Council election Ramanagar : ಜೆಡಿ​ಎಸ್‌, ಬಿಜೆ​ಪಿಗರಿಂದಲೂ ಕಾಂಗ್ರೆಸ್ ಅಭ್ಯರ್ಥಿಗೆ ಸಪೋರ್ಟ್

  •  ಜೆಡಿ​ಎಸ್‌ ಹಾಗೂ ಬಿಜೆಪಿ ಬೆಂಬ​ಲಿತ ಸದ​ಸ್ಯರು ಸಹ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.​ರ​ವಿ​ ಅವ​ರನ್ನೇ ಗೆಲ್ಲಿ​ಸಿ​ಕೊ​ಳ್ಳುವ ವಿಶ್ವಾ​ಸ​ವಿದೆ 
  •  ಕಾಂಗ್ರೆಸ್‌ ಸರ್ಕಾರ ಅಧಿ​ಕಾ​ರಕ್ಕೆ ಬರ​ಬೇಕು ಎಂಬ ಉದ್ದೇಶದಲ್ಲಿ ಸಪೋರ್ಟ್
JDS BJP Members also Supports Congress Candidate in Ramanagar  Says DK Suresh snr

 ರಾಮ​ನ​ಗ​ರ (ಡಿ.11): ಜಿಲ್ಲೆಯ ಭವಿ​ಷ್ಯದ ದೃಷ್ಟಿ​ಯಿಂದ ಜೆಡಿ​ಎಸ್‌ (JDS) ಹಾಗೂ ಬಿಜೆಪಿ (BJP) ಬೆಂಬ​ಲಿತ ಸದ​ಸ್ಯರು ಸಹ ಕಾಂಗ್ರೆಸ್‌ (Congress) ಅಭ್ಯರ್ಥಿ ಎಸ್‌.​ರ​ವಿ​ ಅವ​ರನ್ನೇ ಗೆಲ್ಲಿ​ಸಿ​ಕೊ​ಳ್ಳುವ ವಿಶ್ವಾ​ಸ​ವಿದೆ ಎಂದು ಸಂಸದ ಡಿ.ಕೆ.​ಸು​ರೇಶ್‌ (DK Suresh) ಪ್ರತಿ​ಕ್ರಿ​ಯಿ​ಸಿ​ದ​ರು.  ಜಿಲ್ಲಾ ಕೇಂದ್ರ ರಾಮ​ನ​ಗ​ರದ (Ramanagar) ನಗ​ರ​ಸ​ಭೆ​ಯಲ್ಲಿ  ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವ​ರು, ಮುಂದೆ ರಾಜ್ಯ​ದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿ​ಕಾ​ರಕ್ಕೆ ಬರ​ಬೇಕು ಎಂಬ ಉದ್ದೇಶದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ (DK Shivakumar) ಮತ್ತು ಸಿದ್ದ​ರಾ​ಮಯ್ಯ (Siddaramaiah) ಅವರ ಕೈ ಬಲ​ಪ​ಡಿ​ಸಲು ಅನ್ಯ ಪಕ್ಷ​ಗಳ ಬೆಂಬ​ಲಿತ ಸದ​ಸ್ಯರು ಸಹ ಕಾಂಗ್ರೆಸ್‌ (congress) ಅಭ್ಯರ್ಥಿ ಎಸ್‌.​ರ​ವಿ​ ಅ​ವ​ರನ್ನೇ ಬೆಂಬ​ಲಿ​ಸು​ವು​ದಾಗಿ ತಮ್ಮ ಬಳಿ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ್ದರು. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ವಿಶ್ವಾ​ಸ​ವಿದೆ ಎಂದರು.

