Asianet Suvarna News Asianet Suvarna News

ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ಆದಾಯ ಮೀರಿದ ಸಂಪತ್ತಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಇ.ಡಿ ವಿಚಾರಣೆ ಎದುರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್‌ ನಿವಾ​ಸದ ಮೇಲೆ ಬುಧವಾರ ದಿಢೀರ್‌ ದಾಳಿ ನಡೆಸಿ, ಆಸ್ತಿ ವಿವರಗಳನ್ನು ಕಲೆ ಹಾಕಿದ ಸಿ​ಬಿ​ಐ

CBI Raid on DK Shivakumar during Bharat Jodo Yatra grg
Author
First Published Sep 29, 2022, 5:38 AM IST

ರಾಮನಗರ(ಸೆ.29):  ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ನೇತೃ​ತ್ವ​ದ ಭಾರತ್‌ ಜೋಡೋ ಯಾತ್ರೆ ಕರ್ನಾ​ಟಕ ಪ್ರವೇ​ಶಿ​ಸುತ್ತಿರುವ ಹೊತ್ತಿನಲ್ಲೇ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಶಾಕ್‌ ನೀಡಿದೆ. ಆದಾಯ ಮೀರಿದ ಸಂಪತ್ತಿನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆ ಎದುರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್‌ ಅವರ ನಿವಾ​ಸದ ಮೇಲೆ ಸಿ​ಬಿ​ಐ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ, ಆಸ್ತಿ ವಿವರಗಳನ್ನು ಕಲೆ ಹಾಕಿದ್ದಾರೆ.

ಕನ​ಕ​ಪು​ರಕ್ಕೆ ಬೆಳಗ್ಗೆ 10 ರಿಂದ 11 ಗಂಟೆ ವೇಳೆಗೆ ಆಗ​ಮಿ​ಸಿದ ಸಿಬಿ​ಐನ ಏಳರಿಂದ ಎಂಟು ಮಂದಿ ಇದ್ದ ಅಧಿ​ಕಾ​ರಿ​ಗಳ ತಂಡ ತಹ​ಸೀ​ಲ್ದಾರ್‌ ವಿಶ್ವ​ನಾಥ್‌ ಅವ​ರೊಂದಿಗೆ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಮನೆ, ಜಮೀನು ಮತ್ತಿ​ತ​ರ​ರ ಸ್ಥಳ​ಗ​ಳಿಗೆ ಭೇಟಿ ನೀಡಿ ದಾಖ​ಲೆ​ಗ​ಳನ್ನು ಪರಿ​ಶೀ​ಲನೆ ನಡೆಸಿ ವಶಕ್ಕೆ ಪಡೆ​ದು​ಕೊಂಡಿ​ದೆ.

Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!

ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಕನ​ಕ​ಪುರ ನಗರದ ಮೈಸೂರು ರಸ್ತೆ​ಯ​ಲ್ಲಿ​ ಹೆಂಚಿನ ಫ್ಯಾಕ್ಟರಿ ಬಳಿ​ಯಿರುವ ಮನೆ, ದೊಡ್ಡಾ​ಲ​ಹಳ್ಳಿಯ ಹಳೇ ಮನೆ ಹಾಗೂ ಸಂತೆ ಕೋಡಿ​ಹಳ್ಳಿಯಲ್ಲಿ​ ಫಾಮ್‌ರ್‍ ಹೌಸ್‌ ಹಾಗೂ ಜಮೀನು ಮತ್ತಿ​ತರ ಸ್ಥಳ​ಗ​ಳಿಗೆ ಸಿಬಿಐ ​ಅ​ಧಿ​ಕಾ​ರಿ​ಗ​ಳು ಭೇಟಿ ನೀಡಿದರು.

ದೆಹಲಿ ತಲುಪಿದ ಸಿಎಂ ಗೆಹ್ಲೋಟ್‌, ಇತ್ತ ಸಹೋದರನ ಮನೆ ಮೇಲೆ ಸಿಬಿಐ ದಾಳಿ!

ಡಿ.ಕೆ.ಶಿವಕುಮಾರ್‌ ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಜಿಲ್ಲೆ​ಯ ಬೇರೆಡೆ ಡಿ.ಕೆ.ಶಿವಕುಮಾರ್‌, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರ ಹೆಸ​ರಿ​ನಲ್ಲಿರುವ ಭೂ ದಾಖಲೆಗಳ ಬಗ್ಗೆಯೂ ತಹಸೀಲ್ದಾರ್‌ ಅವರಿಂದ ಮಾಹಿತಿ ಪಡೆ​ದು​ಕೊಂಡರು ಎನ್ನಲಾಗಿದೆæ. ಪೊಲೀ​ಸರು ಸೇರಿ​ ಯಾರಿಗೂ ಮಾಹಿತಿ ನೀಡದೆ ದಾಳಿ ನಡೆ​ಸಿ​ರುವ ಸಿಬಿಐ ಅಧಿ​ಕಾ​ರಿ​ಗಳು ಮಧ್ಯಾಹ್ನ 3.30ರವ​ರೆಗೂ ದಾಖ​ಲೆ​ಗಳ ಪರಿಶೀಲನೆ ನಡೆಸಿದ್ದಲ್ಲದೆ, ಗೌಪ್ಯವಾಗಿಯೇ ಮಾಹಿತಿ ಕಲೆ ಹಾಕಿ ವಾಪ​ಸಾದರು.

ಈಗಾಗಲೇ ಅಕ್ರಮ ಹಣ ವರ್ಗಾವಣೆ, ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರು ಆರೋಪಿಯಾಗಿದ್ದು, ಸದ್ಯ ಜಾಮೀನು ಮೇಲಿದ್ದಾರೆ.

ಶಾಕ್‌ ಮೇಲೆ ಶಾಕ್‌

- ಇತ್ತೀಚೆಗಷ್ಟೇ ಇ.ಡಿ. ವಿಚಾರಣೆಗೆ ಹಾಜರಾಗಿ ಬಂದಿದ್ದ ಡಿಕೆಶಿ
- ಈ ಹಿಂದೆಯೂ ತೆರಿಗೆ, ಸಿಬಿಐ, ಇ.ಡಿ. ದಾಳಿ ಎದುರಿಸಿದ್ದರು
- ತಹಶೀಲ್ದಾರ್‌ ಜೊತೆ ಬಂದು ಆಸ್ತಿ ದಾಖಲೆ ಸಂಗ್ರಹಿಸಿದ ಸಿಬಿಐ
- ಕನಕಪುರದ ಮನೆಗೆ ಬೆಳಿಗ್ಗೆ 10 ಗಂಟೆಗೆ 7-8 ಅಧಿಕಾರಿಗಳ ದಾಳಿ
- ನಂತರ ಡಿಕೆಶಿಯ ಇತರ ಮನೆ, ಫಾಮ್‌ರ್‍ಹೌಸ್‌, ಜಮೀನಿಗೆ ಭೇಟಿ
- ಸಂಬಂಧಿಕರ ಹೆಸರಿನಲ್ಲಿರುವ ಭೂದಾಖಲೆ ಬಗ್ಗೆಯೂ ವಿವರ ಸಂಗ್ರಹ
- ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು
 

Follow Us:
Download App:
  • android
  • ios