಂಡೇ  ಬಂದಿದ್ದರು.

ಭಾರತಕ್ಕೆ ಬಂದಿಳಿದ 'ರಫೇಲ್' ಲೋಹದ ಹಕ್ಕಿಗಳು: ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ!

ಫ್ರಾನ್ಸ್‌ ನಿರ್ಮಿತ ಇನ್ನೂ ಮೂರು ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ನವೆಂಬರ್ ನಲ್ಲಿ ಭಾರತಕ್ಕೆ ಆಗಮಿಸಿದ್ದವು.. ಫ್ರಾನ್ಸ್‌ನ ಇಸ್ಟೆ್ರಸ್‌ ವಾಯುನೆಲೆಯಿಂದ ಪಯಣ ಆರಂಭಿಸಿದ ಈ ಮೂರು ಯುದ್ಧ ವಿಮಾನಗಳು ಎಲ್ಲೂ ನಿಲುಗಡೆಯಾಗದೆ ದಾಖಲೆಯ 6852 ಕಿ.ಮೀ(3700 ನಾಟಿಕಲ್‌ ಮೈಲ್‌) ಕ್ರಮಿಸಿ ಭಾರತದ ನೆಲದಲ್ಲಿ ಲ್ಯಾಂಡ್‌ ಆಗಿದ್ದವು.

ಇದರೊಂದಿಗೆ ಭಾರತ ಖರೀದಿಸಿದ್ದ 36 ವಿಮಾನಗಳ ಪೈಕಿ 8 ವಿಮಾನಗಳು ಭಾರತದ ಕೈಸೇರಿದಂತೆ ಆಗಿತ್ತು.. ಕೆಲ ತಿಂಗಳ ಹಿಂದಷ್ಟೇ ಮೊದಲ ಹಂತದಲ್ಲಿ 5 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಿದ್ದವು. ಜೊತೆಗೆ ಈ ಪೈಕಿ ಕೆಲ ವಿಮಾನಗಳನ್ನು ಚೀನಾ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. 

ರಫೇಲ್‌ ವಿಶೇಷಗಳು

- ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನಗಳ ಪೈಕಿ ಫ್ರಾನ್ಸ್‌ನ ರಫೇಲ್‌ ಕೂಡ ಒಂದಾಗಿದ್ದು, ಸಾಕಷ್ಟುವಿಧದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

- ಯುರೋಪ್‌ನಲ್ಲಿ ಏರ್‌-ಟು-ಏರ್‌ ಮತ್ತು ಸ್ಕಾಲ್ಪ್‌ ಕ್ರೂಸ್‌ ಮಿಸೈಲ್‌ಗಳನ್ನು ಈ ವಿಮಾನಗಳಿಗೆ ಅಳವಡಿಸಿ ಬಳಕೆ ಮಾಡಲಾಗುತ್ತದೆ.

- ಈಗ ಭಾರತಕ್ಕೆ ಬರುತ್ತಿರುವ 5 ರಫೇಲ್‌ಗಳ ಪೈಕಿ ಮೂರು ಸಿಂಗಲ್‌ ಸೀಟರ್‌ ಮತ್ತು ಎರಡು ಡಬಲ್‌ ಸೀಟರ್‌ ವಿಮಾನಗಳಾಗಿವೆ.

- ಭಾರತಕ್ಕಾಗಿ ಡಸಾಲ್ಟ್‌ ತಯಾರಿಸಿರುವ ರಫೇಲ್‌ನಲ್ಲಿ ಸಾಕಷ್ಟುಬದಲಾವಣೆ ಮಾಡಲಾಗಿದ್ದು, ಇಸ್ರೇಲಿ ಹೆಲ್ಮೆಟ್‌ ಮೌಂಟೆಡ್‌ ಡಿಸ್‌ಪ್ಲೇ, ರಾಡಾರ್‌ ವಾರ್ನಿಂಗ್‌, ಲೋ ಬ್ಯಾಂಡ್‌ ಜಾಮರ್‌, 10 ತಾಸುಗಳ ವಿಮಾನ ಹಾರಾಟ ಡೇಟಾ ಮುದ್ರಣ, ಇನ್‌ಫ್ರಾರೆಡ್‌ ಸರ್ಚಿಂಗ್‌ ಮತ್ತು ಟ್ರಾಕಿಂಗ್‌ ಸಿಸ್ಟಮ್‌ಗಳಿವೆ.

- ಹರ್ಯಾಣದ ಅಂಬಾಲಾದ ಜೊತೆಗೆ ಪಶ್ಚಿಮ ಬಂಗಾಳದ ಹಾಸಿಮಾರಾದಲ್ಲೂ ರಫೇಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ವಿಮಾನಗಳನ್ನು ನಿಲ್ಲಿಸುವ ಶೆಲ್ಟರ್‌, ಹ್ಯಾಂಗರ್‌ ಮತ್ತು ನಿರ್ವಹಣೆ ಸೌಕರ್ಯಗಳಿಗಾಗಿ ಭಾರತೀಯ ವಾಯುಪಡೆ ಸುಮಾರು 400 ಕೋಟಿ ರು. ಖರ್ಚು ಮಾಡಿದೆ.

- ಭಾರತ ಖರೀದಿಸಿರುವ 36 ರಫೇಲ್‌ಗಳ ಪೈಕಿ 30 ವಿಮಾನಗಳು ಫೈಟರ್‌ ಜೆಟ್‌ಗಳಾಗಿದ್ದು, 6 ತರಬೇತಿ ವಿಮಾನಗಳಾಗಿವೆ. ತರಬೇತಿ ವಿಮಾನಗಳು 2 ಸೀಟರ್‌ ಮತ್ತು ಯುದ್ಧ ವಿಮಾನಗಳು 1 ಸೀಟರ್‌ ಆಗಿರುತ್ತವೆ.

 

Follow Us:
Download App:
  • android
  • ios