ಅ​ಲ್ಲದೆ ಸ್ಥಳೀಯ ಸಂಸ್ಥೆ​ಗ​ಳ​ಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆ​ಯಲ್ಲಿ ಕಾಂಗ್ರೆಸ್‌ (congress) ಸದ​ಸ್ಯರು ಮತ್ತು ಕಾಂಗ್ರೆಸ್‌ ಬೆಂಬ​ಲಿತ ಸದ​ಸ್ಯರು ಹೆಚ್ಚಿನ ಸಂಖ್ಯೆ​ಯಲ್ಲಿ ಆಯ್ಕೆ​ಯಾ​ಗಿ​ದ್ದಾರೆ. ಇದು ಕೂಡ ರವಿ ಅವರ ಗೆಲು​ವಿಗೆ ಸಹ​ಕಾ​ರಿ​ಯಾ​ಗ​ಲಿದೆ ಎಂದು ಡಿಕೆ ಸುರೇಶ್ (DK Suresh ) ಹೇಳಿ​ದ​ರು.

ಎಲ್ಲಾ ಪಕ್ಷ​ಗಳು ತಮ್ಮ ಅಭ್ಯ​ರ್ಥಿ​ಯನ್ನು ಗೆಲ್ಲಿ​ಸಿ​ಕೊ​ಳ್ಳಲು ಪ್ರಯತ್ನ ಪಡು​ವುದು ತಪ್ಪೇನು ಅಲ್ಲ. ಅವ​ರೆಲ್ಲ ಅವರ ಪ್ರಯತ್ನ ಮಾಡಿ​ದ್ದಾರೆ. ನಾವು ಸಹ ಮತ​ದಾ​ರರ ವಿಶ್ವಾ​ಸ​ಗ​ಳಿ​ಸಲು ಪ್ರಯತ್ನ ಮಾಡಿ​ದ್ದೇವೆ. ಯಾರನ್ನೇ ಮತ ಕೇಳಿ​ದರು ರಾಜ್ಯ, ಜಿಲ್ಲೆಯ ಭವಿ​ಷ್ಯದ ದೃಷ್ಠಿ​ಯಿ​ಂದ ಕಾಂಗ್ರೆಸ್‌ ಬೆಂಬ​ಲಿ​ಸು​ವು​ದಾಗಿ ತಿಳಿ​ಸಿ​ದ್ದರು. ರಾಜ್ಯಕ್ಕೆ ಇದೊಂದು ಬದ​ಲಾ​ವ​ಣೆಯ ಕಾಲ ಎಂದರು.

ನಗ​ರ​ಸ​ಭೆ ಕಾಂಗ್ರೆಸ್‌ ಸದ​ಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಹಾಜ​ರಿ​ದ್ದರು.

 ಸಿಎಂಎಲ್‌ - ಸಿಪಿವೈ ಮತ​ದಾನ ವಂಚಿತರು:    ಬೆಂಗ​ಳೂರು ಗ್ರಾಮಾ​ಂತರ ಸ್ಥಳೀಯ ಸಂಸ್ಥೆ ಕ್ಷೇತ್ರ​ದಿಂದ ನಡೆದ ವಿಧಾನ ಪರಿ​ಷತ್‌ ಚುನಾ​ವಣೆಯಲ್ಲಿ ವಿಧಾನ ಪರಿ​ಷತ್‌ ಸದ​ಸ್ಯ​ರಾದ ಸಿ.ಎಂ.ಲಿಂಗಪ್ಪ ಮತ್ತು ಸಿ.ಪಿ.​ಯೋ​ಗೇ​ಶ್ವರ್‌ (CP Yogeshwar) ಮತ​ದಾ​ನ​ದಿಂದ ವಂಚಿ​ತ​ರಾ​ಗಿ​ದ್ದಾರೆ.

ಬಿಡದಿ ಪುರ​ಸಭೆಯಲ್ಲಿ ಸಿ.ಎಂ.​ಲಿಂಗಪ್ಪ ಮತ​ದಾ​ನದ ಹಕ್ಕು ಹೊಂದಿ​ದ್ದರು. ಆದರೆ, ಪುರ​ಸ​ಭೆಗೆ ಇನ್ನೂ ಚುನಾ​ವಣೆ ನಡೆ​ಯದ ಕಾರಣ ಲಿಂಗ​ಪ್ಪ​ರ​ವರು ಮತ​ದಾ​ನ​ ಮಾಡಲು ಆಗ​ಲಿಲ್ಲ. ಇನ್ನು ಚನ್ನ​ಪ​ಟ್ಟಣ ನಗ​ರ​ಸ​ಭೆ​ಯಲ್ಲಿ ಮತ​ದಾ​ನದ ಹಕ್ಕು ಇಲ್ಲ

ಜೆಡಿಎಸ್ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ ಜೆಡಿಎಸ್ ಮುಖಂಡರು  : 

 ಮಾಗಡಿ: ತಾಲೂಕಿನಲ್ಲೂ ಕೂಡ ಜೆಡಿಎಸ್‌ (JDS) ವಿಧಾನ ಪರಿಷತ್‌ ಅಭ್ಯರ್ಥಿ ರಮೇಶ್‌ ಗೌಡರವರ ಪರವಾಗಿ ಅಲೆಯಿದ್ದು, ಈ ಬಾರಿ ರಮೇಶ್‌ ಗೌಡರವರು ಬೆಂಗಳೂರು (Bengaluru) ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಎ.ಮಂಜುನಾಥ್‌ ಭವಿಷ್ಯ ನುಡಿದರು. ಪಟ್ಟಣದ ಪುರಸಭೆ ಮತಗಟ್ಟೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ  (BJP) ಸದಸ್ಯರ ಜೊತೆ ಬಂದು ಮತ ಚಲಾಯಿಸಿ ಮಾತನಾಡಿದ ಅವರು, ಪುರಸಭೆಯ 14 ಮತಗಳು ಕೂಡ ರಮೇಶ್‌ ಗೌಡ (Ramesh Gowda) ರವರ ಪರವಾಗಿ ಚಲಾವಣೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಪರವಾಗಿ ಒಲವಿದ್ದು ಗೆಲ್ಲುವ ಸನಿಹದಲ್ಲಿದ್ದಾರೆ. ಇದರ ಜೊತೆಗೆ ಬಿಜೆಪಿ ಪಕ್ಷವು ಕೂಡ ನಮ್ಮ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದು, ಬೆಂಬಲ ಕೂಡ ಸೂಚಿಸಿದ್ದಾರೆ ಎಂದರು.

ವಿಶೇಷವಾಗಿ ಮಾಗಡಿ ತಾಲೂಕಿನಲ್ಲಿ ಮೊದಲಿನಿಂದಲೂ ಬಿಜೆಪಿ ಮತ್ತು ಜೆಡಿಎಸ್‌ ಜೊತೆ ಒಳ್ಳೆ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಉಸ್ತುವಾರಿ ಸಚಿವರಾದ ಡಾ.ಅಶ್ವತ್‌ ನಾರಾಯಣ ರವರು ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಕಳೆದ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವು.

ಒಂದು ವರ್ಷಗಳ ಕಾಲ ಅಧಿಕಾರವನ್ನು ಒಂದು ಸದಸ್ಯರಿದ್ದರು ಕೂಡ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಉತ್ತಮ ಆಡಳಿತಕ್ಕೆ ಬೆಂಬಲ ಕೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ತಾಲೂಕಿನ ಅಭಿವೃದ್ಧಿಗಾಗಿ ಜೊತೆಯಲ್ಲಿದ್ದು, ಸರ್ಕಾರದ ಜೊತೆ ನಾವು ಇದ್ದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆಂಬ ವಿಚಾರವಾಗಿ ಮಾತ್ರ ಒಡಂಬಡಿಕೆ ಸೂತ್ರ ಮಾಡಿಕೊಂಡಿದ್ದೇವೆಂದು ತಿಳಿಸಿದರು.

Latest Videos
Follow Us:
Download App:
  • android
  • ios